Advertisment

BBK11: ಮೊದಲ ಬಾರಿ ಬಿಗ್ ಬಾಸ್ ಕನ್ನಡದ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಿಚ್ಚ ಸುದೀಪ್‌; ಹೇಳಿದ್ದೇನು?

author-image
admin
Updated On
ಮ್ಯಾಕ್ಸ್ ಸಿನಿಮಾ ಅಮ್ಮನಿಗೆ ತೋರಿಸಬೇಕಿತ್ತು.. ಮಾತಾಡುವಾಗ ಕಿಚ್ಚ ಸುದೀಪ್ ಭಾವುಕ
Advertisment
  • ಬಿಗ್‌ ಬಾಸ್‌ ಬಗ್ಗೆ ನನಗೆ ಅನ್ನಿಸಿದ್ದನ್ನು ನಾನು ಹೇಳುತ್ತಿದ್ದೇನೆ ಎಂದ ಸುದೀಪ್
  • ಹಿಂದಿ, ತೆಲುಗು, ತಮಿಳು ಭಾಷೆಯ ಬಿಗ್ ಬಾಸ್ ಶೋಗಳನ್ನ ನೋಡಿದರೆ..
  • ಮ್ಯಾಕ್ಸ್ ಸಿನಿಮಾ ಪ್ರಮೋಷನ್‌ ಮಧ್ಯೆ ಮುಕ್ತವಾಗಿ ಮಾತಾಡಿದ ಕಿಚ್ಚ

ಕನ್ನಡ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಸತತ 10 ಸೀಸನ್‌ಗಳಿಂದ ಕನ್ನಡ ಬಿಗ್ ಬಾಸ್ ಅನ್ನ ಕಿಚ್ಚ ಸುದೀಪ್‌ ಅವರೇ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸೀಸನ್ 11 ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಈಗಾಗಲೇ ಕಿಚ್ಚ ಸುದೀಪ್ ಅವರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡದ ಬಗ್ಗೆ ಕಿಚ್ಚ ಸುದೀಪ್ ಅವರ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

Advertisment

ಕಿಚ್ಚ ಸುದೀಪ್ ಅವರು ತಮ್ಮ ಮ್ಯಾಕ್ಸ್ ಸಿನಿಮಾ ಪ್ರಮೋಷನಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಪ್ರೀ ರಿಲೀಸ್ ಇವೆಂಟ್‌ಗೂ ಮುನ್ನ ಕಿಚ್ಚ ಸುದೀಪ್ ಅವರು ಸಂದರ್ಶನ ನೀಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಕಿಚ್ಚ ಸುದೀಪ್ ಅವರು ನೇರವಾಗಿ ಕನ್ನಡದ ಬಿಗ್ ಬಾಸ್ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕಿಚ್ಚ ಸುದೀಪ್ ಹೇಳಿದ್ದೇನು?
ಸಂದರ್ಶನದಲ್ಲಿ ಮಾತನಾಡಿರುವ ಕಿಚ್ಚ ಸುದೀಪ್ ಅವರು ಕನ್ನಡದ ಬಿಗ್ ಬಾಸ್‌ ಬಗ್ಗೆ ನನಗೆ ಅನ್ನಿಸಿದ್ದನ್ನು ನಾನು ಹೇಳುತ್ತೇನೆ. ಇನ್ನು ಒಂಚೂರು ಇಂಪ್ರೂಮೆಂಟ್ ಆಗಬೇಕಿದೆ. ಹಿಂದಿ, ತೆಲುಗು, ತಮಿಳು ಹೀಗೆ ಬೇರೆ ಭಾಷೆಯ ಬಿಗ್ ಬಾಸ್ ಶೋಗಳನ್ನ ಅಕ್ಕ-ಪಕ್ಕದಲ್ಲಿ ಇಟ್ಟು ನೋಡಿದಾಗ ಕನ್ನಡದ ಬಿಗ್ ಬಾಸ್‌ನಲ್ಲಿ ಸ್ವಲ್ಪ ಕೊರತೆ ಕಾಣಿಸುತ್ತಿದೆ ಎಂದಿದ್ದಾರೆ.

ಬಿಗ್‌ ಬಾಸ್ ವೀಕ್ಷಕರು, ಟಿಆರ್‌ಪಿ ವಿಚಾರದಲ್ಲಿ ನಾನು ಹೇಳುತ್ತಿಲ್ಲ. ಬಿಗ್ ಬಾಸ್ ತಂಡದಲ್ಲಿ ಯಾರ್ ಯಾರಿದ್ದಾರೋ ಅವರು ಸ್ವಲ್ಪ ಬೇರೆ ರೀತಿಯಲ್ಲಿ ಆಲೋಚನೆ ಮಾಡಬೇಕು ಅಂತ ನನಗೆ ಅನ್ನಿಸುತ್ತಾ ಇದೆ. ಕನ್ನಡದ ಬಿಗ್ ಬಾಸ್ ಇನ್ನೂ ಚೆನ್ನಾಗಿ ಆಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

Advertisment

ಇದನ್ನೂ ಓದಿ: 10+1 ಸೀಸನ್.. ಬಿಗ್​​ಬಾಸ್​ಗೆ ದಿಢೀರ್‌ ಗುಡ್​​ ಬೈ ಹೇಳಿದ್ದೇಕೆ ಕಿಚ್ಚ ಸುದೀಪ್‌? 10 ಕಾರಣಗಳು ಇಲ್ಲಿವೆ! 

ಕಳೆದ ಅಕ್ಟೋಬರ್ 13ರಂದು ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾ X ನಲ್ಲಿ ಟ್ವೀಟ್ ಮಾಡಿ ಬಿಗ್​ಬಾಸ್ 11ನೇ ಸೀಸನ್​ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಹೇಳಿದ್ದರು.

ಸುದೀಪ್ ವಿದಾಯದ ಟ್ವೀಟ್‌! 
ಬಿಗ್​​ಬಾಸ್ ಸೀಸನ್ 11ಕ್ಕೆ ನೀವೆಲ್ಲಾ ತೋರಿರೋ ರೆಸ್ಪಾನ್ಸ್​ಗೆ ಥ್ಯಾಂಕ್ಸ್​. ಈ ಶೋಗೆ ಮತ್ತು ನನಗೆ ನೀವೆಲ್ಲರೂ ತೋರಿದ ಪ್ರೀತಿ ಎಂಥಾದ್ದು ಅಂತಾ ಟಿವಿಆರ್​ ನಂಬರ್​ಗಳೇ ಹೇಳುತ್ತಿವೆ. 10+1 ವರ್ಷಗಳ ಉತ್ತಮ ಪ್ರಯಾಣವಿದು. ಹಾಗೆಯೇ ನಾನು ಮುಂದೇನು ಮಾಡ್ಬೇಕು ಅನ್ನೋದನ್ನ ನಿರ್ಧರಿಸಲು ಸರಿಯಾದ ಸಮಯ. ಬಿಗ್ ಬಾಸ್‌ ಶೋನ ನಿರೂಪಕನಾಗಿ ಇದು ನನ್ನ ಕೊನೇ ಸೀಸನ್. ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ವಾಹಿನಿ, ಇಷ್ಟು ವರ್ಷಗಳಿಂದ ಬಿಗ್ ಬಾಸ್ ಶೋ ಫಾಲೋ ಮಾಡುತ್ತಿರುವವರು ಗೌರವಿಸುತ್ತಾರೆ ಅಂತಾ ನಂಬಿದ್ದೇನೆ. ಈ ಸೀಸನ್​ನ ಸೂಪರ್ ಆಗಿ ಮಾಡೋಣ. ನಾನೂ ಕೂಡ ನಿಮ್ಮನ್ನ ರಂಜಿಸಲು ಮರೆಯಲ್ಲ.
ಕಿಚ್ಚ ಸುದೀಪ್

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment