newsfirstkannada.com

×

ಟೀಮ್ ಇಂಡಿಯಾ ಸೋಲು; ಕೋಚ್ ವಿರುದ್ಧ ಆರೋಪ.. ಆಸಿಸ್ ವಿರುದ್ಧದ ಟೆಸ್ಟ್ ಗೆದ್ರೆ ಬಚಾವ್!

Share :

Published November 5, 2024 at 1:57pm

Update November 5, 2024 at 2:04pm

    ಟೆಸ್ಟ್ ತಂಡದಲ್ಲಿ ಬದಲಾವಣೆಗೆ ಮುಂದಾಯಿತಾ ಕ್ರಿಕೆಟ್ ಬೋರ್ಡ್?

    ಕೋಚ್, ನಾಯಕ ರೋಹಿತ್ ಜೊತೆ ಬಿಸಿಸಿಐ ರಿವ್ಯೂ ಮೀಟಿಂಗ್

    ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್ ಸರಣಿ ಸೋಲಿಗೆ ಕಾರಣ ಯಾರು..?

ತವರಲ್ಲಿ ಟೆಸ್ಟ್ ಸರಣಿ ಸೋತಿದ್ದೇ ತಡ, ಟೀಮ್ ಇಂಡಿಯಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಅದ್ರಲ್ಲೂ ಫ್ಲಾಪ್ ಶೋ ನೀಡಿದ್ದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್.ಅಶ್ವಿನ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು, ಬೇಸರ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಟೆಸ್ಟ್ ಸರಣಿ ಸೋಲಿಗೆ ಕಾರಣ ಯಾರು ಗೊತ್ತಾ?.

ಬೆಂಗಳೂರು, ಪುಣೆ ಮತ್ತು ಮುಂಬೈ ಟೆಸ್ಟ್ ಪಂದ್ಯಗಳಲ್ಲಿ, ಟೀಮ್ ಇಂಡಿಯಾ ತೀವ್ರ ಮುಖಭಂಗ ಅನುಭವಿಸಿತು. ಅತಿಯಾದ ಆತ್ಮವಿಶ್ವಾಸ, ಹೋಂ ಅಡ್ವಾಂಟೇಜ್​​​​​​​​​​​​​​​ ಜೊತೆಗೆ ಎದುರಾಳಿಗಳನ್ನ ಲಘುವಾಗಿ ಪರಿಗಣಿಸಿದ್ದೇ, ತವರಿನಲ್ಲೇ ಭಾರತದ ಸೋಲಿಗೆ ಕಾರಣವಾಯಿತು. ಇದೆಲ್ಲದರ ಜೊತೆಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮಾಡಿದ್ದ ಯಡವಟ್ಟಿನಿಂದ, ರೋಹಿತ್ ಪಡೆಯ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆಗಿದೆ.

ಮೂರೇ ತಿಂಗಳಲ್ಲಿ ​​​ಗಂಭೀರ್ ‘ಹಿಟ್​​ವಿಕೆಟ್’..!

ಇದೇ ವರ್ಷ ಜುಲೈ ತಿಂಗಳಲ್ಲಿ ಗೌತಮ್ ಗಂಭೀರ್, ಟೀಮ್ ಇಂಡಿಯಾ ಕೋಚ್ ಹುದ್ದೆಗೇರಿದ್ದರು. ಗಂಭೀರ್ ಬಿಟ್ರೆ ಬೇರೆ ಯಾರೂ ಇಲ್ಲ ಅನ್ನೋ ಹಾಗೆ ಬಿಂಬಿಸಿದ ಬಿಗ್​ಬಾಸ್​ಗಳು, ಮಾಜಿ ಎಡಗೈ ಬ್ಯಾಟ್ಸ್​ಮನ್​​ಗೆ ಪ್ರತಿಷ್ಠಿತ ಹುದ್ದೆ ನೀಡಿತು. ಆದ್ರೆ ಕೋಚ್ ಗಂಭೀರ್ ತಾಕತ್ತು ಏನು ಅನ್ನೋದು, ಕೇವಲ ಮೂರೇ 3 ತಿಂಗಳಲ್ಲಿ ಗೊತ್ತಾಗಿದೆ. ಲಂಕಾ ವಿರುದ್ಧ ಏಕದಿನ ಸರಣಿ ಸೋಲು ಮತ್ತು ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಸೋಲು. ಈ ಎರಡು ಸರಣಿ ಸೋಲಿನಿಂದ, ಗಂಭೀರ್​ ಹಿಟ್​ವಿಕೆಟ್ ಆಗಿದ್ದಾರೆ.​​

ಟೆಸ್ಟ್ ಸರಣಿ ಸೋಲಿಗೆ ಕೋಚ್ ವಿರುದ್ಧ ‘ಗಂಭೀರ’ ಆರೋಪ..!

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿಗೆ, ಗಂಭೀರ್ ನೇರ ಕಾರಣ ಅನ್ನೋದು ಇದೀಗ ಸಿಕ್ತಿರೋ ಲೇಟೆಸ್ಟ್ ನ್ಯೂಸ್. ಬೆಂಗಳೂರು, ಪುಣೆ ಮತ್ತು ಮುಂಬೈ ಪಿಚ್​ಗಳನ್ನ ಱಂಕ್ ಟರ್ನರ್ ಮಾಡಲು, ಗಂಭೀರ್​ ಪಾತ್ರ ಪ್ರಮುಖ. ಸ್ಪಿನ್ನರ್ಸ್​ ವಿರುದ್ಧ ಟೀಮ್ ಇಂಡಿಯಾ ಪರದಾಡುತ್ತಿದ್ದು ಕಣ್ಮುಂದೆ ಇದ್ರೂ, ಗಂಭೀರ್ ಸ್ಪಿನ್ ಟ್ರ್ಯಾಕ್​​​ ಮೊರೆ ಹೋಗಿದ್ದೇ ಸೋಲಿಗೆ ಕಾರಣ ಅನ್ನೋದು, ಬಿಸಿಸಿಐ ಮೂಲಗಳಿಂದ ಕೇಳಿಬರುತ್ತಿದೆ.​

ಬಿಗ್​ಬಾಸ್​ಗಳ ವಿಶ್ವಾಸ ಕಳೆದುಕೊಂಡ್ರಾ ಕೋಚ್ ಗಂಭೀರ್..?

ಕೋಚ್ ಆಗಲು ಕಂಡೀಷನ್. ಕೋಚ್ ಆದ್ಮೇಲೂ ಕಂಡೀಷನ್. ಪದೇ ಪದೇ ಕಂಡೀಷನ್. ಕಂಡೀಷನ್. ಹೀಗೆ ಗಂಭೀರ್ ಹಾಕುತ್ತಿದ್ದ ಕಂಡೀಷನ್​​ಗೆಲ್ಲಾ ತಲೆಯಾಡಿಸಿದ್ದ ಬಿಗ್​ಬಾಸ್​ಗಳು, ಈಗ ಎಚ್ಚೆತ್ತುಕೊಂಡಿದ್ದಾರೆ. ಗಂಭೀರ್ ಮಾತು ಕೇಳಿ ನಾವು ಕೆಟ್ಟೆವು ಅಂತ, ತಲೆ ಮೇಲೆ ಕೈ ಇಟ್ಕೊಂಡು ಕೂತಿದ್ದಾರೆ. ಗಂಭೀರ್ ಮಾತು ಕೇಳಿ ಆಸಿಸ್ ಟೆಸ್ಟ್ ಸರಣಿಗೂ ತಂಡವನ್ನ ಆಯ್ಕೆ ಮಾಡಿರುವ ಬಿಸಿಸಿಐ, ಇದೀಗ ಟೆಸ್ಟ್ ತಂಡದಲ್ಲಿ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಬಿಗ್​ಬಾಸ್​ಗಳ ಜೊತೆ ಮೀಟಿಂಗ್..! ಕೋಚ್​ಗೆ ವಾರ್ನಿಂಗ್..?

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತಿದ್ದೇ ತಡ ಬಿಸಿಸಿಐ, ಕೋಚ್, ಕ್ಯಾಪ್ಟನ್ ಜೊತೆ ರಿವ್ಯೂ ಮೀಟಿಂಗ್​​​ ಕರೆದಿದೆ. ಇದುವರೆಗೂ ಕೋಚ್ ಕೇಳಿದ್ದೆಲ್ಲಾ ಕೊಟ್ಟಿರುವ ಮಂಡಳಿ, ಬಲಿಷ್ಟ ತಂಡ ಇದ್ರೂ ಸೋಲಿಗೆ ಕಾರಣ ಏನು ಅಂತ, ಸಭೆಯಲ್ಲಿ ಪ್ರಶ್ನಿಸಲಿದೆ. ಅಲ್ಲದೇ ಮುಂದೆ ಹೀಗೆ ಆಗಬಾರದು ಅಂತ ಕೋಚ್​ಗೆ ಸ್ಟ್ರಿಕ್ಟ್​ ವಾರ್ನಿಂಗ್ ನೀಡಲು, ಬಿಗ್​ಬಾಸ್​ಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ತವರಲ್ಲಿ ವೈಟ್‌ವಾಶ್‌.. ಟೀಮ್ ಇಂಡಿಯಾದ ಈ ಸ್ಟಾರ್ ಪ್ಲೇಯರ್ಸ್ ಕ್ರಿಕೆಟ್ ಭವಿಷ್ಯಕ್ಕೆ ಕುತ್ತು!

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ರೆ ಗಂಭೀರ್ ಬಚಾವ್..!

ಕೋಚ್ ಗಂಭೀರ್ ವಿರುದ್ಧ ಬಿಸಿಸಿಐ ಕಠಿಣ ನಿರ್ಧಾರ ತೆಗೆದುಕೊಳ್ಳೋದು ಅನುಮಾನ. ಹಾಗಾಗಿ ಸದ್ಯ ಗೌತಿ​​​​​​ ಸೇಫ್ ಆಗಬಹುದು. ಆದ್ರೆ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯನ್ನ ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ಅಲ್ಲಿ ಸ್ವಲ್ಪ ಯಡವಟ್ಟಾದ್ರೂ ಗಂಭೀರ್​ನ​​​​ ತಂಡದಿಂದ ಕಿಕ್​ಔಟ್ ಮಾಡೋ ಎಲ್ಲಾ ಸಾಧ್ಯತೆಗಳಿವೆ.

ಗಂಭೀರ್ ಡೆಲ್ಲಿಗೆ ಒಳ್ಳೆ ಲೋಕಸಭಾ ಸದಸ್ಯನಾಗಲಿಲ್ಲ, ಹಾಗೇ ಟೀಮ್ ಇಂಡಿಯಾಕ್ಕೂ ಒಳ್ಳೆ ಕೋಚ್​ ಆಗಲಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಮುಂಬರುವ ಕಠಿಣ ಸವಾಲುಗಳಿಗೆ ಗಂಭೀರ್ ಹೇಗೆ ಉತ್ತರಿಸ್ತಾರೆ ಎಂದು ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್ ಇಂಡಿಯಾ ಸೋಲು; ಕೋಚ್ ವಿರುದ್ಧ ಆರೋಪ.. ಆಸಿಸ್ ವಿರುದ್ಧದ ಟೆಸ್ಟ್ ಗೆದ್ರೆ ಬಚಾವ್!

https://newsfirstlive.com/wp-content/uploads/2024/11/Gambhir_ROHIT.jpg

Load More