newsfirstkannada.com

ಗಾಯಕ್ವಾಡ್​​ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!

Share :

Published August 29, 2024 at 8:52am

    ಡಿಸೆಂಬರ್​​​ನಲ್ಲಿ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ

    ಕ್ರಿಕೆಟ್ ಲೋಕದಲ್ಲಿ ಹಲ್​​ಚಲ್ ಎಬ್ಬಿಸಿದೆ ಈ ಸುದ್ದಿ

    ಪವರ್​ ಹಿಟ್ಟರ್​ಗೆ ಕರೆ ತರಲು ಸಿಎಸ್​ಕೆ ಮಾಸ್ಟರ್ ಪ್ಲಾನ್

ಡಿಸೆಂಬರ್​​​ನಲ್ಲಿ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದ್ದು, ಇದಕ್ಕೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಇದ್ರಿಂದ ಐಪಿಎಲ್​​​​​​​ ಭೀಷ್ಮ ಅಂತ ಕರೆಸಿಕೊಳ್ಳುವ ಸಿಎಸ್​ಕೆ ಟೀಮ್​ ಕೂಡ ಹೊರತಾಗಿಲ್ಲ. ಆಟಗಾರರ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಯೆಲ್ಲೋ ಆರ್ಮಿ ಬಿಗ್​ ಫಿಶ್​ಗೆ ಗಾಳ ಹಾಕಿದ್ದು, ಕ್ರಿಕೆಟ್ ಲೋಕದಲ್ಲಿ ಹಲ್​​ಚಲ್ ಎಬ್ಬಿಸಿದೆ.

ಪವರ್​ ಹಿಟ್ಟರ್​ ಸಂಜು ಸ್ಯಾಮ್ಸನ್​ಗೆ ಸಿಎಸ್​ಕೆ ಗಾಳ?
ಮಸಲ್​ಮ್ಯಾನ್​​​, ಪವರ್​ ಹಿಟ್ಟರ್​​​ ಹಾಗೂ ಡಿಸ್ಟ್ರಕ್ಟಿವ್​​ ಬ್ಯಾಟರ್ ಅಂತೆಲ್ಲಾ ಕರೆಸಿಕೊಳ್ಳುವ ಸಂಜು ಸ್ಯಾಮ್ಸನ್​​​ಗೆ ಗಾಳ ಹಾಕಲು ಚೆನ್ನೈ ಮುಂದಾಗಿದೆ. ರಾಜಸ್ಥಾನ ರಾಯಲ್ಸ್​ ತಂಡದ ಕ್ಯಾಪ್ಟನ್​ ಕಮ್​ ವಿಕೆಟ್​​ಕೀಪರ್​​ ಆಗಿರೋ ಸಂಜು ಸ್ಯಾಮ್ಸನ್​​ನ ಚೆನ್ನೈ ತೆಕ್ಕೆಗೆ ತೆಗೆದುಕೊಳ್ಳಲು ಪ್ಲಾನ್​ ರೂಪಿಸಿದ್ಯಂತೆ. ಆಕ್ಷನ್​ನಲ್ಲಿ ಸಂಜುಗಾಗಿ ಬಹುಕೋಟಿ ವ್ಯಯಿಸಲು ಮ್ಯಾನೇಜ್​ಮೆಂಟ್​ ಪ್ಲಾನ್​ ಮಾಡಿದ್ಯಂತೆ.
ಅಂದ ಹಾಗೇ ಚೆನ್ನೈ ತಂಡ ಏಕಾಏಕಿ ಸ್ಯಾಮ್ಸನ್​ಗೆ ಬಲೆ ಬೀಸಿಲ್ಲ. ಎರಡು ತಿಂಗಳ ಹಿಂದಿನಿಂದಲೇ ಇದಕ್ಕಾಗಿ ಪ್ಲಾನ್ ಮಾಡಿತ್ತು. ಸಿಎಸ್​ಕೆ ಸಿಇಒ ಕಾಸಿ ವಿಶ್ವನಾಥನ್​​ ಬೆಸ್ಟ್ ವಿಕೆಟ್​ ಕೀಪರ್​​ನನ್ನ ತಂಡಕ್ಕೆ ಕರೆ ತರುತ್ತೇವೆ ಎಂಬ ಸ್ಟೇಟ್​ಮೆಂಟ್ ಕೊಟ್ಟಿದ್ರು. ಸದ್ಯದ ಬೆಳವಣಿಗೆ ಅಂದು ಕೊಟ್ಟಿದ್ದ ಸ್ಟೇಟ್​ಮೆಂಟ್​​ಗೆ ಉತ್ತರ ನೀಡ್ತಿದೆ.

ಇದನ್ನೂ ಓದಿ:ಕೈಕೊಟ್ಟ ಸಿರಾಜ್, ಜಡೇಜಾ.. ಬಾಂಗ್ಲಾ ಸರಣಿ ಕನಸು ಛಿದ್ರಗೊಳ್ಳುವ ಆತಂಕ..!

ಧೋನಿಗೆ ಸಮರ್ಥ ಉತ್ತರಾಧಿಕಾರಿ..!
ಸಿಎಸ್​ಕೆ ಮಾಜಿ ಕ್ಯಾಪ್ಟನ್ ಧೋನಿ ನಿವೃತ್ತಿ ಅಂಚಿನಲ್ಲಿದ್ದಾರೆ. 2025ನೇ ಐಪಿಎಲ್ ಆಡುವ ಬಗ್ಗೆ ಇಲ್ಲಿ ತನಕ ಯಾವುದೇ ಸ್ಪಷ್ಟನೆ ನೀಡಿಲ್ಲ. ಯಾವುದೇ ಕ್ಷಣದಲ್ಲಿ ಐಪಿಎಲ್​​ಗೆ ಗುಡ್​ಬೈ ಹೇಳಬಹುದು. ಚೆನ್ನೈ, ಸ್ಯಾಮ್ಸನ್​ನ​ ಸೆಳೆಯಲು ಮುಂದಾಗಿದೆ. ಸ್ಯಾಮ್ಸನ್​ ಕೂಡ ಮಾಹಿಯಂತೆ ಕೂಲ್​​ ಅಂಡ್ ಕಾಮ್ ಕ್ರಿಕೆಟರ್​. ವಿಕೆಟ್ ಕೀಪಿಂಗ್​ ಜೊತೆ ಚತುರ ನಾಯಕ. ಮಾಹಿ ಸ್ಥಾನ ತುಂಬಬಲ್ಲ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ.

ಶೀಘ್ರದಲ್ಲೆ ರಾಜಸ್ಥಾನ ತಂಡಕ್ಕೆ ಸ್ಯಾಮ್ಸನ್​ ಗುಡ್​ಬೈ..!
ಒಂದೆಡೆ ಚೆನ್ನೈ ತಂಡ ಸ್ಯಾಮ್ಸನ್​ನ ಸೆಳೆಯಲು ಸಜ್ಜಾಗಿದೆ ಅನ್ನೋ ಸುದ್ದಿಯ ನಡುವೆ, ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್​​​​ ತಂಡ ಒಂದು ಕ್ರಿಪ್ಟಿಕ್​​ ಪೋಸ್ಟ್ ಹಾಕಿದೆ. ಎಕ್ಸ್​ ಖಾತೆಯಲ್ಲಿ ಸಂಜು ಸ್ಯಾಮ್ಸನ್​ರ ವಿಡಿಯೋ ಹಾಕಿ ಮೇಜರ್​ ಮಿಸ್ಸಿಂಗ್ ಅನ್ನೋ ಕ್ಯಾಪ್ಷನ್ ನೀಡಿದೆ. ಇದು ಸ್ಯಾಮ್ಸನ್​​ ರಾಜಸ್ಥಾನ ತಂಡವನ್ನ ತೊರೆಯಲಿದ್ದಾರಾ ಅನ್ನೋ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ:RCB ಫ್ಯಾನ್ಸ್​ಗೆ ಶಾಕ್ ಕೊಟ್ಟ ಕೆಎಲ್ ರಾಹುಲ್.. ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಾಯಕ್ವಾಡ್​​ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!

https://newsfirstlive.com/wp-content/uploads/2024/08/MS_DHONI_CSK.jpg

Load More