ದಿಢೀರ್ ನಿವೃತ್ತಿ ಘೋಷಿಸಿದ ಶಿಖರ್ ಧವನ್
ದಿಗ್ಗಜರ ಪಾರ್ಟನರ್ಶಿಪ್ ಅಧಿಕೃತವಾಗಿ ಬ್ರೇಕ್
ಧವನ್-ರೋಹಿತ್ ಅಬ್ಬರಕ್ಕೆ ತಬ್ಬಿಬ್ಬಾಗ್ತಿದ್ರು ಬೌಲರ್ಸ್
ಶಿಖರ್ ಧವನ್ ಜೊತೆಗೆ ನೆನಪಾಗುವ ಮತ್ತೊಂದು ಹೆಸರು ರೋಹಿತ್ ಶರ್ಮಾ. ಈ ಹಿಟ್ಮ್ಯಾನ್ ರೋಹಿತ್-ಗಬ್ಬರ್ ಧವನ್ ಸೇರಿಕೊಂಡು ಬೌಲರ್ಸ್ಗೆ ಕೊಟ್ಟ ಕ್ವಾಟ್ಲೆ ಅಷ್ಟಿಷ್ಟಲ್ಲ. ಇವರಿಬ್ರು ಕ್ರಿಸ್ ಕಚ್ಚಿ ನಿಂತು ಆರ್ಭಟಿಸಲು ಶುರುವಿಟ್ಟುಕೊಂಡ್ರೆ ಬೌಲರ್ಸ್ ಕಥೆ ಫಿನಿಷ್ ಅಂತಲೇ ಅರ್ಥ. ಹಂಗಿತ್ತು ಈ ಭಲೇ ಜೋಡಿಯ ಭಲೇ ಆಟ.
ಸಚಿನ್ ತೆಂಡುಲ್ಕರ್-ಸೌರವ್ ಗಂಗೂಲಿ ಟೀಮ್ ಇಂಡಿಯಾ ಕಂಡ ಸರ್ವ ಶ್ರೇಷ್ಠ ಓಪನರ್ಸ್. ಈ ದಿಗ್ಗಜರ ಬಳಿಕ ವೀರೇಂದ್ರ ಸೆಹ್ವಾಗ್-ಗೌತಮ್ ಗಂಭೀರ್ ಆ ಸ್ಥಾನದ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸಿಸಿದ್ರು. ಇವ್ರು ತಂಡದಿಂದ ಸೈಡ್ ಲೈನ್ ಆದ ಮೇಲೆ ಟೀಮ್ ಇಂಡಿಯಾ ಮುಂದಿನ ಓಪನರ್ಸ್ ಯಾರು ಎಂಬ ದೊಡ್ಡ ಪ್ರಶ್ನೆ ತಲೆದೂರಿತ್ತು. ಆ ಪ್ರಶ್ನೆಗೆ ಉತ್ತರವಾಗಿದ್ದು ಶಿಖರ್ ಧವನ್ – ರೋಹಿತ್ ಶರ್ಮಾ.
ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲೂ ಮೋಸ.. ಧವನ್ ದಿಢೀರ್ ನಿವೃತ್ತಿಗೆ ಅಸಲಿ ಕಾರಣ ರಿವೀಲ್..!

ಶಿಖರ್ ಧವನ್-ರೋಹಿತ್ ಶರ್ಮಾ ಓಪನರ್ಗಳಾಗಿ ಇನ್ನಿಂಗ್ಸ್ ಆರಂಭಿಸಲು ಶುರುಮಾಡಿದ್ದು 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ. ಕಿಂಚಿತ್ತೂ ಭಯವಿಲ್ಲದೇ ಎದುರಾಳಿಗಳನ್ನ ತಮ್ಮ ಡೇರ್ ಡೆವಿಲ್ ಆಟದಿಂದಲೇ ಹಿಮ್ಮೆಟ್ಟಿಸ್ತಿದ್ದ ಇವ್ರಿಬ್ಬರು, ಕೆಲವೇ ವರ್ಷಗಳಲ್ಲಿ ವಿಶ್ವ ಕ್ರಿಕೆಟ್ನ ಒನ್ ಆಫ್ ಬೆಸ್ಟ್ ಓಪನರ್ಸ್ ಪಟ್ಟ ಕಬ್ಜ ಮಾಡಿದ್ರು. ಮೂರೂ ಫಾರ್ಮೆಟ್ಗಳಲ್ಲಿ ಹಸಿದ ಹುಲಿಯಂತೆ ರನ್ ಕಲೆಹಾಕಿ ಭಾರತ ತಂಡದ ಅದೆಷ್ಟೋ ಅವಿಸ್ಮರಣೀಯ ಗೆಲುವುಗಳಿಗೆ ಅಡಿಪಾಯ ಹಾಕಿದ್ರು.
ಧವನ್ – ರೋಹಿತ್ ಜುಗಲ್ಬಂದಿ
ಟೀಮ್ ಇಂಡಿಯಾ ಪರ ಒಟ್ಟಾರೆ 173 ಇನ್ನಿಂಗ್ಸ್ಗಳಲ್ಲಿ ಓಪನರ್ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಶಿಖರ್ ಧವನ್ 40.84ರ ಸರಾಸರಿಯಲ್ಲಿ 6984 ರನ್ಗಳಿಸಿದ್ರು. 22 ಶತಕ, 50 ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದ್ರು.
ಇದನ್ನೂ ಓದಿ:ಕೊಹ್ಲಿ ಜರ್ಸಿ 40 ಲಕ್ಷಕ್ಕೆ ಸೇಲ್.. KL ರಾಹುಲ್ ಮಾನವೀಯ ಸೇವೆಗೆ ಹರಿದುಬಂದು ಹಣದ ಹೊಳೆ..!
ಬೊಂಬಾಟ್ ಆಟ.!
ಟೆಸ್ಟ್, ಟಿ20 ಬಿಡಿ.. ಈ ಜೋಡಿ ಅಸಲಿ ಆರ್ಭಟ ನಡೆಸಿರೋದು ಏಕದಿನದಲ್ಲಿ. ಬೌಲರ್ಗಳನ್ನಂತೂ ಇವ್ರಿಬ್ರು ಸಿಂಹಸ್ವಪ್ನದಂತೆ ಕಾಡಿದ್ರು. ಮೊದಲ ವಿಕೆಟ್ಗೆ 18 ಶತಕದ ಜೊತೆಯಾಟ ಆಡಿದ ಹೆಗ್ಗಳಿಕೆ ಧವನ್ – ರೋಹಿತ್ ಜೋಡಿಗಿದೆ. ಸಚಿನ್ – ಗಂಗೂಲಿಯನ್ನ ಬಿಟ್ರೆ, ವಿಶ್ವ ಕ್ರಿಕೆಟ್ನಲ್ಲಿ ಹೆಚ್ಚು ಸೆಂಚುರಿ ಪಾರ್ಟನರ್ಶಿಪ್ ಮಾಡಿರೋದು ಈ ಜೋಡಿಯೇ.
ODIನಲ್ಲಿ ಜುಗಲ್ಬಂದಿ
ಏಕದಿನದಲ್ಲಿ 115 ಇನ್ನಿಂಗ್ಸ್ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಧವನ್-ರೋಹಿತ್ 45.55ರ ಸರಾಸರಿಯಲ್ಲಿ 5148 ರನ್ಗಳಿಸಿದ್ರು. 18 ಬಾರಿ ಶತಕ ಹಾಗೂ 15 ಬಾರಿ ಅರ್ಧಶತಕ ಜೊತೆಯಾಟವಾಡಿದ್ರು.
ಇದನ್ನೂ ಓದಿ:MI ಜೊತೆ KKR ಬಿಗ್ ಡೀಲ್.. ಕ್ಯಾಪ್ಟನ್ಸಿಗಾಗಿ ಸ್ಟಾರ್ ಆಟಗಾರನ ಖರೀದಿಸಲು ಮಾತುಕತೆ.. ರೋಹಿತ್ ಅಲ್ಲ!
ಅವಿಸ್ಮರಣೀಯ ಜೊತೆಯಾಟ
2013ರಲ್ಲಿ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಮ್ ಇಂಡಿಯಾಗೆ 360 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ್ದ ಭಾರತಕ್ಕೆ ಧಮ್ದಾರ್ ಓಪನಿಂಗ್ ನೀಡಿದ್ರು. ಇವರಿಬ್ಬರ ಆರ್ಭಟಕ್ಕೆ ಕಾಂಗರೂಗಳು ಕಂಗಾಲ್ ಆಗಿದ್ರು. 26.1 ಓವರ್ ಗಟ್ಟಿಯಾಗಿ ಕ್ರಿಸ್ ಕಚ್ಚಿ ನಿಂತ ಜೋಡಿ 176 ರನ್ಗಳ ಜೊತೆಯಾಟವಾಡಿತ್ತು. ಇದೇ ಗೆಲುವಿಗೆ ಬುನಾದಿ ಹಾಕ್ತು.
ರೋಹಿತ್-ಧವನ್ ಆಟಕ್ಕೆ ಪಾಕ್ ಪಂಚರ್
2018ರ ಏಷ್ಯಾಕಪ್ನಲ್ಲಿ ಪಾಕಿಸ್ತಾನದ ಬಲಿಷ್ಟ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ್ರು. 238 ರನ್ಗಳ ಟಾರ್ಗೆಟ್ ಬೆನ್ನತ್ತಿದ ವೇಳೆ ಚಿಂದಿ ಬ್ಯಾಟಿಂಗ್ ನಡೆಸಿದ್ದ ಈ ಜೋಡಿ 210 ರನ್ಗಳ ಜೊತೆಯಾಟದ ಕಾಣಿಕೆ ನೀಡಿತ್ತು.
2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರೂ ಓಪನರ್ಗಳಾಗಿ ಕಣಕ್ಕಿಳಿದಿದ್ದ ಮೊದಲ ಪಂದ್ಯದಲ್ಲೇ ಶತಕದ ಜೊತೆಯಾಟವಾಡಿದ್ರು. ಸೌತ್ ಆಫ್ರಿಕಾ ಎದುರು ಸೆಂಚುರಿ ಪಾರ್ಟನರ್ಶಿಪ್ನೊಂದಿಗೆ ಶುಭಾರಂಭ ಮಾಡಿದ್ರು. ಇದೀಗ ಶಿಖರ್ ಧವನ್ ನಿವೃತ್ತಿಯೊಂದಿಗೆ ಈ ಜೋಡಿಯ ಪಾರ್ಟನರ್ಶಿಪ್ ಅಧಿಕೃತವಾಗಿ ಬ್ರೇಕ್ ಆಗಿದೆ. ಈ ಜೋಡಿ ತಂಡಕ್ಕೆ ನೀಡಿದ ಕೊಡುಗೆ, ಫ್ಯಾನ್ಸ್ಗೆ ನೀಡಿದ ಜಬರ್ದಸ್ತ್ ಎಂಟರ್ಟೈನ್ಮೆಂಟ್ ಎಂದಿಗೂ ಹಸಿರಾಗಿ ಉಳಿಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್