newsfirstkannada.com

ಮಳೆ ಅವಾಂತರ ತಪ್ಪಿಸೋಕೆ BBMP ಹೊಸ ಮಾಸ್ಟರ್​ ಪ್ಲಾನ್​; ಏನದು ಗೊತ್ತಾ?

Share :

Published May 6, 2024 at 6:29am

    ಮರ ಬೀಳಲಿ, ನೀರು ತುಂಬಲಿ ಬರ್ತಾರೆ ಅಧಿಕಾರಿಗಳು

    ಜೋನ್​ ಮಟ್ಟದಲ್ಲಿ ಸೇವೆ ನೀಡಲು ಬಿಬಿಎಂಪಿ ಸಿದ್ಧತೆ

    ಪ್ರತ್ಯೇಕ ಕಂಟ್ರೋಲ್​ ರೂಂ ಸಿದ್ದ, ಸಹಾಯಾವಣಿ ರೆಡಿ

ಬೆಂಗಳೂರು: ವರುಣನ ಅವಕೃಪೆಗೆ ಗುರಿಯಾಗಿರುವ ಸಿಟಿಯಲ್ಲಿ ಜನ ಮಳೆ ಬಂದ್ರೆ ಸಾಕಪ್ಪಾ ಅಂತಿದ್ದಾರೆ. ಆದ್ರೆ ರಾಜಧಾನಿಯಲ್ಲಿ ಮಳೆ ಬಂದ್ರೆ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಬಿರುಬಿಸಿಲಿಗೆ ಕಾದ ಕುಲುಮೆಯಂತಾಗಿರುವ ಸಿಲಿಕಾನ್ ಸಿಟಿ ವರುಣನ ಸ್ಪರ್ಷಕ್ಕೆ ಎದುರು ನೋಡುತ್ತಿದೆ.

ಈ ಮಧ್ಯೆ ಪ್ರೀ ಮಾನ್ಸೂನ್ ಅಲ್ಲಿ ಮಳೆರಾಯನ ಅಬ್ಬರ ಜೋರಾಗಿಯೇ ಇದೆ ಅಂತ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ ಹೂಳೆತ್ತುವ ಕೆಲಸ ಅಂಡರ್ ಪಾಸ್ ನಿರ್ವಹಣೆಯ ಕೆಲಸ ಚುರುಕಿನಿಂದ ಸಾಗ್ತಿದೆ. ಜಲ ಮಂಡಳಿ ಫೈರ್ ಇಂಜಿನ್ ಡಿಪಾರ್ಟ್ಮೆಂಟ್ ಬೆಸ್ಕಾಂ ಅಧಿಕಾರಿಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತರು ಕೂಡ ಸಭೆ ನಡೆಸಿದ್ದು, ಮಳೆಗಾಲದಲ್ಲಿ ಸಮನ್ವಯತೆಯಿಂದ ಕೆಲಸ ಮಾಡುವ ಭರವಸೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಲೋಕಾರ್ಪಣೆ ಬಳಿಕ ರಾಮಮಂದಿರಕ್ಕೆ ಭೇಟಿದ ನೀಡಿದ ಪ್ರಧಾನಿ.. ಶ್ರೀರಾಮನ ಬಳಿ ಮೋದಿ ಕೇಳಿಕೊಂಡಿದ್ದು ಏನು?

ಜನ ಸಾಮಾನ್ಯರು ರಾಜಕಾಲುವೆಗೆ ತುಂಬುತ್ತಿರುವ, ಬೇಡದ ತ್ಯಾಜ್ಯಗಳೇ ಪಾಲಿಕೆಯ ಅಧಿಕಾರಿಗಳಿಗೆ ತಲೆಬಿಸಿಯಾಗಿದೆ.  ಸ್ವಚ್ಛಗೊಳಿಸಿದಷ್ಟು ಬೇಕಾ ಬಿಟ್ಟಿಯಾಗಿ ಜನ ರಾಜ ಕಾಲುವೆಗೆ ಏನೇನೋ ತುಂಬ್ತಾ ಇದ್ದಾರಂತೆ. ಒಂದು ರೆಂಟೆಡ್ ಬೈಕ್ ಕೂಡ ರಾಜ ಕಾಲುವೆ ಸ್ವಚ್ಛಗೊಳಿಸುವಾಗ ಅಧಿಕಾರಿಗಳಿಗೆ ಸಿಕ್ಕಿದ್ದು ಹುಬ್ಬೇರಿಸುತ್ತಿದ್ದಾರೆ. ದಯವಿಟ್ಟು ಲೋಕಲ್ ಫ್ಲಡಿಂಗ್ ಆಗಲು ಅವಕಾಶ ಕೊಡಬೇಡಿ ಅಂತ ಮನವಿ ಮಾಡಿ ಕೊಂಡಿದ್ದಾರೆ.

ಮಳೆ ಸಮಸ್ಯಗೆ ಮಾಸ್ಟರ್​ ಪ್ಲಾನ್​

ಈ ಬಾರಿ ಮಳೆಗಾಲದಲ್ಲಿ ಜನರಿಗೆ 24/7 ಸಮಸ್ಯೆ ಆಲಿಸಲು ಜೋನ್ ವೈಸ್ ಟೀಂ ಸೆಟ್ ಮಾಡಲಾಗಿದೆ. ಜೋನಲ್ ಕಮಿಷನರ್ ಅಧೀನದಲ್ಲಿ ಈ ಟೀಂ ಕಾರ್ಯ ನಿರ್ವಹಿಸುತ್ತದೆ. 3 ಪಾಳಿಯಲ್ಲಿ ಕಂಟ್ರೋಲ್ ರೂಂ ಅಲ್ಲಿ ಕೆಲಸ ಮಾಡಲಿದ್ದು, ಸದಾ ಕಾರ್ಯ ಪ್ರವೃತ್ತರಾಗಿರುತ್ತಾರೆ. ಸಹಾಯವಾಣಿಯಲ್ಲಿ ನಿರಂತರ ಸಹಾಯ ಮಾಡೋ ಕೆಲಸ ಮಾಡ್ತಾರೆ. ಮರ ಬೀಳಲಿ, ನೀರು ತುಂಬಲಿ ಎಲ್ಲಾ ಸಮಸ್ಯೆಗೂ ತಾತ್ಕಾಲಿಕ ಪರಿಹಾರ ಕೊಡ್ತಾರೆ. 859 ಕಿಮೀ ಪ್ರತೀ 3 ತಿಂಗಳು ರಾಜಕಾಲುವೆ ಕ್ಲೀನ್ ಮಾಡುವ ಟಾಸ್ಕ್ ಇಟ್ಟು ಕೊಂಡಿದ್ದು, ಒಂದು ಟಾಸ್ಕ್ ಮುಗಿದರೆ ಮತ್ತೆ ಸೈಕ್ಲಿಂಗ್ ತರ ಕ್ಲೀನಿಂಗ್ ಕೆಲಸ ರಿಪೀಟ್ ಆಗುತ್ತೆ. ಒಟ್ಟಿನಲ್ಲಿ ಮಳೆ ಬಂದಾಗ ಸಿಲಿಕಾನ್ ಸಿಟಿಯ ಮರ್ಯಾದೆ ಹರಾಜಾಗದೇ ಇರೋ ತರ ನೋಡಿ ಕೊಳ್ಳಲು ಪಾಲಿಕೆ ನಾನಾ ಕಸರತ್ತು ಮಾಡ್ತಿದೆ ಅಂತ ಹೇಳಿ ಕೊಳ್ತಿದೆ. ಆದರೆ ಬೆಂಗಳೂರಿನಲ್ಲಿ ಮಳೆ ಬಂದ ಮೇಲೆ ಅಸಲಿ ಚಿತ್ರಣ ಏನು ಅನ್ನೋದು ಗೊತ್ತಾಗೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ ಅವಾಂತರ ತಪ್ಪಿಸೋಕೆ BBMP ಹೊಸ ಮಾಸ್ಟರ್​ ಪ್ಲಾನ್​; ಏನದು ಗೊತ್ತಾ?

https://newsfirstlive.com/wp-content/uploads/2024/05/Bangalore-Rains-2-1.jpg

Load More