/newsfirstlive-kannada/media/post_attachments/wp-content/uploads/2024/10/Keerti-Dharmaraj.jpg)
Bigg Boss Kannada: ಕಿಚ್ಚ ನಿರೂಪಣೆಯ ರಿಯಾಲಿಟಿ ಶೋ ಬಿಗ್​ ಬಾಸ್​ ಪ್ರಾರಂಭವಾಗಿ ಮೂರು ವಾರಗಳು ಕಳೆದು ಮುನ್ನುಗ್ಗುತ್ತಿದೆ. ಸ್ಪರ್ಧಿಗಳು ವೀಕ್ಷಕರನ್ನೇ ತಲೆಕೆಳಗಾಗುವಂತೆ ಕಂಟೆಂಟ್​​ ಕೊಡುತ್ತಿದ್ದಾರೆ. ಕೆಲವೊಂದು ಕಂಟೆಂಟ್​ಗಳು ಹಾಸ್ಯದಿಂದ ಕೂಡಿದ್ದರೆ, ಇನ್ನು ಕೆಲವು ಗಂಭೀರವಾಗಿರುತ್ತದೆ. ಇದರ ನಡುವೆ ಮನೆಯ ಗಲಾಟೆ ವೀಕ್ಷಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಬಿಗ್​ ಬಾಸ್​ನಲ್ಲಿ ಈ ಬಾರಿ ಲಾಯರ್​ ಜಗದೀಶ್​​ ಸಾಕಷ್ಟು ಕಂಟೆಂಟ್​ ನೀಡಿದ್ದಾರೆ. ಒಂದು ಬಾರಿ ಸಂತೋಷದಿಂದ ಇದ್ದರೆ, ಇನ್ನೊಂದು ಬಾರಿ ಜಗಳಕ್ಕಿಳಿದಿರುತ್ತಾರೆ. ಆದರೆ ಇಂದಿನ ಪ್ರೊಮೋದಲ್ಲಿ ಲಾಯರ್​ ಜಗದೀಶ್​ ಮನೆಯ ಸ್ಪರ್ಧಿಗಳ ಕಾಲೆಯುತ್ತಿದ್ದಂತೆ ಕಂಡಿದೆ.
ಐಶ್ವರ್ಯಾ, ಕೀರ್ತಿ ಧರ್ಮರಾಜ್​, ಧನ್​ರಾಜ್​ ಆಚಾರ್​, ಗೋಲ್ಡ್​ ಸುರೇಶ್​ ಒಂದೇ ಸೋಫಾ ಮೇಲೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಎದರಿದ್ದ ಸೋಫಾದಲ್ಲಿ ಕುಳಿತ್ತಿದ್ದ ಲಾಯರ್​ ಜಗದೀಶ್​​ರವರು ಐಶ್ವರ್ಯಾ ಮತ್ತು ಕೀರ್ತಿಯತ್ತ ಮುಖ ಸನ್ನೆ ಮಾಡುತ್ತಾರೆ. ಇದಕ್ಕೆ ನಾಚಿ ನೀರಾದ ಐಶ್ವರ್ಯಾ ‘ನಾನು ದೇವರಾಣೆ ಈ ಆಟಕ್ಕಿಲ್ಲ’ ಎಂದು ಹೇಳಿದ್ದಾರೆ.
ಹುಳ ಬಿಡು, ಮಜಾ ಮಾಡು!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/u3arU7Hfes
— Colors Kannada (@ColorsKannada)
ಹುಳ ಬಿಡು, ಮಜಾ ಮಾಡು!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/u3arU7Hfes— Colors Kannada (@ColorsKannada) October 17, 2024
">October 17, 2024
ಕೀರ್ತಿ ಧರ್ಮರಾಜ್​ ಕೂಡ ಈ ಕುರಿತು ಮಾತನಾಡಿದ್ದು, ಜಗದೀಶ್​ ಬಳಿ ‘ನೀವು ಯಾರನ್ನಾದ್ರು ನೋಡಿ ಬಿಡಿ ಸರ್​, ಒಂದೇ ಛತ್ರದಲ್ಲಿ ಮದ್ವೆಯಾಗೋಣ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: BBK11; ಲಾಯರ್​ ಜಗದೀಶ್​ಗೆ ಸೀರೆ ಕೊಡ್ತೀನಿ ಉಟ್ಕೋ ಎಂದ ಮಾನಸ.. ಬೈಗುಳಗಳ ಸುರಿಮಳೆ
ಅತ್ತ ಧನ್​ರಾಜ್​ ಆಚಾರ್​ ಬಳಿ ಲಾಯರ್​ ಜಗದೀಶ್​ ‘ತಮ್ಮ’ ಎಂದರೆ, ಗೋಲ್ಡ್​ ಸುರೇಶ್​ ಬಳಿ ‘ಪ್ರತಿಯೊಬ್ಬರನ್ನು ಟೆಸ್ಟ್​ ಮಾಡೋಕೆ ಹುಳ ಬಿಡುತ್ತೇವೆ’ ಎಂದು ಹೇಳಿದ್ದಾರೆ.
ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಜಗದೀಶ್​ ಸಖತ್ತಾಗಿ ಮೈಂಡ್​ ಗೇಮ್​ ಆಡುವಂತೆ ಕಾಣಿಸುತ್ತಿದೆ. ಜೊತೆಗೆ ಕಂಟೆಂಟ್​​ ಕೊಡುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us