/newsfirstlive-kannada/media/post_attachments/wp-content/uploads/2024/07/Kohli_Dravid_Rohit.jpg)
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಈ ಬಹುಮಾನವು ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರು ಸೇರಿ ಎಲ್ಲಾ ಆಟಗಾರರಿಗೂ ಸೇರಿದೆ ಎಂದು ತಿಳಿಸಿತ್ತು. ಟೀಮ್ ಇಂಡಿಯಾದ ಆಟಗಾರರು, ಕೋಚ್​ಗಳು ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಒಳಗೊಂಡಿರುವ 5 ಆಯ್ಕೆಗಾರರು ಸೇರಿದಂತೆ ಒಟ್ಟು 42 ಮಂದಿಗೆ ಹಣ ಹಂಚಿಕೆ ಮಾಡಲಾಗುತ್ತದೆ.
ಯಾರಿಗೆ ಎಷ್ಟು ಹಣ ನೀಡಲಾಗುತ್ತದೆ..?
ಒಟ್ಟು 42 ಮಂದಿ ಒಳಗೊಂಡ ಟೀಂ ಇಂಡಿಯಾ ವಿಶ್ವಕಪ್​​ ಆಡಲು ಅಮೆರಿಕ ಮತ್ತು ವೆಸ್ಟ್​ ವಿಂಡೀಸ್​​ಗೆ ಪ್ರಯಾಣ ಬೆಳೆಸಿತ್ತು. ಅವರೆಲ್ಲರಿಗೂ ಬಿಸಿಸಿಐ ಹಣವನ್ನು ನೀಡಲಿದೆ. ತಂಡದಲ್ಲಿದ್ದ 15 ಆಟಗಾರರಿಗೆ ತಲಾ ಐದು ಕೋಟಿ ರೂಪಾಯಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್​​ಗೂ ಐದು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಇನ್ನು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ( Paras Mhambrey) ಸೇರಿದಂತೆ ಇತರೆ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಸಿಗಲಿದೆ.
ಟಿ-20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ ಅಜಿತ್ ಅಗರ್ಕರ್ ಸೇರಿದಂತೆ ಐವರು ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಬಿಸಿಸಿಐ ನೀಡಲಿದೆ. ಮಾತ್ರವಲ್ಲ, ಮೀಸಲು ಆಟಗಾರರಾದ ರಿಂಕು ಸಿಂಗ್, ಶುಬ್ಮನ್ ಗಿಲ್, ಆವೇಶ್ ಖಾನ್, ಖಲೀಲ್ ಅಹ್ಮದ್​ಗೂ ಬಹುಮಾನದ ಪಾಲು ಹೋಗಲಿದೆ. ಇವರಿಗೆ ತಲಾ ಒಂದು ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಅಷ್ಟೇ ಅಲ್ಲ.. ಮೂವರು ಫಿಸಿಯೋಥೆರಪಿಸ್ಟ್‌ಗಳು, ಮೂವರು ಥ್ರೋಡೌನ್ ತಜ್ಞರು ಸೇರಿ ಟೀಂ ಇಂಡಿಯಾದ ಇತರೆ ಸಿಬ್ಬಂದಿಗೆ ತಲಾ ಎರಡು ಕೋಟಿ ರೂಪಾಯಿ ಹಣವನ್ನು ನೀಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us