newsfirstkannada.com

ಟಾರ್ಗೆಟ್ ಏನಿದ್ರೂ ಬಿಜೆಪಿ, ಯದುವೀರ್ ಬಗ್ಗೆ ಎಚ್ಚರಿಕೆ ಇರಲಿ; ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು 

Share :

Published March 25, 2024 at 7:32am

  ಮೈಸೂರು ಕದನ ಗೆಲ್ಲಲು ಅಖಾಡಕ್ಕೆ ಇಳಿದ ಸಿದ್ದರಾಮಯ್ಯ

  ಮೈಸೂರಿನ ನಾಯಕರ ಜೊತೆ ಸರಣಿ ಸಭೆ ನಡೆಸಿ ರಣತಂತ್ರ​

  ಭಾಷಣ ಮಾಡವಾಗ ಯದುವೀರ್ ಬಗ್ಗೆ ಎಚ್ಚರಿಕೆ ಇರಲಿ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಈ ಬಾರಿ ಪ್ರತಿಷ್ಟೆಯ ಅಖಾಡವಾಗಿ ಮಾರ್ಪಟ್ಟಿದೆ. ಒಂದೆಡೆ ಬಿಜೆಪಿಯಿಂದ ಮೈಸೂರು ಮಹಾರಾಜ ಯದುವೀರ್​ ಒಡೆಯರ್​ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ತವರು ಜಿಲ್ಲೆ ಆಗಿರುವ ಕಾರಣ, ಸಿಎಂ ಸಿದ್ದರಾಮಯ್ಯಗೆ ಗೆಲ್ಲಲೇಬೇಕಾದ ಪ್ರತಿಷ್ಟೆ ಎದುರಾಗಿದೆ. ಮೈಸೂರಿನ ಜೊತೆಗೆ ಚಾಮರಾಜನಗರದ ಹೊಣೆಯೂ ಸಿದ್ದರಾಮಯ್ಯ ಹೆಗಲ ಮೇಲಿದೆ. ಹೀಗಾಗಿ ಮೈಸೂರು ಮತಯುದ್ಧ ಗೆಲ್ಲಲು ನೇರವಾಗಿ ಸಿಎಂ ಸಿದ್ದರಾಮಯ್ಯನವರೇ ಅಖಾಡಕ್ಕೆ ಇಳಿದಿದ್ದಾರೆ.

ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ನಿನ್ನೆ ಖಾಸಗಿ ಹೋಟೆಲ್​ನಲ್ಲಿ ಸ್ಥಳೀಯ ನಾಯಕರು, ಮುಖಂಡರ ಜೊತೆ ಸರಣಿ ಸಭೆ ನಡೆಸಿದ್ರು. ಈ ಮೂಲಕ ಯದುವೀರ್​ರನ್ನು ಎದರುಸಿಲು ಇರುವ ರಣತಂತ್ರಗಳ ಬಗ್ಗೆ ಚರ್ಚೆ ಮಾಡಿ, ಗೇಮ್​ಪ್ಲಾನ್​ ರೆಡಿ ಮಾಡಿದ್ದಾರೆ. ಜೊತೆಗೆ ಸ್ಥಳೀಯ ನಾಯಕರಿಗೂ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ವರದಾ ನದಿಯನ್ನೇ ತುಂಬಿಸುವ ಸಾಹಸಕ್ಕೆ ಮುಂದಾದ ರೈತ! ಇದೆಲ್ಲಾ ಪ್ರಾಣಿ, ಪಕ್ಷಿ, ಜಲಚರಗಳಿಗಾಗಿ ಅಂದ್ರೆ ನಂಬ್ತೀರಾ?

ಕ್ಷೇತ್ರದಲ್ಲಿ ಯದುವೀರ್ ಟಾರ್ಗೆಟ್ ಮಾಡುವುದು ಬೇಡ

ಕ್ಷೇತ್ರದಲ್ಲಿ ಯದುವೀರ್ ಟಾರ್ಗೆಟ್ ಮಾಡುವುದು ಬೇಡ. ನಮ್ಮ ಟಾರ್ಗೆಟ್ ಏನಿದ್ದರೂ ಬಿಜೆಪಿ ಪಕ್ಷವಷ್ಟೆ ಆಗಿರಬೇಕು. ಇನ್ನು ಭಾಷಣ ಮಾಡವಾಗ ಯದುವೀರ್ ಬಗ್ಗೆ ಎಚ್ಚರಿಕೆ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕ ಹಾಗೆ ಹೇಳಿಕೆ ಕೊಡಬೇಡಿ. ಯಾಕಂದ್ರೆ ಎಮೋಷನಲ್ ವಿಚಾರವನ್ನು ತಿರುಗಿಸುವಲ್ಲಿ ಬಿಜೆಪಿಗರು ನಿಸ್ಸೀಮರು. ಹೀಗಾಗಿ ಬಿಜೆಪಿಯವರಿಗೆ ನಿಮ್ಮ ಹೇಳಿಕೆಗಳೇ ಆಹಾರವಾಗಬಾರದು. ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಕಿವಿಮಾತು ಹೇಳಿದ್ದಾರೆ
-ಸಿದ್ದರಾಮಯ್ಯ, ಸಿಎಂ

ಸಿದ್ದರಾಮಯ್ಯ ಸೂಚನೆ ಹಿನ್ನೆಲೆ ಮೌನಕ್ಕೆ ಜಾರಿದ ಕೈ ಅಭ್ಯರ್ಥಿ

ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮಣ್​, ಮೌನಕ್ಕೆ ಜಾರಿದ್ದಾರೆ. ನಾನು ಇನ್ಮುಂದೆ ಹೆಚ್ಚು ಮಾತನಾಡಲ್ಲ. ಪಕ್ಷದ ಸೂಚನೆಯಂತೆ ಕೆಲಸ ಮಾಡಿ ತೋರಿಸುವೆ ಎಂದಿದ್ದಾರೆ
ಲಕ್ಷ್ಮಣ್​, ಕಾಂಗ್ರೆಸ್​ ಅಭ್ಯರ್ಥಿ

ಕಬಿನಿ ಹಿನ್ನೀರಿನ ಖಾಸಗಿ ರೆಸಾರ್ಟ್​ನಲ್ಲಿ ಸಿದ್ದು ವಾಸ್ತವ್ಯ

ಕೇವಲ ಮೈಸೂರು-ಕೊಡಗು ಕ್ಷೇತ್ರ ಮಾತ್ರವಲ್ಲ. ಚಾಮರಾಜನಗರ ಕ್ಷೇತ್ರದ ಜವಾಬ್ದಾರಿಯೂ ಸಿಎಂ ಹೆಗಲ ಮೇಲಿದೆ. ಹೀಗಾಗಿ ಚಾಮರಾಜನಗರದ ಟಿಕೆಟ್​ ಗೊಂದಲ ಬಗೆಹರಿಸಲು ಮುಂದಾಗಿದ್ದಾರೆ. ಕಬಿನಿ ಹಿನ್ನೀರಿನ ಖಾಸಗಿ ರೆಸಾರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ. ಇವತ್ತು ದಿನವಿಡೀ ರೆಸಾರ್ಟ್​ನಲ್ಲಿಯೇ ಉಳಿಯಲಿದ್ದು, ರಣತಂತ್ರವನ್ನು ರೂಪಿಸಲಿದ್ದಾರೆ. ಕೇವಲ ಅತ್ಯಾಪ್ತರನ್ನ ಮಾತ್ರ ರೆಸಾರ್ಟ್​ಗೆ ಆಹ್ವಾನಿಸಿರುವ ಸಿಎಂ ರಹಸ್ಯವಾಗಿ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

ಒಟ್ಟಾರೆ ತವರು ಜಿಲ್ಲೆಯಾಗಿರುವ ಕಾರಣ, ಸಿದ್ದರಾಮಯ್ಯಗೆ ಗೆಲ್ಲಲೇ ಬೇಕಾದ ಒತ್ತಡವಿದೆ. ಹೀಗಾಗಿ ರಾಜಕೀಯ ರಣರಂಗದಲ್ಲಿ ಎದರುರಾಳಿಗಳನ್ನು ಕಟ್ಟಿಹಾಕಲು ಸಿದ್ದರಾಮಯ್ಯ ಗೇಮ್​ಪ್ಲಾನ್​ ರೆಡಿ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾರ್ಗೆಟ್ ಏನಿದ್ರೂ ಬಿಜೆಪಿ, ಯದುವೀರ್ ಬಗ್ಗೆ ಎಚ್ಚರಿಕೆ ಇರಲಿ; ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು 

https://newsfirstlive.com/wp-content/uploads/2024/03/Siddaramaiah.jpg

Load More