newsfirstkannada.com

T20 ವಿಶ್ವಕಪ್​ಗೆ ಮುನ್ನವೇ ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!

Share :

Published March 31, 2024 at 5:34pm

Update March 31, 2024 at 5:36pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್​​​​

  2024ರ ಟಿ20 ವಿಶ್ವಕಪ್​​​​ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ..!

  ಈ ಮುನ್ನವೇ ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ನಡೆಯಲಿರೋ 2024ರ ಟಿ20 ವಿಶ್ವಕಪ್​​​​ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಾಗಲೇ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರೋ ಈ ಐಸಿಸಿ ಮೆಗಾ ಟೂರ್ನಿಗೆ ಟೈಮ್​ ಟೇಬಲ್​ ಪ್ರಕಟವಾಗಿದೆ. ಏಪ್ರಿಲ್​ ಕೊನೆ ವಾರದಲ್ಲಿ ಟೂರ್ನಿಗಾಗಿ ಬಲಿಷ್ಠ ಟಿ20 ಪ್ರಕಟವಾಗಲಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್​​​​ ಹೊಸ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ.

ಹೌದು, ಭಾರತ ತಂಡದಲ್ಲಿ ಟಿ20 ವಿಶ್ವಕಪ್​ಗಾಗಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಅದರಲ್ಲೂ ಟೂರ್ನಿಯಿಂದ ಭಾರತದ ಸ್ಟಾರ್​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಅವರನ್ನು ಕೈಬಿಡಬಹುದು. ಇವರ ಬದಲಿಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಲ್​ರೌಂಡರ್​ ಶಿವಂ ದುಬೆ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

ಸದ್ಯ ನಡೆಯುತ್ತಿರೋ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​​​ ಕ್ಯಾಪ್ಟನ್ಸಿ ವಹಿಸಿಕೊಂಡಿರೋ ಹಾರ್ದಿಕ್​ ಪಾಂಡ್ಯ ಪ್ರದರ್ಶನ ನಿರಾಶಾದಾಯಕವಾಗಿದೆ. ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದಾರೆ. ಫಾರ್ಮ್‌ನಲ್ಲಿ ಇಲ್ಲದ ಕಾರಣ ಪಾಂಡ್ಯಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗೋದು ಡೌಟ್​ ಎನ್ನಲಾಗುತ್ತಿದೆ.

ಇನ್ನು, ಟಿ20 ವಿಶ್ವಕಪ್‌ಗೆ ಪಾಂಡ್ಯ ಬದಲಿಗೆ ಶಿವಂ ದುಬೆಗೆ ಸ್ಥಾನ ನೀಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಾರಣ ದುಬೆ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿರುವುದು. ಅದರಲ್ಲೂ ಶಿವಂ ದುಬೆ ಗುಜರಾತ್​ ಟೈಟನ್ಸ್​ ವಿರುದ್ಧ 220ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದು. ಶಿವಂ ದುಬೆ ಕೇವಲ 23 ಎಸೆತಗಳಲ್ಲಿ 51 ರನ್ ಗಳಿಸಿದ್ದು.

ಇದನ್ನೂ ಓದಿ: IPL 2024: ಕನ್ನಡಿಗ ಮಯಾಂಕ್​​​ ವಿರುದ್ಧ ಆಕ್ರೋಶ ಹೊರಹಾಕಿದ ಹೈದರಾಬಾದ್​ ಫ್ಯಾನ್ಸ್..​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 ವಿಶ್ವಕಪ್​ಗೆ ಮುನ್ನವೇ ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!

https://newsfirstlive.com/wp-content/uploads/2024/02/Rohit_Hardik_Test.jpg

Load More