ಟೀಮ್ ಇಂಡಿಯಾದಲ್ಲಿ ಸೂಪರ್ ಸ್ಟಾರ್ಗಳಿಗೆ ರಾಜಾತಿಥ್ಯ
ಕೋಟಿ-ಕೋಟಿ ವೇತನ.. ವಿಶ್ರಾಂತಿಯ ಮೇಲೆ ವಿಶ್ರಾಂತಿ
A+ ಗ್ರೇಡ್ನಲ್ಲಿ ವೇತನ..! ಸರಣಿಯಿಂದ ಸರಣಿಗೆ ವಿಶ್ರಾಂತಿ..!
ಟೀಮ್ ಇಂಡಿಯಾ ಸೂಪರ್ ಸ್ಟಾರ್ಗಳಿಗೆ ಕೋಟಿ ಕೋಟಿ ವೇತನ ಮಾತ್ರ ಸಿಗ್ತಿಲ್ಲ. ರಾಜಾತಿಥ್ಯವೂ ಸಿಗ್ತಿದೆ. ಉಳಿದೆಲ್ಲಾ ಆಟಗಾರರಿಗಿಂತ ಅತಿ ಹೆಚ್ಚು ವೇತನ ಪಡೆಯೋ ಇವ್ರಿಗೆ, ವಿಶ್ರಾಂತಿ ಮೇಲೆ ವಿಶ್ರಾಂತಿಯೂ ಸಿಗ್ತಿದೆ. ಕ್ರಿಕೆಟ್ ಆಡಲು ವೇತನ ನೀಡಿ, ಸರಣಿಯಿಂದ ಸರಣಿಗೆ ರೆಸ್ಟ್ ನೀಡಲಾಗ್ತಿದೆ. ಬಿಸಿಸಿಐ ಇವ್ರಿಗೆ ಬಾಸ್ ಅಲ್ಲ. ಇವ್ರೇ ಬಿಸಿಸಿಐಗೆ ಬಾಸ್ ಆಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಸೀಸನ್ ಆರಂಭವಾಗಿದೆ. ಐಪಿಎಲ್ಗೂ ಮುನ್ನ ನಡೆದ ಇಂಗ್ಲೆಂಡ್ ಸರಣಿಯ ಬಳಿಕ, ಸತತವಾಗಿ ವೈಟ್ಬಾಲ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ಬ್ಯುಸಿಯಾಗಿದ್ರು. ಹೀಗಾಗಿ ರೆಡ್ ಬಾಲ್ ಕ್ರಿಕೆಟ್ ರಿಧಮ್ ಕಂಡುಕೊಳ್ಳೋ ಸಲುವಾಗಿ ಕೆಲ ಆಟಗಾರರನ್ನ ದುಲೀಪ್ ಟ್ರೋಫಿಯಲ್ಲಿ ಆಡಿಸಲು ಮ್ಯಾನೇಜ್ಮೆಂಟ್ ಮುಂದಾಗಿದೆ. ಟೀಮ್ ಇಂಡಿಯಾದ ಸೂಪರ್ಸ್ಟಾರ್ಗಳಿಗೆ ಮಾತ್ರ ಇದ್ರಿಂದ ರೆಸ್ಟ್ ನೀಡಲಾಗಿದೆ.
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
ಟೀಮ್ ಇಂಡಿಯಾ ಸ್ಟಾರ್ಗಳಿಗೆ ಸುದೀರ್ಘ ವಿಶ್ರಾಂತಿ
ಟೀಮ್ ಇಂಡಿಯಾದ ಕೆಲ ಆಟಗಾರಿಗೆ ಮುಂದಿನ ಟೆಸ್ಟ್ ಸೀಸನ್ನ ಸಿದ್ಧತೆಯ ಭಾಗವಾಗಿ ಕಡ್ಡಾಯವಾಗಿ ದುಲೀಪ್ ಟ್ರೋಫಿ ಟೂರ್ನಿಯನ್ನಾಡುವಂತೆ ಮ್ಯಾನೇಜ್ಮೆಂಟ್ ಸೂಚಿಸಿದೆ. ಸೂಪರ್ ಸ್ಟಾರ್ಗಳಿಗೆ ಮಾತ್ರ ವಿಶ್ರಾಂತಿ ನೀಡಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾರಂತ ಸೂಪರ್ ಸ್ಟಾರ್ಗಳಿಗೆ ವಿಶ್ರಾಂತಿ ನೀಡಿರುವ ನಿರ್ಧಾರ ಸದ್ಯ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಬಿಸಿಸಿಐ ಬಾಸ್ಗಳು, ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ನ ಇಬ್ಬುಗೆಯ ನೀತಿ ಬಟಾಬಯಲಾಗಿದೆ.
2019ರಿಂದ ಸೂಪರ್ ಸ್ಟಾರ್ಗಳಿಗೆ ತಂಡದಲ್ಲಿ ರಾಜಾತಿಥ್ಯ
ಜಸ್ಪ್ರೀತ್ ಬೂಮ್ರಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ.. ಈ ಮೂವರೂ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನ A+ ಗ್ರೇಡ್ನಲ್ಲಿದ್ದಾರೆ. ಇವ್ರಿಗೆ ವಾರ್ಷಿಕವಾಗಿ 7 ಕೋಟಿ ಹಣ ಬಿಸಿಸಿಐನಿಂದ ಸಂದಾಯವಾಗುತ್ತೆ. ಉಳಿದ ಆಟಗಾರರಿಗಿಂತ ಹೆಚ್ಚು ಸಂಬಳ ಪಡೆಯೋ ಇವ್ರಿಗೆ ವಿಶ್ರಾಂತಿಯ ಮೇಲೆ ವಿಶ್ರಾಂತಿಯೂ ಸಿಗ್ತಿದೆ. ಕ್ರಿಕೆಟ್ ಆಡೋಕೆ ಕೋಟಿ ಕೋಟಿ ವೇತನ ನೀಡಿ, ರೆಸ್ಟ್ ಮೇಲೆ ರೆಸ್ಟ್ ನೀಡ್ತಿದೆ.
ಮ್ಯಾನೇಜ್ಮೆಂಟ್ ನಿರ್ಧಾರದ ವಿರುದ್ಧ ಮಾಂಜ್ರೆಕರ್ ಕೆಂಡ
2019ರ ಅಗಸ್ಟ್ನಿಂದ ಈವರೆಗೆ ಟೆಸ್ಟ್, ಏಕದಿನ, ಟಿ20 ಸೇರಿ 249 ಪಂದ್ಯಗಳನ್ನ ಟೀಮ್ ಇಂಡಿಯಾ ಆಡಿದೆ. ಈ ಪಂದ್ಯಗಳ ಪೈಕಿ ರೋಹಿತ್ 142, ಕೊಹ್ಲಿ 146, ಬೂಮ್ರಾ ಕೇವಲ 84 ಪಂದ್ಯಗಳನ್ನ ಮಾತ್ರ ಆಡಿದ್ದಾರೆ. ಇವ್ರಿಗೆ ಮತ್ತೆ ದುಲೀಪ್ ಟ್ರೋಫಿಯಿಂದ ವಿಶ್ರಾಂತಿ ನೀಡಲಾಗಿದೆ. ಸೂಪರ್ ಸ್ಟಾರ್ಗಳಿಗೆ ನೀಡ್ತಿರೋ ರಾಜಾತಿಥ್ಯವನ್ನ ಬಗ್ಗೆ ಮಾಜಿ ಕ್ರಿಕೆಟಿಗ, ಹಾಲಿ ವಿಶ್ಲೇಷಕ ಸಂಜಯ್ ಮಾಂಜ್ರೇಕರ್ ಕುಟುಕಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
‘ದುಲೀಪ್ ಟ್ರೋಫಿಗೆ ಆಯ್ಕೆ ಮಾಡಬಹುದಿತ್ತು’
‘ಕಳೆದ 5 ವರ್ಷಗಳಲ್ಲಿ ಟೀಮ್ ಇಂಡಿಯಾ 249 ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದೆ. ಈ ಪಂದ್ಯಗಳ ಪೈಕಿ ರೋಹಿತ್ ಶರ್ಮಾ ಶೇಕಡಾ 59ರಷ್ಟು ಪಂದ್ಯಗಳನ್ನ ಆಡಿದ್ದಾರೆ. ವಿರಾಟ್ ಕೊಹ್ಲಿ ಶೇಕಡಾ 61 ಮತ್ತು ಬೂಮ್ರಾ ಶೇಕಡಾ 34ರಷ್ಟು ಪಂದ್ಯಗಳನ್ನ ಆಡಿದ್ದಾರೆ. ನಾನು ಇವರನ್ನ ತುಂಬಾ ವಿಶ್ರಾಂತಿ ಪಡೆದವರು ಎಂದು ಭಾವಿಸುತ್ತೇನೆ. ದುಲೀಪ್ ಟ್ರೋಫಿಗೆ ಇವರನ್ನ ಆಯ್ಕೆ ಮಾಡಬಹುದಿತ್ತು-ಸಂಜಯ್ ಮಾಂಜ್ರೆಕರ್, ಮಾಜಿ ಕ್ರಿಕೆಟಿಗ
ಕೊಹ್ಲಿ-ರೋಹಿತ್ಗೆ ವಿಶ್ರಾಂತಿ, ಗವಾಸ್ಕರ್ ಗರಂ
ಸಂಜಯ್ ಮಾಂಜ್ರೇಕರ್ ಮಾತ್ರವಲ್ಲ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಪ್ರಶ್ನೆ ಎತ್ತಿದ್ರು. ಇಂಜುರಿ ಕಾರಣದಿಂದ ಬೂಮ್ರಾಗೆ ವಿಶ್ರಾಂತಿಯ ಅಗತ್ಯ ಇದೆ. ಕೊಹ್ಲಿ-ರೋಹಿತ್ಗೆ ವಿಶ್ರಾಂತಿ ಯಾಕೆ ಎಂದು ಪರೋಕ್ಷವಾಗಿ ಪ್ರಶ್ನಿಸಿದ್ರು. 30 ವರ್ಷದ ಗಡಿ ದಾಟಿದ ಬಳಿಕ ರೆಗ್ಯುಲರ್ ಕ್ರಿಕೆಟ್ನ ಅಗತ್ಯವಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ರು.
ಸುದೀರ್ಘ ಅಂತರದ ಬಳಿಕ ಟೆಸ್ಟ್ ಕ್ರಿಕೆಟ್ಗೆ ವಾಪಸ್
ಈ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕೊನೆಯದಾಗಿ ಟೆಸ್ಟ್ ಕ್ರಿಕೆಟ್ ಆಡಿದ್ರು. ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಇಂಗ್ಲೆಂಡ್ ವಿರುದ್ಧ ಆಡಿದ್ದೇ ಕೊನೆ. ಆ ಬಳಿಕ ಸತತ ವೈಟ್ ಬಾಲ್ ಕ್ರಿಕೆಟ್ ಆಡಿರೋ ಇವರು, ಇದೀಗ ಸುದೀರ್ಘ ವಿಶ್ರಾಂತಿ ಪಡೆದುಕೊಂಡು ನೇರವಾಗಿ ಟೆಸ್ಟ್ ಸರಣಿಗೆ ಕಮ್ಬ್ಯಾಕ್ ಮಾಡಲಿದ್ದಾರೆ. ದೀರ್ಘಕಾಲದಿಂದ ದೂರ ಉಳಿದಿರೋ ಇವರು ಕಮ್ಬ್ಯಾಕ್ ಸರಣಿಯಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ:ಶ್ರೇಯಾಂಕ ಪಾಟೀಲ್ಗೆ ಸ್ಮೃತಿ ಮಂದಾನ ಹಿಗ್ಗಾಮುಗ್ಗಾ ಕ್ಲಾಸ್; ಆರ್ಸಿಬಿಯಲ್ಲಿ ಅಂದು ಆಗಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್