/newsfirstlive-kannada/media/post_attachments/wp-content/uploads/2024/07/Rohit_Jay-Sha.jpg)
ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವ ಮತ್ತು ಕ್ರಿಕೆಟ್ ದಿಗ್ಗಜ ವಿರಾಟ್ ಬ್ಯಾಟಿಂಗ್ನೊಂದಿಗೆ ಬುಮ್ರಾ, ಹಾರ್ದಿಕ್, ಅರ್ಷ್ದೀಪ್ ಸಿಂಗ್ ಬೌಲಿಂಗ್ ಸಹಾಯದಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಇದರಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ಅದ್ಭುತವಾಗಿ ಹಿಡಿದ ಸೂರ್ಯಕುಮಾರ್ ಯಾದವ್ ಪಾಲು ಕೂಡ ಇದೆ.
ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ನಿಂದ ತವರಿಗೆ ಬಂದಿಳಿದ ಟೀಮ್ ಇಂಡಿಯಾ ತಂಡದ ಆಟಗಾರರು ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟಿ20 ವಿಶ್ವಕಪ್ ವಿಜಯೋತ್ಸವ ಆಚರಿಸಿದ್ರು. ಈ ಬಗ್ಗೆ ಮೊದಲ ಬಾರಿಗೆ ಮಾತಾಡಿರೋ ಬಿಸಿಸಿಐ ಕಾರ್ಯದರ್ಶಿ, ವಿಶ್ವಕಪ್ ಗೆಲ್ಲಿಸಿದ್ದಕ್ಕೆ ಟೀಮ್ ಇಂಡಿಯಾ ಆಟಗಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ವಿಶ್ವಕಪ್ ಗೆಲುವನ್ನು ನಾನು ಟೀಮ್ ಇಂಡಿಯಾದ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರಿಗೆ ಅರ್ಪಿಸುತ್ತೇನೆ. ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ಸೂರ್ಯ, ಬುಮ್ರಾ, ಹಾರ್ದಿಕ್, ಅರ್ಷ್ದೀಪ್ ಅವರಿಗೂ ಅಭಿನಂದನೆಗಳು. ನನಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಟೀಮ್ ಇಂಡಿಯಾ ಮುಂದೆ ಬರೋ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿ ಕೂಡ ಗೆಲ್ಲಲಿದ್ದೇವೆ ಅನ್ನೋ ಭರವಸೆ ಇದೆ ಎಂದರು ಜಯ್ ಶಾ.
ಇದನ್ನೂ ಓದಿ:ರೋಹಿತ್ ಟೀಮ್ ಭಾರತಕ್ಕೆ ಬರಲು ಕೋಟಿ ಕೋಟಿ ದುಡ್ಡು ಖರ್ಚು.. ಒಬ್ಬೊಬ್ಬ ಪ್ಲೇಯರ್ಗೆ ಲಕ್ಷಾಂತರ ರೂ ವೆಚ್ಚ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ