ಸೆಲೆಕ್ಟರ್ಸ್ ಕೊಟ್ಟ ಟಾಸ್ಕ್ ಗೆದ್ರಾ ವಿರಾಟ್ ಕೊಹ್ಲಿ..?
ಕೊಹ್ಲಿ ಟಾರ್ಗೆಟ್ IPL ಕಪ್ ಅಲ್ಲ.. ವೈಯಕ್ತಿಕವೂ ಅಲ್ಲ
ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಸೂಪರ್
ಈ ಬಾರಿಯ ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಹಿಂದೆದೂ ಕಾಣದಷ್ಟು ಅಗ್ರೆಸ್ಸಿವ್ ಅವತಾರ ಎತ್ತಿದ್ದಾರೆ. ಬ್ಯಾಟ್ ಹಿಡಿದು ಕಣಕ್ಕಿಳಿದ ಮೊದಲ ಎಸೆತದಲ್ಲೇ ಬೌಂಡರಿ, ಸಿಕ್ಸರ್ ಸಿಡಿಸಲು ಮುಂದಾಗ್ತಿದ್ದಾರೆ. ಕೊಹ್ಲಿಯ ಈ ವಿರಾಟರೂಪ ದರ್ಶನದ ಹಿಂದಿನ ಸೀಕ್ರೆಟ್ ಆರ್ಸಿಬಿ ಕಪ್ ಗೆಲ್ಲಿಸೋದಲ್ಲ. ಹಾಗಾದ್ರೆ, ಕೊಹ್ಲಿಯ ಗುರಿ ಏನು?
ಐಪಿಎಲ್ ಅಖಾಡದಲ್ಲಿ ಆರ್ಸಿಬಿ ಗೆಲುವಿನ ಟ್ರ್ಯಾಕ್ಗೆ ಮರಳುತ್ತೆ ಅನ್ನೋ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಎದುರಿನ ರಣರೋಚಕ ಕಾದಾಟದಲ್ಲಿ ಆರ್ಸಿಬಿ ವಿರೋಚಿತ ಸೋಲಿಗೆ ಶರಣಾಯ್ತು. ಇದ್ರರೊಂದಿಗೆ ಫ್ಲೇ ಆಫ್ ಕನಸು ಕೂಡ ಭಗ್ನವಾಯ್ತು. ಈ ತೀವ್ರ ನಿರಾಶೆಯ ನಡುವೆಯೂ ಆರ್ಸಿಬಿ ಅಭಿಮಾನಿಗಳಲ್ಲಿ ಸ್ವಲ್ಪ ಖುಷಿ ಇದೆ. ಅಂದ್ರೆ ಅದಕ್ಕೆ ಕಾರಣ ಕಿಂಗ್ ಕೊಹ್ಲಿ.
ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!
ಕಿಂಗ್ ಕೊಹ್ಲಿ ಟಾರ್ಗೆಟ್ ಐಪಿಎಲ್ ಕಪ್ ಅಲ್ಲ..!
ಅಭಿಮಾನಿಗಳು ಆರ್ಸಿಬಿ ಎಷ್ಟು ಪ್ರೀತಿಸ್ತಾರೋ ಅದಕ್ಕಿಂತ ಹೆಚ್ಚಿನ ಅಭಿಮಾನ, ಬೆಂಬಲವನ್ನ ವಿರಾಟ್ ಕೊಹ್ಲಿ ನೀಡ್ತಾರೆ. ಈ ಸೀಸನ್ನಲ್ಲಿ ಆರ್ಸಿಬಿ ಸೋಲಿನ ಸುಳಿಗೆ ಸಿಲುಕಿದ್ರೂ, ಕೊಹ್ಲಿ ಬೊಂಬಾಟ್ ಆಟವಾಡ್ತಿದ್ದಾರೆ. ವಿರಾಟ್ ಕೊಹ್ಲಿಯ ಅಬ್ಬರದ ಆಟವೇ ಕೆಲ ಅಭಿಮಾನಿಗಳಲ್ಲಿ ಸಮಾಧಾನ ತರಿಸಿದೆ. ಅಸಲಿ ವಿಷಯ ಏನಪ್ಪಾ ಅಂದ್ರೆ, ಕೊಹ್ಲಿ ಹೀಗೆ ಆಡ್ತಿರೋದ್ರ ಪ್ರಮುಖ ಉದ್ದೇಶ ಆರ್ಸಿಬಿಗೆ ಕಪ್ ಗೆಲ್ಲಿಸೋದಲ್ಲ.
ಆರ್ಸಿಬಿಗಿಂತ ಕೊಹ್ಲಿಗೆ T20 ವಿಶ್ವಕಪ್ ಪ್ರತಿಷ್ಟೆ..!
ಈ ಬಾರಿ ಐಪಿಎಲ್ಗೂ ಮುನ್ನ ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ನ ಚರ್ಚೆ ಜೋರಾಗಿ ನಡೆದಿತ್ತು. ಸ್ಲೋ ಬ್ಯಾಟಿಂಗ್ ಕಾರಣಕ್ಕೆ ಮುಂಬರೋ ವಿಶ್ವಕಪ್ ತಂಡದಿಂದ ಕೊಹ್ಲಿಯನ್ನ ಕೈ ಬಿಡೋ ಚರ್ಚೆ ನಡೆದಿತ್ತು. ಹೀಗಾಗಿ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಹಾಗೂ ಬಿಸಿಸಿಐ ಬಾಸ್ಗಳು ಕೊಹ್ಲಿಗೆ ಅಗ್ರೆಸ್ಸಿವ್ ಆಟದ ಟಾಸ್ಕ್ ಕೊಟ್ಟಿದ್ರು. ಐಪಿಎಲ್ ಅಖಾಡದಲ್ಲಿ ಅದನ್ನೇ ಪ್ರತಿಷ್ಟೆಯಾಗಿ ತೆಗೆದುಕೊಂಡಿರೋ ವಿರಾಟ್ ಆ ಟಾಸ್ಕ್ ಗೆದ್ದಿದ್ದಾರೆ. ವಿರಾಟರೂಪದ ದರ್ಶನ ಮಾಡಿ ತಾಖತ್ತನ್ನ ನಿರೂಪಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪ, ಸಾಲ ವಸೂಲಿಗೆ ಬಂದು ಮಹಿಳೆಗೆ ಕಪಾಳಮೋಕ್ಷ..!
ಈ ಸೀಸನ್ನಲ್ಲಿ ಕೊಹ್ಲಿ ಸ್ಟ್ರೈಕ್ರೇಟ್ ಸೂಪರ್
ಕೊಹ್ಲಿಯದ್ದು ಸ್ಲೋ ಬ್ಯಾಟಿಂಗ್ ಎಂದು ಟೀಕಿಸಿದವರೆಲ್ಲರೂ ಇದೀಗ ವಾರೆ ವ್ಹಾ ಅಂತಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿತಾ ಇರೋ ಕೊಹ್ಲಿ ಟೆರರ್ ಆಟದ ಮೂಲಕ ಬೌಲರ್ಗಳನ್ನ ಕಾಡ್ತಿದ್ದಾರೆ. ಮೊದಲ ಎಸೆತದಿಂದಲೇ ಅಗ್ರೆಸ್ಸಿವ್ ಆಟದ ಮೂಲಕ ವಿರಾಟ್ ಆರ್ಭಟಿಸ್ತಿದ್ದಾರೆ. ಹೊಸ ಅವತಾರವನ್ನೇ ಎತ್ತಿರುವ ಕಿಂಗ್ ಬರೋಬ್ಬರಿ 150.40ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸ್ತಿದ್ದಾರೆ.
ಈ ಸೀಸನ್ ಐಪಿಎಲ್ನಲ್ಲಿ ವಿರಾಟ್
ಈವರೆಗೆ 8 ಪಂದ್ಯವನ್ನಾಡಿರುವ ವಿರಾಟ್ ಕೊಹ್ಲಿ, 67.17ರ ಸ್ಟ್ರೈಕ್ರೇಟ್ನಲ್ಲಿ 379 ರನ್ಗಳಿಸಿದ್ದಾರೆ. 150.40ರ ಸ್ಟ್ರೈಕ್ರೇಟ್ನಲ್ಲಿ 1 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಈ ಐಪಿಎಲ್ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವಿರಾಟ್ ಕೊಹ್ಲಿ ಕಳೆದ ಐಪಿಎಲ್ನಲ್ಲಿ ಸಾಮಾನ್ಯ ಬ್ಯಾಟ್ಸ್ಮನ್ ಆಗಿದ್ರು. ಉತ್ತಮ ಆಟವಾಡಿ 639 ರನ್ಗಳಿಸಿದ್ರು ನಿಜ. ಕೇವಲ 139.82ರ ಸ್ಟ್ರೈಕ್ರೇಟ್ ಹೊಂದಿದ್ರು. ಈ ಸ್ಲೋ ಬ್ಯಾಟಿಂಗ್ ತೀವ್ರ ಟೀಕೆಗೆ ಗುರಿ ಮಾಡಿತ್ತು.
ಇದನ್ನೂ ಓದಿ: ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video
ಯುವ ಶಕ್ತಿಯನ್ನ ಮೀರಿಸಿದ ಕೊಹ್ಲಿನೇ ಕಿಂಗ್
ಈ ಬಾರಿಯ ಐಪಿಎಲ್ನಲ್ಲಿ ಯುವ ಆಟಗಾರರು ಮಿಂಚಿನ ಪ್ರದರ್ಶನ ನೀಡ್ತಿದ್ದಾರೆ. ಸಾಲಿಡ್ ಬ್ಯಾಟಿಂಗ್ನಿಂದ ಚಮತ್ಕಾರವನ್ನೇ ಮಾಡ್ತಿದ್ದಾರೆ. ಈ ಬಿಸಿ ರಕ್ತದ ಯುವಕರ ಅಬ್ಬರವನ್ನೂ 35 ವರ್ಷದ ಕೊಹ್ಲಿ ಮೀರಿದ್ದಾರೆ. ಸೆಲೆಕ್ಟರ್ಸ್ ಕೊಟ್ಟ ಟಾಸ್ಕ್ ಗೆದ್ದು ವಿಶ್ವಕಪ್ ಟಿಕೆಟ್ ಅನ್ನೋ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಆರ್ಸಿಬಿ ಪ್ಲೇ ಆಫ್ ರೇಸ್ನಿಂದ ಹೊರಗಿಬಿದ್ದಿದ್ರೂ, ಕೊಹ್ಲಿಯ ಅಗ್ರೆಸ್ಸಿವ್ ಆಟದಿಂದ ಫ್ಯಾನ್ಸ್ ಖುಷ್ ಆಗಿದ್ದಾರೆ. ವಿಶ್ವಕಪ್ ಅಖಾಡದಲ್ಲೂ ಅಬ್ಬರದ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್