Advertisment

ಮತ್ತೆ ಬಿಗ್ ಬಾಸ್​ ಮನೆಯಲ್ಲಿ ಬಿಗ್​ ಫೈಟ್​.. ತ್ರಿವಿಕ್ರಮ್​ಗೆ ಗೋಮುಖ ವ್ಯಾಘ್ರ ಎಂದ ಮೋಕ್ಷಿತಾ!

author-image
AS Harshith
Updated On
ಮತ್ತೆ ಬಿಗ್ ಬಾಸ್​ ಮನೆಯಲ್ಲಿ ಬಿಗ್​ ಫೈಟ್​.. ತ್ರಿವಿಕ್ರಮ್​ಗೆ ಗೋಮುಖ ವ್ಯಾಘ್ರ ಎಂದ ಮೋಕ್ಷಿತಾ!
Advertisment
  • ಮೋಕ್ಷಿತಾ ಮತ್ತು ತ್ರಿವಿಕ್ರಮ್​​ ನಡುವೆ ಬಿಗ್​ ವಾರ್​
  • ಇಬ್ಬರ ನಡುವೆ ಕಿಡಿ ಹೊತ್ತಿಸುವ ಕೆಲಸ ಮಾಡಿದ್ರಾ ಮಂಜು?
  • ನೋಡೋ ಬಿಡ್ತೀನಿ, ಇವತ್ತಿನಿಂದ ಆಟ ಶುರು ಎಂದ ನಟಿ

ಬಿಗ್​​ಬಾಸ್​​​ ಮನೆಯಲ್ಲಿ ಸ್ಪರ್ಧಿಗಳಿಬ್ಬರ ನಡುವೆ ಕಿಚ್ಚು ಹೊತ್ತಿಕೊಂಡಿದೆ. ನಟ ತ್ರಿವಿಕ್ರಮ್​ ಮತ್ತು ನಟಿ ಮೋಕ್ಷಿತಾ ಪೈ ನಡುವೆ ಗಲಾಟೆ ಏರ್ಪಟ್ಟಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾರವರು ತಿವಿಕ್ರಮ್​​ಗೆ ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ.

Advertisment

ಹೌದು. ತ್ರಿವಿಕ್ರಮ್​ ಮತ್ತು ಮೋಕ್ಷಿತಾ ಈಗ ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ಅದರಲ್ಲೂ ತ್ರಿವಿಕ್ರಮ್ ಆಡಿದ ಮಾತುಗಳು ಮೋಕ್ಷಿತಾ ಪೈ ಕಿವಿಗೆ ಬಿದ್ದಿದ್ದು, ಇದೇ ವಿಚಾರವಾಗಿ ಜಗಳಕ್ಕಿಳಿದ್ದಾರೆ ಮೋಕ್ಷಿತಾ.

ಇದನ್ನೂ ಓದಿ: ಸಾವನ್ನಪ್ಪಿದ ಆತ್ಮೀಯ! 80kmನಿಂದ ಹುಡುಕಿಕೊಂಡು ಬಂದ 17 ಆನೆಗಳ ಹಿಂಡಿನ ಗ್ರೇಟ್​ ಸ್ಟೋರಿಯಿದು!

ಉಗ್ರಂ ಮಂಜು ಜೊತೆಗೆ ತ್ರಿವಿಕ್ರಮ್  ಮಾತನಾಡುತ್ತಾ,​ ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಮೋಕ್ಷಿತಾ ಕಿವಿಗೆ ಬಿದ್ದಿದ್ದು, ನಾನು 10 ವಾರ ಇರ್ತೀನಿ ಅಂತ ಡಿಸೈಡ್​ ಮಾಡೋಕೆ ಇವರು ಯಾರು? ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ತ್ರಿವಿಕ್ರಮ್​ ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದು ಹೇಳಿದ್ದಾರೆ.

Advertisment


">October 28, 2024

ಇದನ್ನೂ ಓದಿ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ.. ದಾಸನಿಗೆ ದೀಪಾವಳಿಯ ಗುಡ್​ನ್ಯೂಸ್​ ಸಿಗುತ್ತಾ?

ರೊಚ್ಚಿಗೆದ್ದ ಮೋಕ್ಷಿತಾ ಇಷ್ಟಕ್ಕೆ ಸುಮ್ಮನಾಗದೆ, ನಾವೆಲ್ಲಾ ಇಲ್ಲಿ ಏನು ಅಲ್ಲ. ಯಾವುದೋ ಒಂದು ಸೀರಿಯಲ್​ ಐದುವರೆ ವರ್ಷ ಮಾಡಿಕೊಂಡು ಬಂದಿದ್ದೀವಿ ಸುಮ್ನೆ. ನೀವು ಏನು ಅಲ್ಲ ತಿಳಿದುಕೊಂಡುಬಿಡಿ. ನೀವು ಗೋಮುಖ ವ್ಯಾಘ್ರ ತರಹ ಆಟ ಆಡ್ತಾ ಇದ್ದೀರಾ. ಇವತ್ತಿಂದ ಆಟ ಶುರು ಎಂದು ಹೇಳಿದ್ದಾರೆ.

Advertisment

ಇತ್ತ ತ್ರಿವಿಕ್ರಮ್ ನಟಿ ಮೋಕ್ಷಿತಾ ಮಾತಿಗೆ ನೀವು ಏನು ತಿಳಿದುಕೊಂಡಿದ್ದೀರಾ ಅದನ್ನು ಸಾಭೀತು ಪಡಿಸುತ್ತೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment