newsfirstkannada.com

ಆರ್​​​ಸಿಬಿಗೆ ಮತ್ತೊಂದು ಶಾಕ್​​.. ಪ್ಲೇ ಆಫ್​ಗೆ ಹೋಗಲು ಬೆಂಗಳೂರಿಗೆ ಕಂಟಕ ಆಗುತ್ತಾ ಹೈದರಾಬಾದ್​?

Share :

Published May 13, 2024 at 5:58pm

    ಪ್ಲೇ ಆಫ್​ಗೆ ಹೋಗೋ ಕನಸು ಕಂಡಿರೋ ಆರ್​​ಸಿಬಿಗೆ ಬಿಗ್​ ಶಾಕ್​​​

    ಆರ್​​ಸಿಬಿ ಪ್ಲೇ ಆಫ್​ಗೆ ಹೋಗಲು ಲಕ್ನೋ ತಂಡ ಸೋಲಬೇಕು..!

    ಪ್ಲೇ ಆಫ್​ಗೆ ಆರ್​​ಸಿಬಿಗೆ ಕಂಟಕವಾಗುತ್ತಾ ಹೈದರಾಬಾದ್​ ಟೀಮ್​​?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​​ ಮುಕ್ತಾಯ ಹಂತಕ್ಕೆ ಬಂದಿದೆ. ಐಪಿಎಲ್​ ಪ್ಲೇ ಆಫ್​ಗೆ ಹೋಗಲು ಕೆಕೆಆರ್​​, ರಾಜಸ್ತಾನ್​​ ರಾಯಲ್ಸ್​​ ಹೊರತುಪಡಿಸಿ ಹಲವು ತಂಡಗಳು ಇನ್ನೂ ರೇಸ್​ನಲ್ಲಿ ಇವೆ. ಸನ್​ರೈಸರ್ಸ್​ ಹೈದರಾಬಾದ್​ ಕೂಡ ಪ್ಲೇ ಆಫ್​ಗೆ ಹೋಗುವ ಅವಕಾಶ ಹೊಂದಿದೆ. ಆದ್ರೆ, ಪ್ಲೇ ಆಫ್​ ಕನ್ಫರ್ಮ್​ ಆಗಲು ಮುಂದಿನ 2 ಪಂದ್ಯಗಳಲ್ಲಿ ಒಂದಾದ್ರೂ ಗೆಲ್ಲಲೇಬೇಕಿದೆ.

ಇನ್ನು, ಸನ್​ರೈಸರ್ಸ್​ ಹೈದರಾಬಾದ್​ ತಂಡ ಎರಡಕ್ಕೆ ಎರಡು ಸೋತರೆ ಆರ್​​ಸಿಬಿ ಪ್ಲೇ ಆಫ್​ಗೆ ಹೋಗಲು ಇನ್ನಷ್ಟು ಸುಲಭವಾಗುತ್ತದೆ. ಹೈದರಾಬಾದ್​ ಟೀಮ್​ ಮುಂದಿನ 2 ಪಂದ್ಯಗಳನ್ನು ಗುಜರಾತ್​ ಟೈಟನ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ವಿರುದ್ಧ ಆಡಲಿದೆ.

ಪಂಜಾಬ್​ ಕಿಂಗ್ಸ್​​ ಈಗಾಗಲೇ ಪ್ಲೇ ಆಫ್​​ ರೇಸ್​ನಿಂದ ಹೊರಬಿದ್ದಿದೆ. ಆದ್ರೆ ಗುಜರಾತ್​ ತಂಡ ಇನ್ನೂ ಪ್ಲೇ ಆಫ್​ ರೇಸ್​ನಲ್ಲಿದ್ದು, ಭಾರೀ ಅಂತರದಿಂದ ಗೆಲ್ಲಬೇಕಿದೆ. ಹಾಗಾಗಿ ಹೈದರಾಬಾದ್​​​ 2 ಪಂದ್ಯ ಸೋತರೆ ಪ್ಲೇ ಆಫ್​ಗೆ ಹೋಗುವುದು ಬಹಳ ಕಷ್ಟ. ಆದ್ರೆ, ಒಂದು ಪಂದ್ಯ ಗೆದ್ದರೂ ಹೈದರಾಬಾದ್​ ಪ್ಲೇ ಆಫ್​​ ಕನ್ಫರ್ಮ್​​. ಆಗ ಆರ್​​ಸಿಬಿ ಪ್ಲೇ ಆಫ್​ ಚಾನ್ಸಸ್​ ಕಡಿಮೆ ಆಗಲಿದೆ.

ಹೈದರಾಬಾದ್​ ತಾನು ಆಡಿರೋ 12 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 4ನೇ ಸ್ಥಾನದಲ್ಲಿದೆ. ಆರ್​​ಸಿಬಿ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್​ ಟೇಬಲ್​​ನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು ಆರ್​​ಸಿಬಿ ರನ್​ ರೇಟ್​​ +0.387 ಇದೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​​ಸಿಬಿ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಪ್ಲೇ ಆಫ್​ಗೆ ಹೋಗೋ ಅವಕಾಶ ಇದೆ. ಒಂದು ವೇಳೆ ಚೇಸಿಂಗ್​ ಮಾಡಿದ್ರೂ ಇನ್ನೂ 11 ಬಾಲ್​ ಬಾಕಿ ಇರುವಂತೆ ಆರ್​​ಸಿಬಿ ಮ್ಯಾಚ್​​ ಗೆಲ್ಲಲೇಬೇಕು.

ಇದನ್ನೂ ಓದಿ: ಬೆಂಗಳೂರಿಗೆ ಕೆ.ಎಲ್​ ರಾಹುಲ್​ ಬಿಗ್​ ಶಾಕ್​​.. ಲಕ್ನೋ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಮತ್ತೊಂದು ಶಾಕ್​​.. ಪ್ಲೇ ಆಫ್​ಗೆ ಹೋಗಲು ಬೆಂಗಳೂರಿಗೆ ಕಂಟಕ ಆಗುತ್ತಾ ಹೈದರಾಬಾದ್​?

https://newsfirstlive.com/wp-content/uploads/2024/04/RCB-Today.jpg

Load More