ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಹಂಗಾಮ
ದೇಶಿ ಟೂರ್ನಿಯಿಂದ ಮೊಹಮ್ಮದ್ ಸಿರಾಜ್ ಔಟ್
ಅನಾರೋಗ್ಯದ ಕಾರಣದಿಂದ ಹಿಂದೆ ಸರಿದ ಸ್ಟಾರ್ ವೇಗಿ
ಬಿಸಿಸಿಐ ಬಾಸ್ ಜಯ್ ಶಾ ದುಲೀಪ್ ಟ್ರೋಫಿ ಆಡಬೇಕೆಂದು ಕಟ್ಟಪ್ಪಣೆ ಮಾಡಿದ್ರು. ಅವರ ಆಜ್ಞೆಗೆ ಟೂರ್ನಿ ಶುರುವಿಗೂ ಮುನ್ನವೇ ದೊಡ್ಡ ಹಿನ್ನಡೆಯಾಗಿದೆ. ದೇಶಿ ಕ್ರಿಕೆಟ್ನಿಂದ ಟೀಮ್ ಇಂಡಿಯಾದ ಇಬ್ಬರು ಸ್ಟಾರ್ ಪ್ಲೇಯರ್ಸ್ ಹೊರಬಿದ್ದಿದ್ದಾರೆ. ಮುಂಬರೋ ಬಾಂಗ್ಲಾ ಸರಣಿಗೂ ಅವರ ಲಭ್ಯತೆ ಬಗ್ಗೆ ಪ್ರಶ್ನೆ ಎದ್ದಿದೆ.
63 ವರ್ಷಗಳ ಇತಿಹಾಸವಿರೋ ದುಲೀಪ್ ಟ್ರೋಫಿಗೆ ಕೌಂಟ್ಡೌನ್ ಶುರುವಾಗಿದೆ. ಮೊದಲ ಬಾರಿ ಈ ಪಂದ್ಯಾವಳಿ ಹಿಂದೆಂದೂ ಇರದಷ್ಟು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಬಿಸಿಸಿಐನ ಖಡಕ್ ನಿರ್ಧಾರ. ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿರೋ ಪ್ರತಿಯೊಬ್ಬ ಆಟಗಾರ ಬಿಡುವಿನ ವೇಳೆ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕೆಂದು ಕಾರ್ಯದರ್ಶಿ ಜಯ್ ಶಾ ಖಡಕ್ ಆಗಿ ಸೂಚಿಸಿದ್ರು. ಅದರ ಪರಿಣಾಮವೇ ಮುಂಬರೋ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಬಹುತೇಕ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ. ಅದಕ್ಕೂ ಮುನ್ನವೇ ಸ್ಟಾರ್ ವೇಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ಗೆ ಎಚ್ಚರಿಕೆ.. ಬೂಮ್ರಾ ವಿಶ್ರಾಂತಿ ಹಿಂದಿನ ಸಿಕ್ರೇಟ್ ರಿವೀಲ್..!
ದುಲೀಪ್ ಟ್ರೋಫಿಯಿಂದ ಮೊಹಮ್ಮದ್ ಸಿರಾಜ್ ಔಟ್..!
ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಆರಂಭಗೊಳ್ಳಲಿದೆ. ಈಗಾಗಲೇ ಎಲ್ಲಾ ಆಟಗಾರರು ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಟೂರ್ನಿ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗ್ಲೇ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೊರಬಿದ್ದಿದ್ದಾರೆ. ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ದುಲೀಪ್ ಟ್ರೋಫಿ ಆಡುತ್ತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮ್ಯಾಚ್ ವಿನ್ನರ್ ಸಿರಾಜ್ ಇಂಡಿಯಾ ಬಿ ತಂಡದಲ್ಲಿ ಸ್ಥಾನ ಪಡೆದಿದ್ರು. ಇವರ ಬದಲಿಗೆ ನವ್ದೀಪ್ ಸೈನಿ ಸ್ಥಾನ ಪಡೆದಿದ್ದಾರೆ.
ಬಾಂಗ್ಲಾ ಎದುರಿನ ಟೆಸ್ಟ್ ಸರಣಿ ಆಡುವುದು ಅನುಮಾನ
ಅನಾರೋಗ್ಯದ ಕಾರಣದಿಂದ ಮೊಹಮ್ಮದ್ ಸಿರಾಜ್ರನ್ನ ಬಿಸಿಸಿಐ ದುಲೀಪ್ ಟ್ರೋಫಿಯಿಂದ ಕೈಬಿಟ್ಟಿದೆ. ಆದ್ರೆ ಏನಾಗಿದೆ ಅನ್ನೋದನ್ನ ಬಿಸಿಸಿಐ ಹೇಳಿಲ್ಲ. ಸಿರಾಜ್ ಟೆಸ್ಟ್ ತಂಡದ ಖಾಯಂ ಬೌಲರ್. ಸದ್ಯ ಅನಾರೋಗ್ಯ ಅಭಿಮಾನಿಗಳನ್ನ ಚಿಂತೆಗೀಡು ಮಾಡಿದೆ. ಸೆಪ್ಟೆಂಬರ್ 19 ರಿಂದ ಭಾರತ-ಬಾಂಗ್ಲಾ ಸಿರೀಸ್ ಆರಂಭಗೊಳ್ಳಲಿದೆ. ಆ ವೇಳೆಗೆ ಸಿರಾಜ್ ಚೇತರಿಸಿಕೊಳ್ಳುವುದು ಕಷ್ಟ ಎಂದು ಹೇಳಲಾಗ್ತಿದ್ದು, ಬಾಂಗ್ಲಾ ಟೆಸ್ಟ್ ಸರಣಿ ಆಡುವುದು ಅನುಮಾನವಾಗಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ಗೆ ಮಾತ್ರ ವಾರ್ನಿಂಗ್.. ಬುಮ್ರಾ ವಿಚಾರದಲ್ಲಿ ಸೈಲೆಂಟ್.. BCCI ಅಸಲಿ ಕತೆ ರಿವೀಲ್..!
ತ್ರಿಮೂರ್ತಿ ಸ್ಟಾರ್ ಬೌಲರ್ಸ್ ಬಾಂಗ್ಲಾ ಸರಣಿಗೆ ಅಲಭ್ಯ..?
ಒಂದು ವೇಳೆ ಸಿರಾಜ್ ದುಲೀಪ್ ಟ್ರೋಫಿಗೆ ಅಲಭ್ಯರಾಗಿದ್ದೆ ಆದಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಲಿದೆ.ಯಾಕಂದ್ರೆ ಯಾರ್ಕರ್ ಸ್ಪೆಶಲಿಸ್ಟ್ ಜಸ್ಪ್ರೀತ್ ಬೂಮ್ರಾ ಕೂಡ ಈ ಸರಣಿ ಆಡುವುದಿಲ್ಲ. ಇಂಜುರಿ ಫ್ರೀ ಆಗಿ ಇರಿಸಲು ರೆಸ್ಟ್ ನೀಡಲು ಚಿಂತನೆ ನಡೆಸಿದೆ. ಇನ್ನೊಂದೆಡೆ ಗಾಯದಿಂದ ಚೇತರಿಸಿಕೊಳ್ತಿರೋ ಸ್ವಿಂಗ್ ಮಾಸ್ಟರ್ ಮೊಹಮ್ಮದ್ ಶಮಿ ಕೂಡ ಬಾಂಗ್ಲಾ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಈ ತ್ರಿಮೂರ್ತಿ ಸ್ಟಾರ್ ವೇಗಿಗಳು ಅಲಭ್ಯತೆಯಲ್ಲಿ ರೋಹಿತ್ ಪಡೆ ಕಣಕ್ಕಿಳಿದಿದ್ದೆ ಆದಲ್ಲಿ ಬಿಗ್ ಸೆಟ್ಬ್ಯಾಕ್ ಆಗಲಿದೆ.
ಮುಂದೆ ಟೀಮ್ ಇಂಡಿಯಾಗೆ ಪ್ರಮುಖ ಟೆಸ್ಟ್ ಸರಣಿಗಳಿವೆ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಭಾರತಕ್ಕೆ ಪ್ರತಿ ಪಂದ್ಯವು ಇಂಪಾರ್ಟೆಂಟ್. ಫೈನಲ್ರೇಸ್ನಲ್ಲಿ ಉಳಿದುಕೊಳ್ಳಬೇಕಾದ್ರೆ ಗೆಲ್ಲುವುದು ಅನಿವಾರ್ಯವಾಗಿದೆ. ಈಗಿರುವಾಗ್ಲೇ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಬಾಂಗ್ಲಾ ಸರಣಿ ಆಡದಿರುವುದು, ಟೆನ್ಷನ್ ತಂದೊಡ್ಡಿದೆ. ಈಗಾಗ್ಲೇ ಮೊದಲ ಟೆಸ್ಟ್ನಲ್ಲಿ ಬಾಂಗ್ಲಾ, ಪಾಕ್ಗೆ ಮಣ್ಣು ಮುಕ್ಕಿಸಿದೆ. ಒಂದು ವೇಳೆ ಭಾರತದ ಫಾಸ್ಟ್ ಬೌಲಿಂಗ್ ವೀಕ್ ಆಗಿದ್ದೆ ಆದ್ರೆ ಬಾಂಗ್ಲಾಗೆ ನೆರವಾಗಲಿದೆ.
ದೇಶಿ ಟೂರ್ನಿಯಿಂದ ಜಡೇಜಾಗೆ ರೆಸ್ಟ್..!
ಬರೀ ಮೊಹಮ್ಮದ್ ಸಿರಾಜ್ ಅಷ್ಟೇ ಅಲ್ಲ. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ದುಲೀಪ್ ಟ್ರೋಫಿಯಿಂದ ಔಟ್ ಆಗಿದ್ದಾರೆ. 27 ರಂದು ಬಿಸಿಸಿಐ ಪ್ರಕಟಿಸಿದ ದುಲೀಪ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದ ಜಡೇಜಾರನ್ನ ನಿನ್ನೆ ಕೈಬಿಡಲಾಗಿದೆ. ಆದರೆ ಯಾವ ಕಾರಣಕ್ಕಾಗಿ ಜಡೇಜಾ ಹೆಸರನ್ನ ಡ್ರಾಪ್ ಮಾಡಲಾಗಿದೆ ಎಂಬುದುನ್ನ ಬಿಸಿಸಿಐ ಬಹಿರಂಗಗೊಳಿಸಿಲ್ಲ. ಜಡ್ಡು ಇಂಡಿಯಾ ಬಿ ತಂಡದಲ್ಲಿ ಸ್ಥಾನ ಪಡೆದಿದ್ರು. ಜಡೇಜಾ ಟಿ20 ವಿಶ್ವಕಪ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಶ್ರೀಲಂಕಾ ಸರಣಿಯಿಂದ ರೆಸ್ಟ್ ನೀಡಲಾಗಿತ್ತು. ಟೆಸ್ಟ್ ಆಡದೇ 5 ತಿಂಗಳಾಗಿದೆ. ಸತತ ಕ್ರಿಕೆಟ್ ಆಡದ ಜಡ್ಡುಗೆ ದುಲೀಪ್ ಟ್ರೋಫಿಯಿಂದ ರೆಸ್ಟ್ ನೀಡುವ ಅಗತ್ಯವಿತ್ತಾ ಅನ್ನೋ ಪ್ರಶ್ನೆ ತಲೆದೂರಿದೆ.
ಇದನ್ನೂ ಓದಿ:KL ರಾಹುಲ್ ಆರ್ಭಟದ ಮುಂದೆ ಮಂಕಾಗಿದ್ದ ಧವನ್; ‘ರಾಹುಲ್ ವಿಲನ್ ಆದರು’ ಎಂದ ಫ್ಯಾನ್ಸ್..!
ನೇರವಾಗಿ ಟೆಸ್ಟ್ ಅಖಾಡಕ್ಕೆ ಎಂಟ್ರಿ ಕೊಡ್ತಾರಾ ಜಡ್ಡು?
ದುಲೀಪ್ ಟ್ರೋಫಿಯಿಂದ ವಿಶ್ರಾಂತಿ ಪಡೆದಿರೋ ಜಡೇಜಾ ನೇರವಾಗಿ ಬಾಂಗ್ಲಾ ಟೆಸ್ಟ್ ಸರಣಿಗೆ ಧುಮುಕುವ ಸಾಧ್ಯತೆ ಇದೆ. ಡೊಮೆಸ್ಟಿಕ್ ಆಡದೇ ಫಿಟ್ನೆಸ್ ಪ್ರೂವ್ ಮಾಡದೇ ಇರುವವರನ್ನ ತಂಡಕ್ಕೆ ಸೆಲೆಕ್ಟ್ ಮಾಡಲ್ಲ ಎಂದು ಬಿಸಿಸಿಐ ಹೇಳಿದೆ. ಹಾಗೊಂದು ವೇಳೆ ಜಡೇಜಾ ಕೀ ಪ್ಲೇಯರ್ ಎಂದು ಆಯ್ಕೆ ಮಾಡಿದ್ರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಮ್ಮಿ. ಯಾಕಂದ್ರೆ ಇವರ ಸ್ಥಾನದ ಮೇಲೆ ಆಲ್ರೌಂಡರ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಕಣ್ಣಿಟ್ಟಿದ್ದಾರೆ. ಅಲ್ಲದೇ ಚೈನಾಮ್ಯಾನ್ ಕುಲ್ದೀಪ್ ಕೂಡ ರೇಸ್ನಲ್ಲಿದ್ದಾರೆ. ಈ ತ್ರಿಮೂರ್ತಿಗಳ ಜೊತೆಗಿನ ಸ್ಪರ್ಧೆಯಲ್ಲಿ ಜಡೇಜಾ ಗೆದ್ದು ಬೀಗ್ತಾರಾ, ಇಲ್ವಾ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್ಮ್ಯಾನ್ ದಶಕದ ಕನಸು ನನಸು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್