newsfirstkannada.com

ಬೆಂಗಳೂರಿಗೆ ಕೆ.ಎಲ್​ ರಾಹುಲ್​ ಬಿಗ್​ ಶಾಕ್​​.. ಲಕ್ನೋ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ

Share :

Published May 13, 2024 at 5:08pm

    ಪ್ಲೇ ಆಫ್​ಗೆ ಹೋಗೋ ಕನಸು ಕಂಡಿರೋ ಆರ್​​ಸಿಬಿಗೆ ಬಿಗ್​ ಶಾಕ್​​​

    ಆರ್​​ಸಿಬಿ ಪ್ಲೇ ಆಫ್​ಗೆ ಹೋಗಲು ಲಕ್ನೋ ತಂಡ ಸೋಲಬೇಕು..!

    ಒಂದು ವೇಳೆ ಲಕ್ನೋ ತಂಡ 2 ಪಂದ್ಯ ಗೆದ್ರೆ ಆರ್​​ಸಿಬಿ ಕಥೆಯೇನು?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​​ ಮುಕ್ತಾಯ ಹಂತಕ್ಕೆ ಬಂದಿದೆ. ಐಪಿಎಲ್​ ಪ್ಲೇ ಆಫ್​ಗೆ ಹೋಗಲು ಕೆಕೆಆರ್​​, ರಾಜಸ್ತಾನ್​​ ರಾಯಲ್ಸ್​​ ಹೊರತುಪಡಿಸಿ ಹಲವು ತಂಡಗಳು ಇನ್ನೂ ರೇಸ್​ನಲ್ಲಿ ಇವೆ. ಕನ್ನಡಿಗ ಕೆ.ಎಲ್​ ರಾಹುಲ್​ ನಾಯಕತ್ವದ ಲಕ್ನೋ ಸೂಪರ್​ ಜೈಂಟ್ಸ್​ ತಂಡಕ್ಕೂ ಕೂಡ ಪ್ಲೇ ಆಫ್​ಗೆ ಹೋಗಲು ಅವಕಾಶ ಇದೆ. ಲಕ್ನೋ ಮಾಡಬೇಕಾದ ಕೆಲಸ ಮುಂದಿನ 2 ಪಂದ್ಯಗಳ ಗೆಲ್ಲೋದು ಅಷ್ಟೇ.

ಇನ್ನು, ಆರ್​​​ಸಿಬಿ ಪ್ಲೇ ಆಫ್​​ಗೆ ಹೋಗಲು ಲಕ್ನೋ ಸೂಪರ್​ ಜೈಂಟ್ಸ್​​ ತಂಡ ಒಂದು ಪಂದ್ಯ ಸೋಲಲೇಬೇಕಿದೆ. ಲಕ್ನೋ ಮುಂದಿನ ಎರಡು ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​​ ವಿರುದ್ಧ ಆಡಲಿದ್ದು, ಎರಡರಲ್ಲಿ ಒಂದು ಮ್ಯಾಚ್​ ಸೋಲಲೇಬೇಕಿದೆ. ಇಲ್ಲದೆ ಹೋದ್ರೆ ಆರ್​​​ಸಿಬಿ ಚೆನ್ನೈ ವಿರುದ್ಧ ಗೆದ್ದರೂ ಪ್ಲೇ ಆಫ್​ಗೆ ಹೋಗೋದು ಕಷ್ಟ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತಾನು ಆಡಿರೋ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್​ ಟೇಬಲ್​​ನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು ಆರ್​​ಸಿಬಿ ರನ್​ ರೇಟ್​​ +0.387 ಇದೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​​ಸಿಬಿ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಪ್ಲೇ ಆಫ್​ಗೆ ಹೋಗೋ ಅವಕಾಶ ಇದೆ. ಒಂದು ವೇಳೆ ಚೇಸಿಂಗ್​ ಮಾಡಿದ್ರೂ ಇನ್ನೂ 11 ಬಾಲ್​ ಬಾಕಿ ಇರುವಂತೆ ಆರ್​​ಸಿಬಿ ಮ್ಯಾಚ್​​ ಗೆಲ್ಲಲೇಬೇಕು.

ಆರ್​​ಸಿಬಿ ಮೊದಲರ್ಧ ಸೀಸನ್​​ನಲ್ಲಿ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು 7ರಲ್ಲಿ ಸೋತು ಕೊನೆ ಸ್ಥಾನದಲ್ಲಿ ಇತ್ತು. ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ ಆರ್​​ಸಿಬಿ ಬರೋಬ್ಬರಿ 5 ಪಂದ್ಯಗಳು ಸತತವಾಗಿ ಗೆದ್ದು ತನ್ನ ಪ್ಲೇ ಆಫ್​​ಗೆ ಹೋಗೋ ಚಾನ್ಸ್​ ಹೆಚ್ಚಿಸಿಕೊಂಡಿದೆ. ಆದ್ರೂ ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ ಲಕ್ನೋ ತಂಡದ ಕೈಯಲ್ಲಿದೆ.

ಇದನ್ನೂ ಓದಿ: ಆರ್​​​ಸಿಬಿ ಪ್ಲೇ ಆಫ್​​ಗೆ ಹೋಗಲು ಮಾಡಬೇಕಾದ ಕೆಲಸ ಇಷ್ಟೇ! ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೆಂಗಳೂರಿಗೆ ಕೆ.ಎಲ್​ ರಾಹುಲ್​ ಬಿಗ್​ ಶಾಕ್​​.. ಲಕ್ನೋ ಕೈಯಲ್ಲಿ ಆರ್​​ಸಿಬಿ ಪ್ಲೇ ಆಫ್​ ಭವಿಷ್ಯ

https://newsfirstlive.com/wp-content/uploads/2024/04/KL-Rahul_Faf.jpg

Load More