newsfirstkannada.com

IPL 2024: ಕನ್ನಡಿಗ ಮಯಾಂಕ್​​​ ವಿರುದ್ಧ ಆಕ್ರೋಶ ಹೊರಹಾಕಿದ ಹೈದರಾಬಾದ್​ ಫ್ಯಾನ್ಸ್..​!

Share :

Published March 31, 2024 at 4:30pm

    ಸನ್​ರೈಸರ್ಸ್​ ಹೈದರಾಬಾದ್​​ಗೆ ಕೈಕೊಟ್ಟ ಕನ್ನಡಿಗ ಮಯಾಂಕ್​​

    ಕನ್ನಡಿಗ ಮಯಾಂಕ್​ ಅಗರ್ವಾಲ್​​ ವಿರುದ್ಧ ಫ್ಯಾನ್ಸ್​ ಆಕ್ರೋಶ!

    ಎಷ್ಟು ಚಾನ್ಸ್​ ಸಿಕ್ಕಿದ್ರೂ ಕಳಪೆ ಪ್ರದರ್ಶನ ಯಾಕೆ? ಎಂದು ಪ್ರಶ್ನೆ

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​, ಗುಜರಾತ್​ ಟೈಟನ್ಸ್​​​ ತಂಡಗಳು ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡವು ಬ್ಯಾಟಿಂಗ್​ ಆಯ್ದುಕೊಂಡಿದೆ. ಹೀಗಾಗಿ ಗುಜರಾತ್​​ ಬೌಲಿಂಗ್​​ ಮಾಡುತ್ತಿದೆ.

ಇನ್ನು, ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರ ಓಪನರ್​ ಆಗಿ ಬಂದ ಮಯಾಂಕ್​ ಅಗರ್ವಾಲ್​​​ ಮತ್ತೆ ಬ್ಯಾಟಿಂಗ್​ ಫೇಲ್ಯೂರ್​ ಆಗಿದ್ದಾರೆ. ಇಂದು ಕೂಡ ತಾನು ಎದುರಿಸಿ 17 ಬಾಲ್​ಗಳಲ್ಲಿ 2 ಫೋರ್​ ಸಮೇತ ಕೇವಲ 16 ರನ್​​ ಗಳಿಸಿದ್ದಾರೆ.

ಕೆಕೆಆರ್​​ ವಿರುದ್ಧ ಮೊದಲ ಪಂದ್ಯದಲ್ಲಿ 34 ಮತ್ತು ಮುಂಬೈ ಇಂಡಿಯನ್ಸ್​ ವಿರುದ್ಧ 2ನೇ ಮ್ಯಾಚ್​​ನಲ್ಲಿ ಕೇವಲ 11 ರನ್​ ಗಳಿಸಿದ್ದು ಹೇಳಿಕೊಳ್ಳುವ ಪ್ರದರ್ಶನವೇನು ನೀಡಿಲ್ಲ. ಹೀಗಾಗಿ ಮಯಾಂಕ್​ ಕ್ರಿಕೆಟ್​ ಕರಿಯರ್​ ಮುಗೀತಾ? ಅನ್ನೋ ಚರ್ಚೆಗಳು ಶುರುವಾಗಿದೆ.

2022ರ ಸೀಸನ್​​ನಲ್ಲಿ ಮಯಾಂಕ್​​ 270 ರನ್​ ಸಿಡಿಸಿದ್ದು, ಇದಕ್ಕೂ ಮುನ್ನ ನಡೆದಿದ್ದ 2021 ಐಪಿಎಲ್​ನಲ್ಲಿ ಕೇವಲ 196 ರನ್​ ಗಳಿಸಿದ್ರು. ಕಳೆದ ಮೂರು ವರ್ಷಗಳಿಂದ ಮಯಾಂಕ್​ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

ಮಯಾಂಕ್​​​ ಅಗರ್ವಾಲ್​ಗೆ ಎಷ್ಟು ಚಾನ್ಸ್​ ಸಿಕ್ಕಿದ್ರೂ ಮಿಸ್​ಯೂಸ್​ ಮಾಡಿಕೊಳ್ಳುತ್ತಾರೆ. ಅವರು ಒಂದು ರೀತಿ ಲಕ್ಕಿ ಪ್ಲೇಯರ್​ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನೊಂದಷ್ಟು ಜನ ಮಯಾಂಕ್​ ಟುಕ್​ ಟುಕ್​ ಪ್ಲೇಯರ್​​ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸತತ 2 ಸೋಲಿನ ಬಳಿಕ ಮುಂಬೈ ಇಂಡಿಯನ್ಸ್​ ಭರ್ಜರಿ ವರ್ಕೌಟ್​​​.. ಕ್ರಿಕೆಟ್​ನ ಟಾಪ್​-3 ಸ್ಟೋರಿಸ್ ಇಲ್ಲಿವೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2024: ಕನ್ನಡಿಗ ಮಯಾಂಕ್​​​ ವಿರುದ್ಧ ಆಕ್ರೋಶ ಹೊರಹಾಕಿದ ಹೈದರಾಬಾದ್​ ಫ್ಯಾನ್ಸ್..​!

https://newsfirstlive.com/wp-content/uploads/2024/03/Rohit_Mayank.jpg

Load More