newsfirstkannada.com

ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ.. ಬೂಮ್ರಾ ವಿಶ್ರಾಂತಿ ಹಿಂದಿನ ಸಿಕ್ರೇಟ್ ರಿವೀಲ್..!

Share :

Published August 27, 2024 at 7:58am

Update August 27, 2024 at 11:57am

    T20 ವಿಶ್ವಕಪ್​ ಬಳಿಕ ಬೂಮ್ರಾಗೆ ರೆಸ್ಟ್​ ಮೇಲೆ ರೆಸ್ಟ್​

    ಲಂಕಾ ಪ್ರವಾಸವಾಯ್ತು, ಬಾಂಗ್ಲಾ ಸರಣಿಯಿಂದಲೂ ವಿಶ್ರಾಂತಿ

    3 ತಿಂಗಳು 17 ದಿನಗಳ ಕಾಲ ಕ್ರಿಕೆಟ್​ನಿಂದ ಬೂಮ್ರಾ ದೂರ

ಸೂಪರ್​ ಸ್ಟಾರ್​​ಗಳಾದ ರೋಹಿತ್​ ಶರ್ಮಾ-ವಿರಾಟ್​ ಕೊಹ್ಲಿಗೆ ಖಡಕ್​ ವಾರ್ನಿಂಗ್​ ಮಾಡಿದ ಬಿಸಿಸಿಐ, ಜಸ್​ಪ್ರಿತ್​​ ಬೂಮ್ರಾ ವಿಚಾರದಲ್ಲಿ ಮಾತ್ರ ಸೈಲೆಂಟ್​ ಆಗಿದೆ. ಲಂಕಾ ಪ್ರವಾಸದಿಂದ ರೆಸ್ಟ್​ ಪಡೆದ ಬೂಮ್ರಾಗೆ, ಬಾಂಗ್ಲಾದೇಶ ಸರಣಿಯಿಂದಲೂ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಕೊಹ್ಲಿ-ರೋಹಿತ್​ಗೆ ನೋ ರೆಸ್ಟ್​​​ ಎಂದ ಬಾಸ್​ಗಳು, ಬೂಮ್ರಾಗೆ ಸುದೀರ್ಘ 3 ತಿಂಗಳ ವಿಶ್ರಾಂತಿ ನೀಡ್ತಿದ್ದಾರೆ. ಇದ್ರ ಹಿಂದೆ ಒಂದು ಸೀಕ್ರೆಟ್​ ಇದೆ.

T20 ವಿಶ್ವಕಪ್​ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಬೂಮ್ರಾ ತವರಿಗೆ ಮರಳಿದ ಬಳಿಕ ಫುಲ್​ ವಿಶ್ರಾಂತಿಗೆ ಜಾರಿದ್ದಾರೆ. ಕುಟುಂಬಕ್ಕೆ ಸಮಯ ಮೀಸಲಿಟ್ಟಿರುವ ಬೂಮ್ರಾ, ಕ್ರಿಕೆಟ್​​ ಫೀಲ್ಡ್​ನಿಂದ ಮಾತ್ರವಲ್ಲ. ಅಭ್ಯಾಸದಿಂದಲೂ ದೂರ ಉಳಿದಿದ್ದಾರೆ. ಶ್ರೀಲಂಕಾ ಪ್ರವಾಸದ ಟಿ20 ಹಾಗೂ ಏಕದಿನ ಸರಣಿಯಿಂದ ಹೊರಗುಳಿದ ಬೂಮ್ರಾಗೆ ದುಲೀಪ್​ ಟ್ರೋಫಿಯಿಂದಲೂ ರೆಸ್ಟ್​ ನೀಡಲಾಗಿದೆ. ಇದೀಗ ಮುಂಬರೋ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಹಾಗೂ ಟಿ20 ಸರಣಿಯಿಂದಲೂ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ:KL ರಾಹುಲ್ ಆರ್ಭಟದ ಮುಂದೆ ಮಂಕಾಗಿದ್ದ ಧವನ್; ‘ರಾಹುಲ್​​ ವಿಲನ್ ಆದರು’ ಎಂದ ಫ್ಯಾನ್ಸ್..!

ಜೂನ್​ 29ರಂದು ನಡೆದ ಸೌತ್​ ಆಫ್ರಿಕಾ ಎದುರಿನ ಟಿ20 ವಿಶ್ವಕಪ್​ ಫೈನಲ್​ ಪಂದ್ಯವೇ ಕೊನೆ. ಆ ಬಳಿಕ ಬೂಮ್ರಾ ಫೀಲ್ಡ್​ಗೆ ಇಳಿದೇ ಇಲ್ಲ. ಮುಂದಿನ ನ್ಯೂಜಿಲೆಂಡ್​ ಎದುರಿನ ಟೆಸ್ಟ್​ ಸರಣಿ ಆರಂಭವಾಗೋದು ಅಕ್ಟೋಬರ್​ 16ರಿಂದ. ಅಂದ್ರೆ 3 ತಿಂಗಳು, 17 ದಿನಗಳ ಕಾಲ ಬೂಮ್ರಾ, ಮೈದಾನದಿಂದ ಹೊರಗಿರಲಿದ್ದಾರೆ. ಬಳಿಕ ನೇರವಾಗಿ ಕಿವೀಸ್​ ಎದುರು ಕಣಕ್ಕಿಳಿಯಲಿದ್ದಾರೆ.

ಕೊಹ್ಲಿ, ರೋಹಿತ್​ ನೋ ರೆಸ್ಟ್​ ಎಂದಿದ್ದ ಗುರು​ ಗಂಭೀರ್​
ಟಿ20 ವಿಶ್ವಕಪ್​ ಬಳಿಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಕೂಡ ವಿಶ್ರಾಂತಿ ಬಯಸಿದ್ರು. ಚಾಂಪಿಯನ್ಸ್​ ಟ್ರೋಫಿ ಸಿದ್ಧತೆಯ ದೃಷ್ಟಿಯಿಂದ ಲಂಕಾ ಎದುರು ಆಡಲೇಬೇಕೆಂದು ಗಂಭೀರ್​ ಕಟ್ಟಪ್ಪಣೆ ಹೊರಡಿಸಿದ್ರು. ಬಳಿಕ ಇಬ್ಬರು ಸರಣಿಯನ್ನಾಡಿದ್ರು. ಬೂಮ್ರಾಗೆ ಮಾತ್ರ ಮೇಲಿಂದ ಮೇಲೆ ವಿಶ್ರಾಂತಿ ನೀಡಲಾಗ್ತಿದೆ. ವಿಶ್ರಾಂತಿಯ ಹಿಂದೆ ಒಂದು ಸೀಕ್ರೆಟ್​ ಇದೆ.

‘ನ್ಯಾಷನಲ್​ ಟ್ರೆಷರ್’ ರಕ್ಷಿಸಲು ಮಾಸ್ಟರ್​ ಪ್ಲಾನ್​
ಟಿ20 ವಿಶ್ವಕಪ್​ ಗೆಲುವಿನ ಸಂಭ್ರಮಾಚರಣೆಯ ವೇಳೆ ವಿರಾಟ್​ ಕೊಹ್ಲಿ ಜಸ್​ಪ್ರಿತ್​ ಬೂಮ್ರಾರನ್ನ ರಾಷ್ಟ್ರೀಯ ಸಂಪತ್ತು ಎಂದು ಬಣ್ಣಿಸಿದ್ರು. ಕೊಹ್ಲಿ ಹೀಗೆ ಬಣ್ಣಿಸಿದ್ರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಬೂಮ್ರಾ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್​. ಟಿ20 ವಿಶ್ವಕಪ್​ನ ಪರ್ಫಾಮೆನ್ಸ್​ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.! T20 ಮಾತ್ರವಲ್ಲ. ಮೂರೂ ಫಾರ್ಮೆಟ್​​ನಲ್ಲಿ ಬೂಮ್ರಾ, ಟೀಮ್​ ಇಂಡಿಯಾದ ಬಲವಾಗಿದ್ದಾರೆ. ಈ ನ್ಯಾಷನಲ್​ ಟ್ರೆಷರ್​​ನ ರಕ್ಷಣೆಯೇ ಪದೇ ಪದೇ ವಿಶ್ರಾಂತಿ ನೀಡ್ತಾ ಇರೋದ್ರ ಹಿಂದಿನ ಉದ್ದೇಶವಾಗಿದೆ.

ಇದನ್ನೂ ಓದಿ:ಧವನ್​​ ನೆನಪುಗಳಲ್ಲಿ ರೋಹಿತ್ ಕೂಡ ಒಬ್ಬರು.. ಕ್ರಿಕೆಟ್ ಪ್ರೇಮಿಗಳನ್ನೂ ಕಾಡಲಿದೆ ಈ ವಿಚಾರ..!

ಬೂಮ್ರಾ ಇಂಜುರಿ ಫ್ರೀ ಆಗಿರಿಸಲು ಸ್ಪೆಷಲ್​ ಕೇರ್
ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಸಾಲು-ಸಾಲು ಟೆಸ್ಟ್​ ಪಂದ್ಯಗಳನ್ನಾಡಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ಗೆ ಕ್ವಾಲಿಫೈ ಆಗೋ ದೃಷ್ಟಿಯಿಂದ ಈ ಸರಣಿಗಳು ಮಹತ್ವದ್ದಾಗಿದೆ. ಆ ಬಳಿಕ ಪ್ರತಿಷ್ಟಿತ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿ ನಡೆಯಲಿದೆ. ಈ ಮಹತ್ವದ ಟೂರ್ನಿಗಳಲ್ಲಿ ಬೂಮ್ರಾ ಅಗತ್ಯತೆ ತಂಡಕ್ಕೆ ಹೆಚ್ಚಿದೆ. ಹೀಗಾಗಿ ಬೂಮ್ರಾನ ಇಂಜುರಿ ಫ್ರೀಯಾಗಿರಿಸೋ ಸರ್ಕಸ್​ ನಡೀತಿದೆ. ಸತತ ಪಂದ್ಯಗಳನ್ನಾಡಿದ್ರೆ ಬೂಮ್ರಾ ಇಂಜುರಿಗೆ ಒಳಗಾಗೋ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಸುದೀರ್ಘ ಕ್ರಿಕೆಟ್​ ಆಡಿದ್ದ ಬೂಮ್ರಾ ಪದೇ ಪದೇ ಇಂಜುರಿಗೆ ತುತ್ತಾಗಿದ್ರು.

2018ರಲ್ಲಿ ಥಂಬ್​ ಇಂಜುರಿಗೆ ತುತ್ತಾದ ಬೂಮ್ರಾ, 2019ರಲ್ಲಿ ಲೋವರ್​ ಬ್ಯಾಕ್​ ಸ್ಟ್ರೆಸ್​​​ ಫ್ರಾಕ್ಟರ್, 2021ರಲ್ಲಿ ಅಬ್ಡೋಮಿನಲ್​ ಸ್ಟ್ರೇನ್​ಗೆ ಒಳಗಾಗಿದ್ರು. ಆ ಬಳಿಕ 2022ರಲ್ಲಿ ಲೋವರ್​ ಬ್ಯಾಕ್​ ಇಂಜುರಿಗೆ ಒಳಗಾಗಿದ್ದ ಬೂಮ್ರಾ, ಸುದೀರ್ಘ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ರು.

ಕಾಡ್ತಿದ್ಯಾ ಲೋವರ್​ ಬ್ಯಾಕ್​ ಇಂಜುರಿಯ ಭಯ?
2022ರಲ್ಲಿ ಲೋವರ್​ ಬ್ಯಾಕ್​ ಇಂಜುರಿಗೆ ತುತ್ತಾದ ಬೂಮ್ರಾ, 2022ರ ಟಿ20 ವಿಶ್ವಕಪ್​, 2023ರ ಐಪಿಎಲ್​ ಸೇರಿದಂತೆ ಪ್ರಮುಖ ಸರಣಿಗಳಿಂದ ದೂರ ಉಳಿದಿದ್ರು. ಇಂಜುರಿಯಿಂದ ಚೇತರಿಸಿಕೊಳ್ಳಲು ಹರ ಸಾಹಸ ಪಟ್ಟಿದ್ರು. ಅಂತಿಮವಾಗಿ ಸರ್ಜರಿಗೆ ಒಳಗಾಗಿದ್ರು. ಲೋವರ್​ ಬ್ಯಾಕ್ ಸರ್ಜರಿಗೆ ಒಳಗಾಗಿರೋದ್ರಿಂದ ಅನ್​ ಆರ್ಥೋಡಾಕ್ಸ್​ ಬೌಲಿಂಗ್​ ಶೈಲಿಯನ್ನ ಹೊಂದಿರೋ ಬೂಮ್ರಾ, ಮತ್ತೆ ಇಂಜುರಿಗೆ ತುತ್ತಾಗೋ ಆತಂಕ ಹೆಚ್ಚಿದೆ. ಹೀಗಾಗಿಯೇ ಮ್ಯಾನೇಜ್​ಮೆಂಟ್​​ ಸುದೀರ್ಘ ವಿಶ್ರಾಂತಿಯನ್ನ ನೀಡ್ತಿದೆ. ಇಷ್ಟೇ ಅಲ್ಲ.. ಮುಂದೆಯೂ ಬೂಮ್ರಾನ ರೋಟೆಷನ್​ ಆಧಾರದಲ್ಲಿ ಆಡಿರೋ ಚಿಂತನೆಯನ್ನೂ ಮ್ಯಾನೇಜ್​ಮೆಂಟ್​ ನಡೆಸಿದೆ.

ಇದನ್ನೂ ಓದಿ:MI​ ಜೊತೆ KKR ಬಿಗ್ ಡೀಲ್.. ಕ್ಯಾಪ್ಟನ್ಸಿಗಾಗಿ ಸ್ಟಾರ್ ಆಟಗಾರನ ಖರೀದಿಸಲು ಮಾತುಕತೆ.. ರೋಹಿತ್ ಅಲ್ಲ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ.. ಬೂಮ್ರಾ ವಿಶ್ರಾಂತಿ ಹಿಂದಿನ ಸಿಕ್ರೇಟ್ ರಿವೀಲ್..!

https://newsfirstlive.com/wp-content/uploads/2024/07/Jasprit-bumrah.jpg

Load More