newsfirstkannada.com

ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್​ಮ್ಯಾನ್ ದಶಕದ ಕನಸು ನನಸು..!

Share :

Published August 27, 2024 at 9:19am

    ವಿರಾಟ್​-ರೋಹಿತ್ ರನ್ ​ವಾರ್.. ರೋ‘ಹಿಟ್‘..!

    ವರ್ಷದಿಂದ ರೋಹಿತ್ ಶರ್ಮಾ ದರ್ಬಾರ್ ನಡೆಸಿದ್ದಾರೆ

    ವರ್ಷ ಪೂರ್ತಿ ವಿರಾಟ್ ಕೊಹ್ಲಿಯ ಪರದಾಟ ನಡೆಸಿದ್ದಾರೆ

ರೋಹಿತ್ ಶರ್ಮಾ ವರ್ಸಸ್ ವಿರಾಟ್​ ಕೊಹ್ಲಿ. ವಿಶ್ವ ಕ್ರಿಕೆಟ್​ನಲ್ಲಿ ಇಬ್ಬರ ಹೆಸರಿಗಿರುವ ಕ್ರೇಜ್ ಬೇರೆ ಯಾರಿಗೂ ಇಲ್ಲ. ನಿಜಕ್ಕೂ ನೆಕ್ಸ್ಟ್​ ಲೆವೆಲ್ ಬಿಡಿ. ಇವರಿಬ್ಬರ ಹೆಸರು ಕೇಳಿದ್ರೆ ಸಾಕು. ಅಲ್ಲೊಂದು ಡಿಬೇಟ್ ಖಂಡಿತ ನಡೆದೇ ನಡೆಯುತ್ತೆ. ಯಾರು ಬೆಸ್ಟ್​ ಅಂತಾ? ಪ್ರತಿ ಸಲ ಕೊಹ್ಲಿಯೇ ಗೆಲ್ತಾ ಇದ್ದಿದ್ದು. ಆದ್ರೀಗ ವಿರಾಟ್​ ಕೊಹ್ಲಿಯನ್ನ ಹಿಂದಿಕ್ಕಬೇಕು ಅನ್ನೋ ರೋಹಿತ್ ಶರ್ಮಾ ಕನಸು ನನಸಾಗಿದೆ.

ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ. ಟೀಮ್ ಇಂಡಿಯಾದ ಭಲೇ ಜೋಡಿ.. ಇವರಿಬ್ಬರ ಜುಗಲ್​ಬಂದಿಯಲ್ಲಿ ಟೀಮ್ ಇಂಡಿಯಾದ ಸಾಧನೆ ಅಪಾರ. ಇವರೆ ಸದ್ಯ ಟೀಮ್ ಇಂಡಿಯಾದ ಡೈನಾಮಿಕ್ DUO.. 1980ರಲ್ಲಿ ಕಪಿಲ್ ದೇವ್ ಆ್ಯಂಡ್ ಸುನೀಲ್ ಗವಾಸ್ಕರ್. 1990ರ ಅವಧಿಯಲ್ಲಿ ಅಜರುದ್ದೀನ್ ಆ್ಯಂಡ್ ಸಚಿನ್​​​​​​​​​​​ ತೆಂಡುಲ್ಕರ್, ನಂತರ ಗಂಗೂಲಿ-ದ್ರಾವಿಡ್​​ ಟೀಮ್ ಇಂಡಿಯಾದ ಜೋಡೆತ್ತುಗಳಾಗಿ ದುಡಿದವರು. ಇಂಥದ್ದೇ ಸಾಲಿಗೆ ಸೇರಿದವರು ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ.

ಇದನ್ನೂ ಓದಿ:ಕೊಹ್ಲಿ, ರೋಹಿತ್​​ಗೆ ಮಾತ್ರ ವಾರ್ನಿಂಗ್.. ಬುಮ್ರಾ ವಿಚಾರದಲ್ಲಿ ಸೈಲೆಂಟ್.. BCCI ಅಸಲಿ ಕತೆ ರಿವೀಲ್..!

ಹಿರಿಯರ ಹಾದಿಯಲ್ಲೇ ಸಾಗಿದ ಇಬ್ಬರಿಗೆ ಎದುರಾಳಿ ಯಾರೇ ಆಗಲಿ, ಪಿಚ್ ಯಾವುದೇ ಆಗಲಿ.. ರನ್ ಗಳಿಸೋದೊಂದೇ ಮೂಲ ಮಂತ್ರ.. ಬ್ಯಾಟಿಂಗ್ ಶೈಲಿ, ವ್ಯಕ್ತಿತ್ವ ವಿಭಿನ್ನವಾಗಿದ್ದರು. ಗೆಲುವಿಗಾಗಿ ವೀರ ಸೈನಿಕರಂತೆ ಹೋರಾಡುವ ಮ್ಯಾಚ್ ವಿನ್ನರ್​ಗಳು. ಒಂದೇ ಮಾತಲ್ಲಿ ಹೇಳೋದಾದ್ರೆ ಇವ್ರೇ ಟೀಮ್ ಇಂಡಿಯಾದ ಆಧಾರಸ್ಥಂಭಗಳು. ಇದೇ ಕಾರಣಕ್ಕೆ ಇವರಿಬ್ಬರ ನಡುವಿನ ರನ್​​​ವಾರ್​ ಸೆನ್ಸೇಷನ್​ ಸೃಷ್ಟಿಸುತ್ತೆ. ಈವರೆಗೆ ಎಂದೂ ವಿರಾಟ್​ ಕೊಹ್ಲಿಯನ್ನ ರೋಹಿತ್ ಹಿಂದಿಕ್ಕಿರಲಿಲ್ಲ.

ರೋಹಿಶ್​ ಶರ್ಮಾರ ದಶಕದ ಕನಸು..!
ಟೀಮ್​ ಇಂಡಿಯಾ ಈ ಸೂಪರ್​ ಸ್ಟಾರ್​​ ಜೋಡಿಗಳ ನಡುವಿನ ರೇಸ್​ನಲ್ಲಿ ದಶಕದಿಂದ ಸುಲ್ತಾನ ವಿರಾಟ್​ ಕೊಹ್ಲಿಯದ್ದೇ ಜಯಭೇರಿ. ಪ್ರತಿ ಸೀಸನ್​ನಲ್ಲೂ ರನ್​ಗಳಿಕೆಯಲ್ಲಿ ಕಿಂಗ್​ ಕೊಹ್ಲಿ ಟಾಪರ್​ ಆಗಿದ್ರು. ಫಸ್ಟ್​ ಟೈಮ್​ ವಿರಾಟ್​ ಕೊಹ್ಲಿಗೆ ರೋಹಿತ್ ಶರ್ಮಾ ಸೆಡ್ಡು ಹೊಡೆದಿದ್ದಾರೆ. ಅದು ಕೂಡ 3 ಫಾರ್ಮೆಟ್​ನಲ್ಲಿ. ವಿರಾಟ್​ ಕೊಹ್ಲಿಯನ್ನ ಹಿಂದಿಕ್ಕಿ ರೋಹಿತ್, ನಾನೇ ವಿಶ್ವ ಕ್ರಿಕೆಟ್​ನ ರಾಜ ಅಂತಿದ್ದಾರೆ.

ವರ್ಷದಿಂದ ರೋಹಿತ್ ಶರ್ಮಾದ್ದೇ ದರ್ಬಾರ್
ವಿರಾಟ್​ ಕೊಹ್ಲಿ ಹಾಗೂ ರೋಹಿತ್ ನಡುವಿನ ರನ್​ವಾರ್​. ನಿನ್ನೆ, ಮೊನ್ನೆಯದಲ್ಲ. ಬಹು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಆದ್ರೆ, ಈ ರನ್​ವಾರ್​ನಲ್ಲಿ ಎಂದೂ ವಿರಾಟ್, ಸೋತವರಲ್ಲ. ಆದ್ರೆ, ಕಳೆದ ಒಂದು ವರ್ಷದಿಂದ ಮೂರು ಫಾರ್ಮೆಟ್​ನಲ್ಲಿ ರನ್ ಶಿಖರ ಕಟ್ಟುತ್ತಿರುವ ರೋಹಿತ್, ವಿರಾಟ್​​ ಕೊಹ್ಲಿಗೆ ಟಕ್ಕರ್ ನೀಡಿದ್ದಾರೆ. ಇವರಿಬ್ಬರ ನಡುವಿನ ರನ್​ ಗಳಿಕೆ ನೋಡಿದ್ರೆ, ಪ್ರತಿ ಫಾರ್ಮೆಟ್​ನಲ್ಲಿ ರೋಹಿತ್ ಶರ್ಮಾಗಿಂತ ವಿರಾಟ್​​​​​​​​ ಹಿಂದಿದ್ದಾರೆ.

ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ

2023 ಆಗಸ್ಟ್​ನಿಂದ ಏಕದಿನದಲ್ಲಿ ರೋಹಿತ್-ಕೊಹ್ಲಿ..!
2023ರ ಆಗಸ್ಟ್​ನಿಂದ 2024ರ ಆಗಸ್ಟ್​ ಅವಧಿಯಲ್ಲಿ ರೋಹಿತ್ ಆಡಿದ 21 ಏಕದಿನ ಪಂದ್ಯದಿಂದ 1029 ರನ್ ಗಳಿಸಿದ್ದು 1 ಶತಕ, 9 ಅರ್ಧಶತಕ ಸಿಡಿಸಿದ್ದಾರೆ. ಇದೇ ಅವಧಿಯಲ್ಲಿ 20 ಪಂದ್ಯಗಳನ್ನಾಡಿರುವ ವಿರಾಟ್, 1008 ರನ್ ಕಲೆ ಹಾಕಿದ್ದಾರೆ. ಈ ಪೈಕಿ 4 ಶತಕ, 7 ಅರ್ಧಶತಕ ಸಿಡಿಸಿದ್ದಾರೆ.

2023 ಆಗಸ್ಟ್​ನಿಂದ ಟಿ20ಲ್ಲಿ ರೋಹಿತ್-ಕೊಹ್ಲಿ..!
ಟಿ20ಯಲ್ಲೂ ರೋಹಿತ್ ಶರ್ಮಾನೇ ರನ್ ಗಳಿಕೆಯಲ್ಲಿ ಮುಂದಿದ್ದಾರೆ. 11 ಪಂದ್ಯಗಳಿಂದ 1 ಶತಕ, 3 ಅರ್ಧಶತಕ ಒಳಗೊಂಡ 378 ರನ್ ರೋಹಿತ್ ಸಿಡಿಸಿದ್ದಾರೆ. ವಿರಾಟ್​, 10 ಪಂದ್ಯಗಳಿಂದ 180 ರನ್ ಸಿಡಿಸಿದ್ದಾರೆ. ಕೊಹ್ಲಿ ಬ್ಯಾಟ್​​ನಿಂದ ಒಂದೇ ಒಂದು ಅರ್ಧಶತಕ ದಾಖಲಾಗಿದೆ.

2023 ಆಗಸ್ಟ್​ನಿಂದ ಟೆಸ್ಟ್​ನಲ್ಲಿ ರೋಹಿತ್-ಕೊಹ್ಲಿ
2023ರ ಅಗಸ್ಟ್​ನಿಂದ ಟೆಸ್ಟ್​ನಲ್ಲಿ 7 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ, 2 ಶತಕ, 1 ಅರ್ಧಶತಕ ಒಳಗೊಂಡ 460 ರನ್​​ ಸಿಡಿಸಿದ್ದಾರೆ. ವಿರಾಟ್ ಆಡಿರೋ 2 ಪಂದ್ಯಗಳಿಂದ ಒಂದು ಹಾಫ್ ಸೆಂಚೂರಿ ಸಹಿತ 172 ರನ್ ಗಳಿಸಿದ್ದಾರೆ.

ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!

ಇಂಗ್ಲೆಂಡ್​ ಟೆಸ್ಟ್​ ತೆಗೆದರೂ ರೋಹಿತ್​ ಶರ್ಮಾನೇ ಮುಂದು..!
ಏಕದಿನ ಹಾಗೂ ಟಿ20ಯಲ್ಲಿ ವಿರಾಟ್ ಹಾಗೂ ರೋಹಿತ್ ಸಮಬಲರಾಗೇ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ ವಿರಾಟ್ ಇಂಗ್ಲೆಂಡ್ ಸರಣಿಯಿಂದ ದೂರ ಉಳಿದಿದ್ರು. ವಿರಾಟ್​ ಅಲಭ್ಯತೆಯಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ ಆಡಿದ 5 ಪಂದ್ಯಗಳಲ್ಲಿ 2 ಶತಕ, 1 ಅರ್ಧಶತಕ ಒಳಗೊಂಡ 400 ರನ್ ಸಿಡಿಸಿದ್ರು. ಈ ರನ್​ಗಳನ್ನ ​ರೋಹಿತ್ ಶರ್ಮಾ ಖಾತೆಯಿಂದ ತೆಗೆದರೂ, ಒಟ್ಟಾರೆ ರನ್​ಗಳಿಕೆಯಲ್ಲಿ ಕೊಹ್ಲಿ 219 ರನ್​ಗಳಿಂದ ಹಿಂದೆ ಉಳಿಯುತ್ತಾರೆ.

ಕೊಹ್ಲಿ ನಾಯಕತ್ವ ಮೀರಿಸಿದ ರೋಹಿತ್ ಶರ್ಮಾ
ರನ್​ ಗಳಿಕೆಯಲ್ಲೇ ಅಲ್ಲ. ನಾಯಕತ್ವದಲ್ಲೂ ರೋಹಿತ್​ನ ವಿರಾಟ್​ ಮೀರಿಸಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಸರ್ವಶೇಷ್ಠ ಪ್ರದರ್ಶನ ನೀಡಿದೆ. ಟಿ20 ವಿಶ್ವಕಪ್​ ಗೆದ್ದಿದ್ರೆ, ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ನಾಯಕತ್ವದಲ್ಲೇ ಭಾರತ ತಂಡ ಫೈನಲ್​​ ತಲುಪಿದೆ. ಆದ್ರೆ, ವಿರಾಟ್​ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಅನ್ನೋದು ಮರೀಚಿಕೆಯಾಗಿದೆ.

ಕಳೆದೊಂದು ದಶಕದಿಂದ ನಾನೇ ರಾಜ.. ನಾನೇ ವೀರ ಅಂಥೆಲ್ಲಾ ಮೆರೆಯುತ್ತಿದ್ದ ವಿರಾಟ್ ಈಗ ಡಲ್ ಆಗಿದ್ದಾರೆ. ಇನ್ನೊಂದೆಡೆ ರೋಹಿತ್ ದರ್ಬಾರ್ ಮಾತ್ರ ದಿನದಿಂದ ದಿನಕ್ಕೆ​ ಜೋರಾಗಿದೆ. ಪರಸ್ಪರ ರನ್​ಗಳಿಕೆಯ ಲೆಕ್ಕಾಚಾರದ ಹೊರತಾಗಿ ಈ ಇಬ್ಬರ ಆಟ ಟೀಮ್​ ಇಂಡಿಯಾ ಗೆಲುವಿಗಂತೂ ಕಾರಣವಾಗ್ತಿದೆ. ಫ್ಯಾನ್ಸ್​ಗೆ ಅದೇ ಖುಷಿಯ ವಿಚಾರ.

ಇದನ್ನೂ ಓದಿ:KL ರಾಹುಲ್ ಆರ್ಭಟದ ಮುಂದೆ ಮಂಕಾಗಿದ್ದ ಧವನ್; ‘ರಾಹುಲ್​​ ವಿಲನ್ ಆದರು’ ಎಂದ ಫ್ಯಾನ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್​ಮ್ಯಾನ್ ದಶಕದ ಕನಸು ನನಸು..!

https://newsfirstlive.com/wp-content/uploads/2024/06/Kohli_Rohit1.jpg

Load More