newsfirstkannada.com

ನಾನು ನಂದಿನಿ.. ಪಿಜಿಲಿ ಊಟ ಮಾಡ್ತೀನಿ ಅನ್ನೋ ಹೆಣ್ಣು ಮಕ್ಕಳೇ ಎಚ್ಚರ; ಓದಲೇಬೇಕಾದ ಸ್ಟೋರಿ ಇದು!

Share :

Published February 7, 2024 at 6:26pm

    ಕಡಿಮೆ ಹಣ ರೂಮ್ ಸಿಗುತ್ತೆ ಅಂತ ಹೋದರೆ ಏನಾಗುತ್ತೆ ಗೊತ್ತಾ?

    2, 4, 8 ಶೇರಿಂಗ್​ನಲ್ಲಿ ಬೆಡ್​ರೂಮ್ ಪಡೆದುಕೊಳೋ ಮುನ್ನ ಎಚ್ಚರ?

    ಪಿಜಿ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ರೆ ಮಹಿಳೆಯರಿಗೆ ಬೆದರಿಸಿದ ಮಾಲೀಕರು

ಬೆಂಗಳೂರು: ಹತ್ತಾರು ಕನಸು ಕಟ್ಕೊಂಡು ದೂರದ ಊರುಗಳಿಂದ ಕೆಲಸಕ್ಕಾಗಿ ಅದೆಷ್ಟೋ ಜನ ಬೆಂಗಳೂರಿಗೆ ಬರ್ತಾರೆ. ಹೀಗೆ ಬರೋರಲ್ಲಿ ಸಾಮಾನ್ಯವಾಗಿ ಪಿಜಿಯಲ್ಲಿ ಉಳ್ಕೋಳ್ಳೋರೆ ಹೆಚ್ಚು. ಆದ್ರೆ ಸಿಲಿಕಾನ್ ಸಿಟಿಯ ಪಿಜಿ ಸೇರುವ ಮುನ್ನ ಎಚ್ಚರ! ಕಡಿಮೆ ಹಣಕ್ಕೆ ಪಿಜಿ ಸಿಗುತ್ತೆ ಅಂತ ಹೋದ್ರೆ ನಿಮ್ಮ ಕಥೆ ವ್ಯಥೆಯಾಗುತ್ತೆ.

ಇದನ್ನು ಓದಿ: ಗೋಕರ್ಣ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆ ದಿಢೀರ್​ ನಾಪತ್ತೆ; ಹಲವು ಅನುಮಾನ!

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಪ್ರೇಮಾ ಎಂಬ ಪಿಜಿಯ ಅವ್ಯವಸ್ಥೆಯ ಆಗರವಾಗಿ ಬದಲಾಗಿದೆ. ಈ ಪಿಜಿಯ ಅವ್ಯವಸ್ಥೆಯಿಂದ ಬೇಸತ್ತಿರೋ ಅಲ್ಲಿ ವಾಸವಿರುವ ಯುವತಿಯರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಪಿಜಿ ಅವ್ಯವಸ್ಥೆ ಕುರಿತು ವಿಡಿಯೋ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಮಾಡಿದ್ದಕ್ಕೆ ಪಿಜಿ ವಾರ್ಡನ್ ಕಲ್ಪನಾ ಕೈನಲ್ಲಿ ದೊಣ್ಣೆ ಹಿಡಿದು ಅವಾಜ್ ಹಾಕಿದ್ದಾಳೆ.

ಜೊತೆಗೆ ದೊಣ್ಣೆ ಹಿಡಿದು ಗೂಂಡಾಗಳಂತೆ ವರ್ತನೆ ತೋರಿಸಿದ್ದಾಳೆ. ಹೌದು, ಊಟದ ತಟ್ಟೆಯಲ್ಲಿ ಹುಳ. ತಿನ್ನುವ ಸಾಂಬರ್‌ನಲ್ಲಿ ಜಿರಳೆ. ಪಿಜಿ ಅಡುಗೆ ಮನೆಯೇ ಜಿರಳೆಗಳ ಸಾಮ್ರಾಜ್ಯವಾಗಿ ಬಿಟ್ಟಿದೆ. ಟ್ಯಾಪ್ ಆನ್ ಮಾಡಿದ್ರೆ ಕುಡಿಯೋಕೆ ನೀರೇ ಬರಲ್ಲ ಅಂತಾ ಮಹಿಳೆಯರು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ನಂದಿನಿ.. ಪಿಜಿಲಿ ಊಟ ಮಾಡ್ತೀನಿ ಅನ್ನೋ ಹೆಣ್ಣು ಮಕ್ಕಳೇ ಎಚ್ಚರ; ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/02/bng-pg.jpg

Load More