newsfirstkannada.com

ಕಿಂಗ್​ ಕೊಹ್ಲಿ ಟಾರ್ಗೆಟ್​ IPL ಕಪ್​ ಅಲ್ಲ.. ಯುವ ಶಕ್ತಿಯನ್ನೇ ಮೀರಿಸಿದ ಕೊಹ್ಲಿಯ ರೋಚಕ ಕಥೆ..!

Share :

Published April 23, 2024 at 1:07pm

    ಸೆಲೆಕ್ಟರ್ಸ್ ಕೊಟ್ಟ ಟಾಸ್ಕ್​ ಗೆದ್ರಾ ವಿರಾಟ್​ ಕೊಹ್ಲಿ..?

    ಕೊಹ್ಲಿ ಟಾರ್ಗೆಟ್​ IPL ಕಪ್​ ಅಲ್ಲ.. ವೈಯಕ್ತಿಕವೂ ಅಲ್ಲ

    ಈ ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್​ರೇಟ್​​​ ಸೂಪರ್

ಈ ಬಾರಿಯ ಐಪಿಎಲ್​ನಲ್ಲಿ ಕಿಂಗ್​ ಕೊಹ್ಲಿ ಹಿಂದೆದೂ ಕಾಣದಷ್ಟು ಅಗ್ರೆಸ್ಸಿವ್​ ಅವತಾರ ಎತ್ತಿದ್ದಾರೆ. ಬ್ಯಾಟ್​​ ಹಿಡಿದು ಕಣಕ್ಕಿಳಿದ ಮೊದಲ ಎಸೆತದಲ್ಲೇ ಬೌಂಡರಿ, ಸಿಕ್ಸರ್​ ಸಿಡಿಸಲು ಮುಂದಾಗ್ತಿದ್ದಾರೆ. ಕೊಹ್ಲಿಯ ಈ ವಿರಾಟರೂಪ ದರ್ಶನದ ಹಿಂದಿನ ಸೀಕ್ರೆಟ್​​ ಆರ್​​ಸಿಬಿ ಕಪ್​ ಗೆಲ್ಲಿಸೋದಲ್ಲ. ಹಾಗಾದ್ರೆ, ಕೊಹ್ಲಿಯ ಗುರಿ ಏನು?

ಐಪಿಎಲ್​ ಅಖಾಡದಲ್ಲಿ ಆರ್​​ಸಿಬಿ ಗೆಲುವಿನ ಟ್ರ್ಯಾಕ್​ಗೆ ಮರಳುತ್ತೆ ಅನ್ನೋ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕೊಲ್ಕತ್ತಾ ನೈಟ್​​ ರೈಡರ್ಸ್​​ ಎದುರಿನ ರಣರೋಚಕ ಕಾದಾಟದಲ್ಲಿ ಆರ್​​ಸಿಬಿ ವಿರೋಚಿತ ಸೋಲಿಗೆ ಶರಣಾಯ್ತು. ಇದ್ರರೊಂದಿಗೆ ಫ್ಲೇ ಆಫ್​ ಕನಸು ಕೂಡ ಭಗ್ನವಾಯ್ತು. ಈ ತೀವ್ರ ನಿರಾಶೆಯ ನಡುವೆಯೂ ಆರ್​​ಸಿಬಿ ಅಭಿಮಾನಿಗಳಲ್ಲಿ ಸ್ವಲ್ಪ ಖುಷಿ ಇದೆ. ಅಂದ್ರೆ ಅದಕ್ಕೆ ಕಾರಣ ಕಿಂಗ್​ ಕೊಹ್ಲಿ.

ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್​ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!

ಕಿಂಗ್​ ಕೊಹ್ಲಿ ಟಾರ್ಗೆಟ್​ ಐಪಿಎಲ್​ ಕಪ್​ ಅಲ್ಲ..!
ಅಭಿಮಾನಿಗಳು ಆರ್​​ಸಿಬಿ ಎಷ್ಟು ಪ್ರೀತಿಸ್ತಾರೋ ಅದಕ್ಕಿಂತ ಹೆಚ್ಚಿನ ಅಭಿಮಾನ, ಬೆಂಬಲವನ್ನ ವಿರಾಟ್​ ಕೊಹ್ಲಿ ನೀಡ್ತಾರೆ. ಈ ಸೀಸನ್​ನಲ್ಲಿ ಆರ್​​ಸಿಬಿ ಸೋಲಿನ ಸುಳಿಗೆ ಸಿಲುಕಿದ್ರೂ, ಕೊಹ್ಲಿ ಬೊಂಬಾಟ್​ ಆಟವಾಡ್ತಿದ್ದಾರೆ. ವಿರಾಟ್​ ಕೊಹ್ಲಿಯ ಅಬ್ಬರದ ಆಟವೇ ಕೆಲ ಅಭಿಮಾನಿಗಳಲ್ಲಿ ಸಮಾಧಾನ ತರಿಸಿದೆ. ಅಸಲಿ ವಿಷಯ ಏನಪ್ಪಾ ಅಂದ್ರೆ, ಕೊಹ್ಲಿ ಹೀಗೆ ಆಡ್ತಿರೋದ್ರ ಪ್ರಮುಖ ಉದ್ದೇಶ ಆರ್​​ಸಿಬಿಗೆ ಕಪ್​ ಗೆಲ್ಲಿಸೋದಲ್ಲ.

ಆರ್​​ಸಿಬಿಗಿಂತ ಕೊಹ್ಲಿಗೆ T20 ವಿಶ್ವಕಪ್​​ ಪ್ರತಿಷ್ಟೆ..!
ಈ ಬಾರಿ ಐಪಿಎಲ್​​ಗೂ ಮುನ್ನ ವಿರಾಟ್​ ಕೊಹ್ಲಿ ಸ್ಟ್ರೈಕ್​ರೇಟ್​ನ ಚರ್ಚೆ ಜೋರಾಗಿ ನಡೆದಿತ್ತು. ಸ್ಲೋ ಬ್ಯಾಟಿಂಗ್​ ಕಾರಣಕ್ಕೆ ಮುಂಬರೋ ವಿಶ್ವಕಪ್​ ತಂಡದಿಂದ ಕೊಹ್ಲಿಯನ್ನ ಕೈ ಬಿಡೋ ಚರ್ಚೆ ನಡೆದಿತ್ತು. ಹೀಗಾಗಿ ಟೀಮ್​ ಇಂಡಿಯಾ ಸೆಲೆಕ್ಟರ್ಸ್ ಹಾಗೂ ಬಿಸಿಸಿಐ ಬಾಸ್​​ಗಳು​ ಕೊಹ್ಲಿಗೆ ಅಗ್ರೆಸ್ಸಿವ್​ ಆಟದ ಟಾಸ್ಕ್​ ಕೊಟ್ಟಿದ್ರು. ಐಪಿಎಲ್​​ ಅಖಾಡದಲ್ಲಿ ಅದನ್ನೇ ಪ್ರತಿಷ್ಟೆಯಾಗಿ ತೆಗೆದುಕೊಂಡಿರೋ ವಿರಾಟ್​ ಆ ಟಾಸ್ಕ್​​ ಗೆದ್ದಿದ್ದಾರೆ. ವಿರಾಟರೂಪದ ದರ್ಶನ ಮಾಡಿ ತಾಖತ್ತನ್ನ ನಿರೂಪಿಸಿದ್ದಾರೆ.

ಇದನ್ನೂ ಓದಿಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪ, ಸಾಲ ವಸೂಲಿಗೆ ಬಂದು ಮಹಿಳೆಗೆ ಕಪಾಳಮೋಕ್ಷ..!

ಈ ಸೀಸನ್​ನಲ್ಲಿ ಕೊಹ್ಲಿ ಸ್ಟ್ರೈಕ್​ರೇಟ್​​​ ಸೂಪರ್​​
ಕೊಹ್ಲಿಯದ್ದು ಸ್ಲೋ ಬ್ಯಾಟಿಂಗ್​ ಎಂದು ಟೀಕಿಸಿದವರೆಲ್ಲರೂ ಇದೀಗ ವಾರೆ ವ್ಹಾ ಅಂತಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿತಾ ಇರೋ ಕೊಹ್ಲಿ ಟೆರರ್​ ಆಟದ ಮೂಲಕ ಬೌಲರ್​​ಗಳನ್ನ ಕಾಡ್ತಿದ್ದಾರೆ. ಮೊದಲ ಎಸೆತದಿಂದಲೇ ಅಗ್ರೆಸ್ಸಿವ್​ ಆಟದ ಮೂಲಕ ವಿರಾಟ್​​​ ಆರ್ಭಟಿಸ್ತಿದ್ದಾರೆ. ಹೊಸ ಅವತಾರವನ್ನೇ ಎತ್ತಿರುವ ಕಿಂಗ್ ಬರೋಬ್ಬರಿ 150.40ರ ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸ್ತಿದ್ದಾರೆ.

ಈ ಸೀಸನ್​ ಐಪಿಎಲ್​ನಲ್ಲಿ ವಿರಾಟ್​
ಈವರೆಗೆ 8 ಪಂದ್ಯವನ್ನಾಡಿರುವ ವಿರಾಟ್​ ಕೊಹ್ಲಿ, 67.17ರ ಸ್ಟ್ರೈಕ್​ರೇಟ್​ನಲ್ಲಿ 379 ರನ್​ಗಳಿಸಿದ್ದಾರೆ. 150.40ರ ಸ್ಟ್ರೈಕ್​​ರೇಟ್​ನಲ್ಲಿ 1 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಈ ಐಪಿಎಲ್​ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವಿರಾಟ್​ ಕೊಹ್ಲಿ ಕಳೆದ ಐಪಿಎಲ್​ನಲ್ಲಿ ಸಾಮಾನ್ಯ ಬ್ಯಾಟ್ಸ್​ಮನ್​ ಆಗಿದ್ರು. ಉತ್ತಮ ಆಟವಾಡಿ 639 ರನ್​ಗಳಿಸಿದ್ರು ನಿಜ. ಕೇವಲ 139.82ರ ಸ್ಟ್ರೈಕ್​​ರೇಟ್​ ಹೊಂದಿದ್ರು. ಈ ಸ್ಲೋ ಬ್ಯಾಟಿಂಗ್​ ತೀವ್ರ ಟೀಕೆಗೆ ಗುರಿ ಮಾಡಿತ್ತು.

ಇದನ್ನೂ ಓದಿ: ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video

ಯುವ ಶಕ್ತಿಯನ್ನ ಮೀರಿಸಿದ ಕೊಹ್ಲಿನೇ ಕಿಂಗ್​​
ಈ ಬಾರಿಯ ಐಪಿಎಲ್​ನಲ್ಲಿ ಯುವ ಆಟಗಾರರು ಮಿಂಚಿನ ಪ್ರದರ್ಶನ ನೀಡ್ತಿದ್ದಾರೆ. ಸಾಲಿಡ್​ ಬ್ಯಾಟಿಂಗ್​ನಿಂದ ಚಮತ್ಕಾರವನ್ನೇ ಮಾಡ್ತಿದ್ದಾರೆ. ಈ ಬಿಸಿ ರಕ್ತದ ಯುವಕರ ಅಬ್ಬರವನ್ನೂ 35 ವರ್ಷದ ಕೊಹ್ಲಿ ಮೀರಿದ್ದಾರೆ. ಸೆಲೆಕ್ಟರ್ಸ್​ ಕೊಟ್ಟ ಟಾಸ್ಕ್​ ಗೆದ್ದು ವಿಶ್ವಕಪ್​ ಟಿಕೆಟ್​ ಅನ್ನೋ ಕನ್​ಫರ್ಮ್​ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಆರ್​​ಸಿಬಿ ಪ್ಲೇ ಆಫ್​​ ರೇಸ್​​ನಿಂದ ಹೊರಗಿಬಿದ್ದಿದ್ರೂ, ಕೊಹ್ಲಿಯ ಅಗ್ರೆಸ್ಸಿವ್​ ಆಟದಿಂದ ಫ್ಯಾನ್ಸ್​​ ಖುಷ್​ ಆಗಿದ್ದಾರೆ. ವಿಶ್ವಕಪ್​ ಅಖಾಡದಲ್ಲೂ ಅಬ್ಬರದ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಿಂಗ್​ ಕೊಹ್ಲಿ ಟಾರ್ಗೆಟ್​ IPL ಕಪ್​ ಅಲ್ಲ.. ಯುವ ಶಕ್ತಿಯನ್ನೇ ಮೀರಿಸಿದ ಕೊಹ್ಲಿಯ ರೋಚಕ ಕಥೆ..!

https://newsfirstlive.com/wp-content/uploads/2024/04/Shreyas-Iyer_Virat-Kohli.jpg

Load More