newsfirstkannada.com

ಆರ್​​​ಸಿಬಿ ಪ್ಲೇ ಆಫ್​​ಗೆ ಹೋಗಲು ಮಾಡಬೇಕಾದ ಕೆಲಸ ಇಷ್ಟೇ! ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

Share :

Published May 13, 2024 at 4:09pm

Update May 13, 2024 at 4:18pm

    ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿ ಟೀಮ್​​ಗೆ ಇದೆ ಸುವರ್ಣಾವಕಾಶ!

    ಆರ್​ಸಿಬಿ ಮಾಡಬೇಕಿರೋ ಕೆಲಸ, ಉಳಿದ ಒಂದು ಪಂದ್ಯ ಗೆಲ್ಲೋದು

    ಜತೆಗೆ ಚೆನ್ನೈ, ಹೈದರಾಬಾದ್​ ಟೀಮ್​​​​ ಎಲ್ಲಾ ಪಂದ್ಯಗಳು ಸೋಲುವುದು

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನದಲ್ಲಿದ್ದ ಆರ್​​ಸಿಬಿ 5ನೇ ಸ್ಥಾನಕ್ಕೆ ಜಿಗಿದಿದೆ. ನೆಟ್​ ರನ್​​ ರೇಟ್​ ಭಾರೀ ಸುಧಾರಣೆ ಕಂಡಿದ್ದು, ಸಿಎಸ್​ಕೆ ವಿರುದ್ಧ ಗೆದ್ದರೆ ಪ್ಲೇ ಆಫ್​ಗೆ ಆರ್​​​ಸಿಬಿ ಹೋಗೋದು ಕನ್ಫರ್ಮ್​ ಆಗಿದೆ.

ಪ್ಲೇ ಆಫ್​​ಗೆ ಹೋಗಲು ಆರ್​​​ಸಿಬಿ ಏನು ಮಾಡಬೇಕು?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತಾನು ಆಡಿರೋ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್​ ಟೇಬಲ್​​ನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು ಆರ್​​ಸಿಬಿ ರನ್​ ರೇಟ್​​ +0.387 ಇದೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​​ಸಿಬಿ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಒಂದು ವೇಳೆ ಚೇಸಿಂಗ್​ ಮಾಡಿದ್ರೂ ಇನ್ನೂ 11 ಬಾಲ್​ ಬಾಕಿ ಇರುವಂತೆ ಆರ್​​ಸಿಬಿ ಮ್ಯಾಚ್​​ ಗೆಲ್ಲಲೇಬೇಕು.

ಆರ್​​ಸಿಬಿ ಮೊದಲರ್ಧ ಸೀಸನ್​​ನಲ್ಲಿ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು 7ರಲ್ಲಿ ಸೋತು ಕೊನೆ ಸ್ಥಾನದಲ್ಲಿ ಇತ್ತು. ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ ಆರ್​​ಸಿಬಿ ಬರೋಬ್ಬರಿ 5 ಪಂದ್ಯಗಳು ಸತತವಾಗಿ ಗೆದ್ದು ತನ್ನ ಪ್ಲೇ ಆಫ್​​ಗೆ ಹೋಗೋ ಚಾನ್ಸ್​ ಹೆಚ್ಚಿಸಿಕೊಂಡಿದೆ.

ಇದನ್ನೂ ಓದಿ: ಪ್ಲೇ ಆಫ್​ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್​ಸಿಬಿ ಎಷ್ಟು ರನ್​ಗಳಿಂದ ಗೆಲ್ಲಬೇಕು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿ ಪ್ಲೇ ಆಫ್​​ಗೆ ಹೋಗಲು ಮಾಡಬೇಕಾದ ಕೆಲಸ ಇಷ್ಟೇ! ಫ್ಯಾನ್ಸ್​ ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/05/RCB_Play-off.jpg

Load More