newsfirstkannada.com

ಕ್ಯಾಪ್ಟನ್ ರೋಹಿತ್ ಶರ್ಮಾ ಖಡಕ್ ಎಚ್ಚರಿಕೆ; ಯುವ ಆಟಗಾರರಿಗೆ ಢವಢವ..!

Share :

Published August 28, 2024 at 7:04am

Update August 29, 2024 at 1:32pm

    ಟೆಸ್ಟ್​ ಸೀಸನ್​​ಗೆ ಹಿಟ್​​ಮ್ಯಾನ್​​​ ಸಿದ್ಧತೆ ಹೇಗಿದೆ..?

    ಅಭ್ಯಾಸದ ಮೇಲೆ ಕೋಚ್ ಅಭಿಶೇಕ್​ ನಾಯರ್​ ಕಣ್ಣು

    6 ತಿಂಗಳು, 10 ಟೆಸ್ಟ್​​, ಟಾರ್ಗೆಟ್​​ WTC ಫೈನಲ್ಸ್​..!

ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಬಾಂಗ್ಲಾ ಟೈಗರ್ಸ್​ ಬೇಟೆಗೆ ಹಸಿದ ಹುಲಿಯಂತೆ ಸಜ್ಜಾಗ್ತಿದ್ದಾರೆ. ಶ್ರೀಲಂಕಾ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿದ್ದ ರೋಹಿತ್​, ಅಭ್ಯಾಸದ ಕಣಕ್ಕೆ ಧುಮುಕಿದ್ದಾರೆ. ಸಮರಾಭ್ಯಾಸ ಆರಂಭಿಸೋ ಮೂಲಕ ಉಳಿದ ಆಟಗಾರರಿಗೆ ಸ್ಟ್ರೇಟ್ ​ಹಿಟ್​ ಸಂದೇಶ ರವಾನಿಸಿದ್ದಾರೆ.

ಮುಂಬರೋ ಬಾಂಗ್ಲಾದೇಶ ಎದುರಿನ ಟೆಸ್ಟ್​ ಸರಣಿಗೆ ಟೀಮ್​ ಇಂಡಿಯಾದಲ್ಲಿ ಸದ್ದಿಲ್ಲದೇ ಸಿದ್ಧತೆ ಶುರುವಾಗಿದೆ. ಶ್ರೀಲಂಕಾ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿದ್ದ ಕ್ರಿಕೆಟಿಗರೆಲ್ಲಾ ಅಭ್ಯಾಸದ ಕಣಕ್ಕೆ ಮರಳ್ತಿದ್ದಾರೆ. ಲಂಕಾ ಪ್ರವಾಸದಿಂದ ವಾಪಾಸ್ಸಾದ ಬಳಿಕ ಫ್ಯಾಮಿಲಿಗೆ ಸಮಯ ಮೀಸಲಿಟ್ಟಿದ್ದ ಕ್ಯಾಪ್ಟನ್ ರೋಹಿತ್​ ಶರ್ಮಾ ಕೂಡ ಸಮರಾಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಯುವ ಆಟಗಾರರಿಗೆ ಎದ್ದೇಳುವಂತೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ.. ಬೂಮ್ರಾ ವಿಶ್ರಾಂತಿ ಹಿಂದಿನ ಸಿಕ್ರೇಟ್ ರಿವೀಲ್..!

ಟೆಸ್ಟ್​ ಸೀಸನ್​ಗೆ ಕ್ಯಾಪ್ಟನ್​ ರೋಹಿತ್​ ಭರ್ಜರಿ ಸಿದ್ಧತೆ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ ಆರಂಭದೊಂದಿಗೆ ಟೀಮ್​ ಇಂಡಿಯಾ ಟೆಸ್ಟ್​​ ಸೀಸನ್​ ಶುರುವಾಗಲಿದೆ. ಇದ್ರ ಸಿದ್ಧತೆಯ ಭಾಗವಾಗಿ ಟೀಮ್ ಇಂಡಿಯಾದ ಹಲವು ಆಟಗಾರರು ದುಲೀಪ್​ ಟ್ರೋಫಿಯನ್ನ ಆಡ್ತಿದ್ದಾರೆ. ದುಲೀಪ್​ ಟ್ರೋಫಿಯಿಂದ ಹೊರಗುಳಿದಿರೋ ರೋಹಿತ್, ಸ್ಪೆಷಲ್​ ಪ್ರಾಕ್ಟಿಸ್​ ಆರಂಭಿಸಿದ್ದಾರೆ. ರೋಹಿತ್​ ಅಭ್ಯಾಸದ ಮೇಲೆ ಟೀಮ್​ ಇಂಡಿಯಾದ ಅಸಿಸ್ಟೆಂಟ್​ ಕೋಚ್​, ಗೆಳೆಯ ಅಭಿಶೇಕ್​ ನಾಯರ್​​​ ಹದ್ದಿನ ಕಣ್ಣಿಟ್ಟಿದ್ದಾರೆ.

ಮುಂಬೈನಲ್ಲಿ ಹಿಟ್​ಮ್ಯಾನ್​ ರೋಹಿತ್​ ಸಮರಾಭ್ಯಾಸ
ಶ್ರೀಲಂಕಾ ಸರಣಿಯ ಬಳಿಕ ರೋಹಿತ್​ ಶರ್ಮಾ ಮೈದಾನದಿಂದ ಹೊರಗುಳಿದಿದ್ದಾರೆ. ಬಾಂಗ್ಲಾ ವಿರುದ್ಧದ ಸರಣಿಗೂ ಮುನ್ನ ಯಾವುದೇ ಪಂದ್ಯಗಳನ್ನಾಡಲ್ಲ. ಮುಂದೆ ಸಾಲು ಸಾಲು ಟೆಸ್ಟ್​​ ಸರಣಿಗಳ ಬಿಗ್​ ಟಾಸ್ಕ್​ ಇದೆ. ಫಾರ್ಮ್​ ಜೊತೆಗೆ ಇಂಜರಿ ಫ್ರಿಯಾಗಿರಬೇಕಾದ ದೊಡ್ಡ ಸವಾಲು ಆಟಗಾರರ ಮುಂದಿದೆ. ಹೀಗಾಗಿ ಟೀಮ್​ ಇಂಡಿಯಾ ಕ್ಯಾಪ್ಟನ್​ ಫಿಟ್​ನೆಸ್​ ಮೇಲೆ ಹೆಚ್ಚು ಫೋಕಸ್​ ಮಾಡ್ತಿದ್ದಾರೆ. ಅದ್ರ ಭಾಗವಾಗಿ ಕಾರ್ಡಿಯೋ, ರನ್ನಿಂಗ್​, ಜಿಮ್​ಸೆಷನ್​​ಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್​ಮ್ಯಾನ್ ದಶಕದ ಕನಸು ನನಸು..!

5 ತಿಂಗಳ ಬಳಿಕ ಟೆಸ್ಟ್​​ ಕ್ರಿಕೆಟ್​ಗೆ ಕಮ್​ಬ್ಯಾಕ್​
ಈ ವರ್ಷದ ಆರಂಭದಲ್ಲಿ ಆಡಿದ ಇಂಗ್ಲೆಂಡ್​ ವಿರುದ್ಧ ರೋಹಿತ್​ ಕೊನೆಯದಾಗಿ ಟೆಸ್ಟ್​ ಪಂದ್ಯವನ್ನಾಡಿದ್ದು. 5 ಪಂದ್ಯಗಳ ಸರಣಿಯಲ್ಲಿ ಧೂಳೆಬ್ಬಿಸಿದ ರೋಹಿತ್​ ಶರ್ಮಾ, ಬೌಲರ್​​ಗಳ ಬೆಂಡೆತ್ತಿದ್ರು. 9 ಇನ್ನಿಂಗ್ಸ್​ಗಳಲ್ಲಿ 44.44ರ ಸರಾಸರಿಯಲ್ಲಿ 400 ರನ್​​ ಗಳಿಸಿದ್ರು. 2 ಸೆಂಚುರಿಗಳನ್ನೂ ಸಿಡಿಸಿ ಅಬ್ಬರಿಸಿದ್ರು. ಆ ಟೆಸ್ಟ್​ ಸರಣಿಯೇ ಕೊನೆ. ಆ ಬಳಿಕ ರೋಹಿತ್​ ಶರ್ಮಾ ರೆಡ್​ಬಾಲ್​ ಕ್ರಿಕೆಟ್​ ಆಡಿಲ್ಲ. ಐಪಿಎಲ್​, ಟಿ20 ವಿಶ್ವಕಪ್​ ಬಳಿಕ ಶ್ರೀಲಂಕಾ ಟೂರ್​ ಸೇರಿದಂತೆ ಕಳೆದ 5 ತಿಂಗಳಿಂದ ವೈಟ್​ಬಾಲ್​ ಫಾರ್ಮೆಟ್​ಗೆ ಸೀಮಿತವಾಗಿದ್ದಾರೆ. ಸುದೀರ್ಘ ಅಂತರದ ಬಳಿಕ ಇದೀಗ ರೆಡ್​ಬಾಲ್​ ಕ್ರಿಕೆಟ್​ಗೆ ರೋಹಿತ್​ ಮರಳ್ತಿದ್ದಾರೆ. ವೈಟ್​​ಬಾಲ್​ ಕ್ರಿಕೆಟ್​ನಿಂದ ರೆಡ್​​ ಬಾಲ್​ ಕ್ರಿಕೆಟ್​ಗೆ ಮೆಂಟಲಿ ಹಾಗೂ ಟೆಕ್ನಿಕಲಿ ಶಿಫ್ಟ್​ ಆಗೋದೇ ರೋಹಿತ್​ ಮುಂದಿರೋ ದೊಡ್ಡ ಸವಾಲಾಗಿದೆ.

6 ತಿಂಗಳು, 10 ಟೆಸ್ಟ್​​, ಟಾರ್ಗೆಟ್​​ WTC ಫೈನಲ್ಸ್​
ಮುಂದಿನ 6 ತಿಂಗಳಲ್ಲಿ ಟೀಮ್​ ಇಂಡಿಯಾ ಒಟ್ಟು 10 ಟೆಸ್ಟ್​ ಪಂದ್ಯಗಳನ್ನಾಡಲಿದೆ. ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್​ ಪಂದ್ಯಗಳನ್ನಾಡಿದ್ರೆ, ಆ ಬಳಿಕ ನ್ಯೂಜಿಲೆಂಡ್​ ವಿರುದ್ಧ 3 ಟೆಸ್ಟ್​ ಪಂದ್ಯಗಳನ್ನ ಆಡಲಿದೆ. ವರ್ಷಾಂತ್ಯದಲ್ಲಿ ರೋಹಿತ್​​ ಪಡೆ ಆಸ್ಟ್ರೇಲಿಯಾ ವಿರುದ್ಧ ಕಾಂಗರೂಗಳ ನಾಡಲ್ಲಿ 5 ಟೆಸ್ಟ್​ ಪಂದ್ಯಗಳನ್ನಾಡಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ಗೆ ಎಂಟ್ರಿಗೆ ಈ ಪಂದ್ಯಗಳ ಗೆಲುವು ನಿರ್ಣಾಯಕ ಪಾತ್ರ ನಿರ್ವಹಿಸಲಿವೆ.

ಲಂಕಾ ಸರಣಿಯ ಬಳಿಕ ವಿಶ್ರಾಂತಿಗೆ ಜಾರಿದ್ದ ರೋಹಿತ್​ ಶರ್ಮಾ, ಟೆಸ್ಟ್​ ಸೀಸನ್​ಗೆ ಸಿದ್ಧತೆಯನ್ನ ಆರಂಭಿಸಿದ್ದಾರೆ. ಈ ಸಿದ್ಧತೆ ತಂಡದ ಇತರ ಆಟಗಾರರಿಗೆ ಸಿದ್ಧತೆ ಆರಂಭಿಸಿ ಅನ್ನೋ ಇನ್​​ಡೈರೆಕ್ಟ್​ ಮೇಸೆಜ್​ ಆಗಿದ್ರೆ ಎದುರಾಳಿ ಪಡೆಗೆ ಎಚ್ಚರಿಕೆಯ ಸಂದೇಶವಾಗಿದೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​​ಗೆ ಮಾತ್ರ ವಾರ್ನಿಂಗ್.. ಬುಮ್ರಾ ವಿಚಾರದಲ್ಲಿ ಸೈಲೆಂಟ್.. BCCI ಅಸಲಿ ಕತೆ ರಿವೀಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ಯಾಪ್ಟನ್ ರೋಹಿತ್ ಶರ್ಮಾ ಖಡಕ್ ಎಚ್ಚರಿಕೆ; ಯುವ ಆಟಗಾರರಿಗೆ ಢವಢವ..!

https://newsfirstlive.com/wp-content/uploads/2024/08/ROHIT_SHARMA_TEST.jpg

Load More