ಟೀಮ್ ಇಂಡಿಯಾ, ಶ್ರೀಲಂಕಾ ಮಧ್ಯೆ ಟಿ20 ಮತ್ತು ಏಕದಿನ ಸರಣಿ!
ಜೂನ್ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಪ್ರವಾಸ
ಲಂಕಾ ಸೀರೀಸ್ಗೂ ಟೀಮ್ ಇಂಡಿಯಾದಲ್ಲಿ ಇಶಾನ್ಗೆ ಇಲ್ಲ ಸ್ಥಾನ
ಬಹುನಿರೀಕ್ಷಿತ ಟೀಮ್ ಇಂಡಿಯಾ, ಶ್ರೀಲಂಕಾ ನಡುವಿನ ಟಿ20 ಮತ್ತು ಏಕದಿನ ಸರಣಿ ಜೂನ್ 27ನೇ ತಾರೀಕಿನಿಂದ ಶುರುವಾಗಲಿದೆ. ಶ್ರೀಲಂಕಾ ಪ್ರವಾಸಕ್ಕೆ ಈಗಾಗಲೇ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಆಗಿದೆ. ಬಹಳ ದಿನಗಳ ಬಳಿಕ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದು, ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ಗೆ ಮಾತ್ರ ಇನ್ನೂ ಅವಕಾಶ ಸಿಕ್ಕಿಲ್ಲ.
ಟೀಮ್ ಇಂಡಿಯಾದಿಂದ ಕೈಬಿಟ್ಟಿದ್ದ ಸೆಲೆಕ್ಷನ್ ಕಮಿಟಿ!
ಕಳೆದ ವರ್ಷ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ರು. ಬಿಸಿಸಿಐ ಮಾತಿಗೆ ಕ್ಯಾರೆ ಎನ್ನದೆ ದೇಸಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಇದರ ಪರಿಣಾ ಇಬ್ಬರನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಕಿತ್ತು ಎಸೆಯಲಾಗಿತ್ತು. ಸದ್ಯ ಶ್ರೀಲಂಕಾ ವಿರುದ್ಧ ಸರಣಿಗೆ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿದ್ದು, ಇಶಾನ್ ಕಿಶನ್ ಕಥೆ ಮುಗಿಯಿತಾ? ಅನ್ನೋ ಚರ್ಚೆ ಜೋರಾಗಿದೆ.
ಕಮ್ಬ್ಯಾಕ್ ಮಾಡಲು ಇಶಾನ್ ಏನು ಮಾಡಬೇಕು?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸೋ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಟೀಮ್ ಇಂಡಿಯಾ ಪರ ಹಲವು ಅದ್ಭುತ ಇನ್ನಿಂಗ್ಸ್ ಆಡಿರೋ ಇಶಾನ್ ಕಿಶನ್ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಹೀಗಾಗಿ ಇಶಾನ್ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಇರೋ ಏಕೈಕ ಮಾರ್ಗ ದೇಸಿ ಕ್ರಿಕೆಟ್ ಆಡುವುದು. ದೇಸಿ ಕ್ರಿಕೆಟ್ನಲ್ಲಿ ಗಮನ ಸೆಳೆದರೆ ಮಾತ್ರ ಇಶಾನ್ ಕಮ್ಬ್ಯಾಕ್ ಸಾಧ್ಯ. ಬಿಸಿಸಿಐ ಕೂಡ ಇಶಾನ್ ಕಿಶನ್ ದೇಸಿ ಕ್ರಿಕೆಟ್ ಆಡಲಬೇಕು. ಆಗ ಮಾತ್ರ ರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಮಾಡುತ್ತೇವೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದೆ.
ಇದನ್ನೂ ಓದಿ: ‘ನೀನು ಕ್ರಿಕೆಟರ್ ಆಗೋಕೆ ಲಾಯಕ್ಕಿಲ್ಲ, ರಾಜಕಾರಣಿ ಆಗು’- ರೋಹಿತ್ ವಿರುದ್ಧ ಬಹಿರಂಗ ಅಸಮಾಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ