ಕ್ಯೂರಿಯಾಸಿಟಿ ಹುಟ್ಟಿಸಿದ ರಾಹುಲ್-ಗೊಯೆಂಕಾ ಭೇಟಿ
ಸುದೀರ್ಘ ಒಂದು ಗಂಟೆಯ ಚರ್ಚೆಯಲ್ಲಿ ನಡೆದಿದ್ದೇನು..?
ರಾಹುಲ್ ಮನವೊಲಿಕೆ ಮಾಡಿದ್ರಾ ಲಕ್ನೋ ಮಾಲೀಕರು..?
ಆರ್ಸಿಬಿಗೆ ಕೆ.ಎಲ್.ರಾಹುಲ್ ಬರಲ್ವಾ? ಲಕ್ನೋದಲ್ಲೇ ಉಳೀತಾರಾ? ಇಂಥದ್ದೊಂದು ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಗಿರಗಿಟ್ಲೆ ಹೊಡೀತಿದೆ. ಇದಕ್ಕೆಲ್ಲಾ ಕಾರಣ ಮಾಲೀಕ ಸಂಜಯ್ ಗೋಯಾಂಕಾ ಆ್ಯಂಡ್ ಕೆ.ಎಲ್.ರಾಹುಲ್ ಮೀಟಿಂಗ್. ಈ ವಿಚಾರ ಆರ್ಸಿಬಿ ಫ್ಯಾನ್ಸ್ಗೆ ಸಹಜವಾಗಿಯೇ ಶಾಕ್ ಆಗಿದೆ.
ಸಂಜೀವ್ ಗೊಯೆಂಕಾ ಮೀಟ್ ಕೆ.ಎಲ್.ರಾಹುಲ್. ಈ ಒಂದು ಸುದ್ದಿ ಹೊರಬಿದ್ದಿದ್ದೇ ತಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಕೆ.ಎಲ್.ರಾಹುಲ್ ಮತ್ತೆ ಲಕ್ನೋಗೆ ಹೋಗ್ತಾರಾ? ತವರಿಗೆ ಬರಲ್ವಾ ಅನ್ನೋ ನಿರಾಸ ಭಾವನೆಯನ್ನೇ ಮೂಡಿಸಿತ್ತು. ಈ ಮೀಟಿಂಗ್ನಲ್ಲಿ ಏನೆಲ್ಲಾ ನಡೆದಿರುತ್ತೆ ಅನ್ನೋ ಗುಸುಗುಸು ಸೋಶಿಯಲ್ ಮೀಡಿಯಾದ ಟ್ರೆಂಡ್ ಆಗಿತ್ತು. ಆದ್ರೀಗ ಆ ಮೀಟಿಂಗ್ನ ಇನ್ಸೈಡ್ ಸ್ಟೋರಿ ಹೊರಬಿದ್ದಿದೆ.
ಇದನ್ನೂ ಓದಿ:KL ರಾಹುಲ್ ಆರ್ಭಟದ ಮುಂದೆ ಮಂಕಾಗಿದ್ದ ಧವನ್; ‘ರಾಹುಲ್ ವಿಲನ್ ಆದರು’ ಎಂದ ಫ್ಯಾನ್ಸ್..!
ರಾಹುಲ್-ಗೊಯೆಂಕಾ ಭೇಟಿ ..!
ನಿನ್ನೆಯ ತನಕ ಕೆ.ಎಲ್.ರಾಹುಲ್, ಲಕ್ನೋ ಬಿಡ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇದಕ್ಕೆ ಕಾರಣ ಕೆ.ಎಲ್.ರಾಹುಲ್ ಆ್ಯಂಡ್ ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೊಯೆಂಕಾ ನಡುವಿನ ಬೈದಾಟ. ಆದ್ರೀಗ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೆ.ಎಲ್.ರಾಹುಲ್ ಕೋಲ್ಕತ್ತಾದಲ್ಲಿರೋ ಸಂಜೀವ್ ಗೊಯೆಂಕಾರ ಆಫೀಸ್ಗೆ ಭೇಟಿ ಕೊಟ್ಟಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಕೊಲ್ಕತ್ತಾದ ಅಲಿಪೋರ್‌ನ ಜಡ್ಜಸ್ ಕೋರ್ಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಕೆ.ಎಲ್.ರಾಹುಲ್, ಸಂಜೀವ್ ಗೊಯೆಂಕಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುದೀರ್ಘ ಒಂದು ಗಂಟೆಯ ಕಾಲ ನಡೆದ ಈ ಮೀಟಿಂಗ್ನಲ್ಲಿ ರಿಟೈನ್ ಕುರಿತಾಗಿಯೇ ಚರ್ಚೆ ನಡೆದಿದೆ. ಇದೇ ಮಾತುಕತೆಯೇ ಕ್ಯಾಪ್ಟನ್ ರಾಹುಲ್ನ ಉಳಿಸಿಕೊಳ್ಳಲು ಲಕ್ನೋ ಮುಂದಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್ಮ್ಯಾನ್ ದಶಕದ ಕನಸು ನನಸು..!
ಲಕ್ನೋ ರಿಟೈನ್ಗೆ ಕ್ಯಾಪ್ಟನ್ ಕೆ.ಎಲ್.ರಾಹುಲ್ ಒಲವು?
ಕೆ.ಎಲ್.ರಾಹುಲ್ ಆ್ಯಂಡ್ ಸಂಜೀವ್ ಗೊಯೆಂಕಾ ಭೇಟಿ ವೇಳೆ ರಿಟೈನ್ ವಿಚಾರ ಪ್ರಸ್ತಾಪವಾಗಿದೆ. ರಿಟೈನ್ ವಿಷ್ಯದಲ್ಲಿ ತಮ್ಮ ಅಭಿಪ್ರಾಯವನ್ನು ಸಂಜೀವ್ ಗೊಯೆಂಕಾ, ರಾಹುಲ್ ಮುಂದೆ ಮಂಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ರಾಹುಲ್ ಕೂಡ ರಿಟೈನ್ ಆಗುವ ಬಗ್ಗೆ ಲಕ್ನೋ ಫ್ರಾಂಚೈಸಿ ಮಾಲೀಕರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ.
ಕೆ.ಎಲ್.ರಾಹುಲ್ಗೆ ಷರತ್ತು ಅನ್ವಯ
ಕೆ.ಎಲ್.ರಾಹುಲ್, ಸಂಜೀವ್ ಗೊಯೆಂಕಾ ರಿಟೈನ್ ವಿಚಾರವಾಗೇ ಚರ್ಚೆ ನಡೆದಿದೆ ನಿಜ. ಈ ವೇಳೆ ಕೆ.ಎಲ್.ರಾಹುಲ್ಗೆ ಸಂಜೀವ್ ಯಾವುದೇ ಭರವಸೆ ನೀಡಿಲ್ಲ. ಹೊಸ ರಿಟೆನ್ಶನ್, ನ್ಯೂ ಪರ್ಸ್ ರೂಲ್ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳುವ ಲೆಕ್ಕಚಾರದಲ್ಲಿದೆ. ಮೂಲಗಳ ಪ್ರಕಾರ, ನಿಕೋಲಸ್ ಪೂರನ್ ಬಗ್ಗೆ ಒಲವು ಹೊಂದಿರುವ ಲಕ್ನೋ, ಮುಂದಿನ ಸೀಸನ್ನಲ್ಲಿ ನಾಯಕನ ಪಟ್ಟಕಟ್ಟುವ ಇರಾದೆಯೂ ಹೊಂದಿದೆ. ಕೆ.ಎಲ್.ರಾಹುಲ್ ಮೊದಲ ರಿಟೈನ್ ಆಯ್ಕೆಗೆ ಆಸಕ್ತಿ ಹೊಂದಿಲ್ಲ ಎನ್ನಲಾಗ್ತಿದೆ.
ಇದನ್ನೂ ಓದಿ:ಈ ಆಟಗಾರರಿಗೆ ರೋಹಿತ್ ಶರ್ಮಾ ಕೊಟ್ರು ಎಚ್ಚರಿಕೆ; ಯಂಗ್ಸ್ಟರ್ ಕಲಿಯೋದು ತುಂಬಾನೇ ಇದೆ
ಲಕ್ನೋದಲ್ಲೇ ಉಳೀತಾರಾ..? ಹರಾಜಿಗೆ ಬರ್ತಾರಾ..?
3 ಸೀಸನ್ಗಳಿಂದ ನಾಯಕನಾಗಿ ಕೆ.ಎಲ್.ರಾಹುಲ್ ಲಕ್ನೋ ತಂಡವನ್ನ ಮುನ್ನಡೆಸಿದ್ದಾರೆ. ತಂಡದ ಯಶಸ್ಸಿನಲ್ಲಿ ಭಾಗಶಃ ಕನ್ನಡಿಗನ ಪಾತ್ರ ಇದೆ. ಆದ್ರೀಗ ತಾನೇ ಕಟ್ಟಿದ ತಂಡಕ್ಕೆ ಫಸ್ಟ್ ಚಾಯ್ಸ್ ರಿಟೈನ್ ಆ್ಯಂಡ್ ಕ್ಯಾಪ್ಟನ್ ಆಗ್ತಿಲ್ಲ. ಹೀಗಾಗಿ ಲಕ್ನೋ ತಂಡದಲ್ಲೇ ಆಟಗಾರನಾಗಿಯೇ ಉಳಿಯಲಿದ್ದಾರಾ? ಅಥವಾ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಯ ಜೊತೆಗೆ ಮುಂದಿನ ನಡೆ ಏನೆಂಬ ಕೂತೂಹಲ ಗರಿಗೆದರಿದೆ.
RCB ಫ್ಯಾನ್ಸ್ಗೆ ಶಾಕ್ ಕೊಡ್ತಾರಾ..
ಕೆ.ಎಲ್.ರಾಹುಲ್ ಮುಂದಿನ ನಡೆ ಬಗ್ಗೆ ಆರ್ಸಿಬಿ ಫ್ಯಾನ್ಸ್ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.ಯಾಕಂದ್ರೆ, ಲಕ್ನೋ ತೊರೆದ್ರೆ, ಆರ್ಸಿಬಿ ರಾಹುಲ್ನ ಖರೀದಿ ಮಾಡುವ ಚಿಂತನೆಯಲ್ಲಿದೆ. ತವರಿನ ತಂಡದಲ್ಲಿ ಮತ್ತೆ ಕನ್ನಡಿಗನನ್ನ ನೋಡಬಹುದು ಅನ್ನೋದು ಆರ್ಸಿಬಿ ಅಭಿಮಾನಿಗಳ ಮಹಾದಾಸೆ. ಕೆ.ಎಲ್.ರಾಹುಲ್, ಅಭಿಮಾನಿಗಳ ಆಸೆಯಂತೆ ಮೆಗಾ ಹರಾಜಿಗೆ ಬರ್ತಾರಾ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.
ಇದನ್ನೂ ಓದಿ:T20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ 5 RCB ಆಟಗಾರರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್