newsfirstkannada.com

ಸಿಕ್ಕ ಸಿಕ್ಕವರಿಗೆ ಮೆಸೇಜ್​​ ಮಾಡೋ ಮಹಿಳೆಯರೇ ಹುಷಾರ್; ಅಪಾಯ ಕಟ್ಟಿಟ್ಟ ಬುತ್ತಿ!

Share :

Published April 2, 2024 at 6:01am

    ಗಂಡನನ್ನ ಬಿಟ್ಟು ಮಕ್ಕಳ ಜೊತೆಗಿದ್ದ ಮಹಿಳೆಗೆ ಮತ್ತೊಬ್ಬನ ಜೊತೆ ಗೆಳೆತನ

    ರೀಲ್ಸ್​​ನಲ್ಲಿ ಪರಿಚಯವಾದೋನು ರಿಯಲ್​ ಆಗಿ ಮಾಡೇ ಬಿಟ್ಟ ಮೋಸ

    ದೂರು ಕೊಟ್ಟರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತ ಆರೋಪ

ಬೆಂಗಳೂರು: ಸೋಷಿಯಲ್ ಮೀಡಿಯಾ ಅನ್ನೋದು ಜನರಿಗೆ ಒಂದು ರೀತಿ ಅಂಟುರೋಗ ಆಗಿಬಿಟ್ಟಿದೆ. ಇದರ ಗೀಳು ಹಚ್ಕೊಂಡ್ರೆ ಮುಗೀತು. ಕೆಲವರಿಗೆ ಇದು ಮನರಂಜನೆ ನೀಡಿದ್ರೆ, ಇನ್ನು ಕೆಲವರು ಇದ್ರಿಂದಾನೆ ಲಾಭನೂ ಮಾಡ್ಕೊಳ್ತಿದ್ದಾರೆ. ಆದ್ರೆ ರೀಲ್ಸ್‌ ಹುಚ್ಚು ತುಂಬಾ ಜನರ ಪ್ರಾಣವನ್ನೇ ಬಲಿ ಪಡೆದಿವೆ.

ಇದನ್ನೂ ಓದಿ: ಎಚ್ಚರ! ಏಪ್ರಿಲ್‌ ತಿಂಗಳು ಪೂರ್ತಿ ಹುಷಾರಾಗಿರಿ.. ಹವಾಮಾನ ಇಲಾಖೆಯಿಂದ ಜನರಿಗೆ ಎಚ್ಚರಿಕೆ; ಏನದು?

ಹೆಚ್ಚಿನ ಸಂಸಾರಗಳಿಗೆ, ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿವೆ. ಇದರಲ್ಲಿ ಜನರ ಪಾಲೂ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಹಿಂದೂ ಮುಂದೆ ನೋಡದೇ ಸಿಕ್ಕ ಸಿಕ್ಕವರ ಜೊತೆ ಆನ್​ ಲೈನ್ ಫ್ರೆಂಡ್​​ ಶಿಪ್ ಮಾಡಿದ್ರೆ ಪಂಗನಾಮ ಗ್ಯಾರಂಟಿ. ಬಣ್ಣ ಬಣ್ಣದ ಮಾತುಗಳಾಡಿ ಲೇಡಿ ಜೊತೆ ರೀಲ್ಸ್ ಮಾಡಿದ್ದ ಆಸಾಮಿ ಹಣ ಪಡೆದು ಪರಾರಿಯಾಗಿದ್ದಾನೆ. ಇದೀಗ ಹಣ ಕಳ್ಕೊಂಡ ಲೇಡಿ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ.

ರೀಲ್ಸ್​ನಲ್ಲೇ ಲೇಡಿಗೆ ಬಲೆ.. ರೀಲ್ಸ್​ ರಾಜಾಗೆ ಹಣ ಕೊಟ್ಟು ಮಹಿಳೆ ಕಂಗಾಲು

ಹೌದು ಈ ಪರಮಶಿವಂಗೆ ಸುಲೋಚನಾ ರೀಲ್ಸ್​ನಲ್ಲಿ ಬಲೆ ಬೀಸಿದ್ದಳು. ಅಲ್ಲಿಂದ ಸುಲೋಚನಾ ಮತ್ತು ಪರಮ ಶಿವಂ ರೀಲ್ಸ್​ನಲ್ಲೇ ಬ್ಯುಸಿಯಾಗಿದ್ರು. ಇದೇ ರೀಲ್ಸ್​ನಲ್ಲಿ ಬೆಂಗಳೂರಿನ ರಾಧಿಕಾಗೆ ಪರಮಶಿವಂ ಪರಿಚಯವಾಗಿತ್ತು. ರಾಧಿಕಾಗೆ ರೀಲ್ಸ್​ನಲ್ಲೇ ಬಲೆ ಬೀಸಿ ಬುಟ್ಟಿಗೆ ಹಾಕೊಂಡಿದ್ದ. ಪ್ರೀತಿ ಮಾಡ್ತೀನಿ, ಮದುವೆಯಾಗ್ತೀನಿ ಅಂತೆಲ್ಲ ರಾಧಿಕಾಗೆ ಕಾಗೆ ಹಾರಿಸಿದ್ದ. ಈ ಪರಮ ಶಿವಂ ಬಣ್ಣದ ಮಾತುಗಳನ್ನೆಲ್ಲ ರಾಧಿಕಾ ಸತ್ಯ ಅಂತ ನಂಬಿದ್ಳು. ನಾನು ನಿನ್ನನ್ನು ಮದುವೆಯಾಗುತ್ತೇನೆ. ನಿನಗೊಂದು ನೆಲೆ ಕಲ್ಪಿಸುತ್ತೇನೆ. ಕಾರು ಖರೀದಿಸಿ ಕಂಪನಿಗೆ ಬಿಟ್ಟರೆ ಒಳ್ಳೆಯ ಆದಾಯ ಬರುತ್ತೆ ಅಂತೆಲ್ಲ ರಾಧಿಕಾಗೆ ಮಂಕೂಬೂದಿ ಎರಚಿದ್ದ. ಈ ಕಾರ್ ನೆಪ ಹೇಳೆ ರಾಧಿಕಾಳಿಂದ 6 ಲಕ್ಷ ರೂ. ಪಡೆದ ಪರಮಶಿವಂ ತಮಿಳುನಾಡಿಗೆ ಹೋಗಿದ್ದಾನೆ. ಹೀಗೆ, ಅಂಗೈಯಲ್ಲೇ ಆಕಾಶ ತೋರಿಸಿ ತಮಿಳುನಾಡಿಗೆ ಹೋದ ಪರಮಶಿವಂ ವಾಪಸ್ ಬೆಂಗಳೂರಿಗೆ ಬಂದೇ ಇಲ್ಲ. ಹೀಗಾಗಿ ಹಣ ಕೊಟ್ಟ ರಾಧಿಕಾ ಕಂಗಲಾಗಿದ್ದಾರೆ.
ಅಂಗೈಯಲ್ಲೇ ಆಕಾಶ ತೋರಿಸಿ ತಮಿಳುನಾಡಿಗೆ ಹೋದ ಪ್ರಿಯತಮ ಬರದೆ ಇದ್ದಾಗ ರಾಧಿಕಾ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದುರಂತ ಏನಂದ್ರೆ ರಾಧಿಕಾಗೆ ಮದುವೆ ಆಸೆ ತೋರಿಸಿ ಪರಾರಿಯಾಗಿದ್ದ ಪರಮಶಿವಂ ತಮಿಳುನಾಡಿಗೆ ಹೋಗಿ ಅಲ್ಲಿ ಇನ್ನೊಂದು ಮದುವೆಯಾಗಿದ್ದಾನೆ ಎನ್ನಲಾಗಿದೆ. ಇದರ ಜೊತೆಗೆ ಪರಮಶಿವಂ ಸುಲೋಚನ ಎಂಬಾಕೆಗೆ ಹಣ ನೀಡಿದ್ದಾನೆ ಎನ್ನಲಾಗಿದೆ.

ಕೇಳಲು ಹೋದರೆ ಸುಲೋಚನ ಅವಾಚ್ಯಪದದಿಂದ ನಿಂದಿಸಿದ್ದಾರೆ ಅಂತ ರಾಧಿಕಾ ಆರೋಪಿಸಿದ್ದಾರೆ. ಹೀಗಾಗಿ ರಾಧಿಕಾ ರಾಮ ಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಆದ್ರೆ ದೂರು ನೀಡಿ ಒಂದು ವರ್ಷವಾದರೂ ಪೊಲೀಸ್‌ ಠಾಣೆಗೆ ಅಲೆಯುವುದೇ ಆಗಿದೆ ಹೊರತು ಆರೋಪಿಯನ್ನು ಬಂಧಿಸಿಲ್ಲ ಎಂದು ರಾಧಿಕಾ ಆರೋಪಿಸಿದ್ದಾರೆ. ಇನ್ನೊಂದೆಡೆ ರಾಧಿಕಾ ವಿರುದ್ಧ ಇನ್​ಸ್ಟಾದಲ್ಲಿ ಗ್ಯಾಂಗ್ ಒಂದು ವಾರ್ ಶುರು ಮಾಡಿದೆಯಂತೆ. ಆರು ಜನರ ವಿರುದ್ಧ ಇದುವರೆಗೆ ಎಫ್‌ಐಆರ್‌ ದಾಖಲಿಸಿದ್ದೇನೆ. ನನ್ನ ವಿರುದ್ಧವೇ ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಅವಹೇಳನ ಮಾಡಲಾಗುತ್ತಿದೆ. ಆದರೂ, ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂಬುದಾಗಿ ರಾಧಿಕಾ ಆರೋಪ ಮಾಡಿದ್ದಾರೆ. ಇನ್​ಸ್ಟಾದಲ್ಲಿ ಸಿಕ್ಕವನ ಮೋಹಕ್ಕೆ ಬಿದ್ದು ಲೇಡಿ ಹಣ ಕಳ್ಕೊಂಡು ಬೀದಿಪಾಲಾಗಿದ್ದಾಳೆ. ಹಿಗಾಗಿ ಗೊತ್ತು ಗುರಿ ಇಲ್ಲದೇ ಇರೋರ ಜೊತೆ ಸ್ನೇಹ ಮಾಡೋಕು ಮುಂಚೆ ಹುಷಾರಾಗಿರೋದು ಒಳ್ಳೆಯದು ಇಲ್ಲವಾದ್ರೆ. ಎರಡು ವೈಟ್ ಒಂದು ರೆಡ್ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಕ್ಕ ಸಿಕ್ಕವರಿಗೆ ಮೆಸೇಜ್​​ ಮಾಡೋ ಮಹಿಳೆಯರೇ ಹುಷಾರ್; ಅಪಾಯ ಕಟ್ಟಿಟ್ಟ ಬುತ್ತಿ!

https://newsfirstlive.com/wp-content/uploads/2024/04/reels-7.jpg

Load More