newsfirstkannada.com

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ರಾಹುಲ್​ ದ್ರಾವಿಡ್​ಗೆ ಅವಮಾನ ಮಾಡಿದ ಜಯ್​ ಶಾ!

Share :

Published May 13, 2024 at 7:34pm

Update May 13, 2024 at 7:35pm

    ಇಂಡಿಯನ್​​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್

    ಐಸಿಸಿ ಮೆಗಾ ಟೂರ್ನಮೆಂಟ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ

    ಟಿ20 ವಿಶ್ವಕಪ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​!

ಇಂಡಿಯನ್​​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ನಡೆಯಲಿದೆ. ಈ ಐಸಿಸಿ ಮೆಗಾ ಟೂರ್ನಿಗೆ 15 ಸದಸ್ಯರನ್ನು ಒಳಗೊಂಡ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಜೂನ್​​ ತಿಂಗಳಲ್ಲಿ ಟಿ20 ವಿಶ್ವಕಪ್​ ನಡೆಯಲಿದ್ದು, ಈ ಮುನ್ನವೇ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ಗೆ ಬಿಸಿಸಿಐ ಬಿಗ್​ ಶಾಕ್​​​​ ನೀಡಿದೆ.

ಯೆಸ್​​, 2024ರ ಟಿ20 ವಿಶ್ವಕಪ್​ ಬಳಿಕ ಟೀಮ್​ ಇಂಡಿಯಾದ ಮುಖ್ಯ ಕೋಚ್​​ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಅಂತ್ಯವಾಗಲಿದೆ. ಹಾಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮುಖ್ಯ ಕೋಚ್‌ಗಾಗಿ ಹುಡುಕಾಟ ಶುರು ಮಾಡಿದೆ.

ಇನ್ನು, ಈ ಬಗ್ಗೆ ಮಾತಾಡಿರೋ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅಧಿಕಾರಾವಧಿ ಜೂನ್‌ವರೆಗೆ ಮಾತ್ರ ಇರಲಿದೆ. ಹೀಗಾಗಿ ನಾವು ಹೊಸ ಮುಖ್ಯ ಕೋಚ್​​ಗಾಗಿ ಅರ್ಜಿ ಆಹ್ವಾನ ಮಾಡಲಿದ್ದೇವೆ. ರಾಹುಲ್​​ ದ್ರಾವಿಡ್​ ಬೇಕಾದ್ರೆ ಮತ್ತೆ ಅರ್ಜಿ ಸಲ್ಲಿಕೆ ಮಾಡಬಹುದು. ಹೊಸ ಕೋಚ್ ಭಾರತೀಯ ಅಥವಾ ವಿದೇಶಿ ಎಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಇದು ಸೆಲೆಕ್ಷನ್ ಕ್ರಿಕೆಟ್​ ಅಡ್ವೈಸರಿ ಕಮಿಟಿಗೆ ಬಿಟ್ಟಿದ್ದು ಎಂದರು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿರುದ್ಧ ಟೀಮ್​ ಇಂಡಿಯಾ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಟೀಮ್​ ಇಂಡಿಯಾವನ್ನು ಕಟ್ಟುತ್ತಿರೋ ದ್ರಾವಿಡ್​ ಅವರನ್ನು ಮತ್ತೆ ಕೋಚ್​ ಆಗಿ ಆಯ್ಕೆ ಮಾಡದೆ ಹೊಸ ಕೋಚ್​​ ಹುಡುಕಾಟ ನಡೆಸುತ್ತಿದ್ದಾರೆ. ಇದು ದ್ರಾವಿಡ್​ಗೆ ಮಾಡುತ್ತಿರೋ ಅವಮಾನ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಆರ್​​​ಸಿಬಿಗೆ ಮತ್ತೊಂದು ಶಾಕ್​​.. ಪ್ಲೇ ಆಫ್​ಗೆ ಹೋಗಲು ಬೆಂಗಳೂರಿಗೆ ಕಂಟಕ ಆಗುತ್ತಾ ಹೈದರಾಬಾದ್​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ರಾಹುಲ್​ ದ್ರಾವಿಡ್​ಗೆ ಅವಮಾನ ಮಾಡಿದ ಜಯ್​ ಶಾ!

https://newsfirstlive.com/wp-content/uploads/2023/11/RAHUL_DRAVID-1.jpg

Load More