Advertisment

BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು.. ಈ ಪದವಿ ಹೊಂದಿದವರಿಗೆ ನೇರ ಸಂದರ್ಶನದಿಂದ ಆಯ್ಕೆ!

author-image
Bheemappa
Updated On
BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು.. ಈ ಪದವಿ ಹೊಂದಿದವರಿಗೆ ನೇರ ಸಂದರ್ಶನದಿಂದ ಆಯ್ಕೆ!
Advertisment
  • ಆರಂಭದಲ್ಲೇ ಉತ್ತಮ ಸಂಬಳ ನೀಡುತ್ತಿರುವ BEL ಸಂಸ್ಥೆ
  • ಇಷ್ಟು ವರ್ಷದ ಒಳಗಿನವರು ಮಾತ್ರ ಜಾಬ್​ಗೆ ಅಪ್ಲೇ ಮಾಡಿ
  • ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ, ಒಟ್ಟು ಹುದ್ದೆಗಳು ಎಷ್ಟು ಇವೆ?

ನೀವು ಇಂಜಿನಿಯರ್ ಪದವಿ ಮುಗಿಸಿದ್ದೀರಾ.. ಇಂಜಿನಿಯರ್ ಆದರೂ ಜಾಬ್​ಗಾಗಿ ಹುಡುಕಾಟ ನಡೆಸುತ್ತಿದ್ದೀರಾ. ಹಾಗಾದರೆ ನಿಮಗೊಂದು ಒಳ್ಳೆಯ ಸಂಬಳ ಇರೋ ಉದ್ಯೋಗ ಕಾಲ್​ಫಾರ್ಮ್ ಆಗಿದೆ. ಆಸಕ್ತಿ ಇರುವಂತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಹಾಕಿ, ಜಾಬ್ ಪಡೆದುಕೊಳ್ಳಬಹುದು.

Advertisment

ಇದನ್ನೂ ಓದಿ: IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್​​ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?

ಸಂಸ್ಥೆಯಲ್ಲಿ ಖಾಲಿ ಇರುವಂತಹ ಪ್ರಾಜೆಕ್ಟ್​ ಇಂಜಿನಿಯರಿಂಗ್​-1 ಹುದ್ದೆಗಳನ್ನು ಭರ್ತಿ ಮಾಡಲು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್​ (ಬಿಇಎಲ್​) ಅರ್ಜಿಗಳನ್ನು ಆಹ್ವಾನ ಮಾಡಿದೆ. 32 ವರ್ಷದೊಳಗಿನ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ. ಅಲ್ಲದೇ ಇತರೆ ಸಂಪೂರ್ಣ ಮಾಹಿತಿಗಾಗಿ ಈ ಆರ್ಟಿಕಲ್ ಅನ್ನು ಪೂರ್ಣವಾಗಿ ಮನನ ಮಾಡಿಕೊಳ್ಳಿ.

ಇದನ್ನೂ ಓದಿ: ಪದವೀಧರರಿಗೆ DRDO ಅಡಿ ಉದ್ಯೋಗಗಳು.. ಎಕ್ಸಾಂ ಇಲ್ಲ, ಬೆಂಗಳೂರಲ್ಲೇ ಸಂದರ್ಶನ; ಅಪ್ಲೇ ಮಾಡೋದು ಹೇಗೆ?

Advertisment

publive-image

ಆಯ್ಕೆ ಪ್ರಕ್ರಿಯೇ ಹೇಗಿರುತ್ತದೆ..?
ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸಲು ಲಿಖಿತ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತದೆ. ಬಳಿಕ ಸಂಸ್ಥೆಯ ಕಮಿಟಿಯು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಅಭ್ಯರ್ಥಿಗಳು ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಸ್ಥಳಕ್ಕೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.

ಹುದ್ದೆಯ ಹೆಸರು ಹಾಗೂ ಎಷ್ಟು ಖಾಲಿ ಇವೆ..?
ಪ್ರಾಜೆಕ್ಟ್​ ಇಂಜಿನಿಯರ್-1
ಒಟ್ಟು ಹುದ್ದೆಗಳು- 13
32 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ

ವಿದ್ಯಾರ್ಹತೆ..?
4 ವರ್ಷದ ಬಿಇ ಅಥವಾ ಬಿಟೆಕ್​ ಅನ್ನು ಪೂರ್ಣಗೊಳಿಸಿರಬೇಕು.
ಎಲೆಕ್ಟ್ರಾನಿಕ್ಸ್​- ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ ಆ್ಯಂಡ ಕಮ್ಯೂನಿಕೇಶನ್/ ಎಲೆಕ್ಟ್ರಾನಿಕ್ಸ್​ ಆ್ಯಂಡ್ ಟೆಲಿಕಮ್ಯೂನಿಕೇಶನ್/ ಟೆಲಿಕಮ್ಯೂನಿಕೇಶನ್/ ಕಮ್ಯೂನಿಕೇಶನ್/ ಎಲೆಕ್ಟ್ರಿಕಲ್​ ಆ್ಯಂಡ್ ಎಲೆಕ್ಟ್ರಾನಿಕ್ಸ್​.
ಕಂಪ್ಯೂಟರ್​ ಸೈನ್ಸ್​- ಕಂಪ್ಯೂಟರ್​ ಸೈನ್ಸ್​/ ಇನ್ಫಾರ್ಮನೇಶನ್ ಟೆಕ್ನಾಲಜಿ/ ಇನ್ಫಾರ್ಮನೇಶನ್ ಸೈನ್ಸ್​.

Advertisment

ಅನುಭವ ಹೊಂದಿರಬೇಕು:
BEL ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ..?
ವಾಕ್-ಇನ್-ಇಂಟರ್​ವ್ಯೂವ್ ಮೂಲಕ ಆಯ್ಕೆ

ಇಂಟರ್​ವ್ಯೂವ್ ನಡೆಯುವ ಸ್ಥಳ..?
28-08-2024 ಜೋಧ್​ಪುರ, ರಾಜಸ್ಥಾನ
05-09-2024 ಜಾಮನಗರ, ಗುಜರಾತ್

ಅರ್ಜಿ ಎಷ್ಟು ಶುಲ್ಕ ಪಾವತಿಮಾಡಬೇಕು..?
ಅರ್ಜಿ ಹಾಕಲು ಅಭ್ಯರ್ಥಿಗಳು 472 ರೂ.ಗಳನ್ನು ಪಾವತಿ ಮಾಡಬೇಕು.
ಎಸ್​ಸಿ, ಎಸ್​ಟಿ, ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

Advertisment

ಸಂಬಳ: ಪ್ರಾಜೆಕ್ಟ್​ ಇಂಜಿನಿಯರಿಂಗ್​-1 ಹುದ್ದೆಗೆ ಆಯ್ಕೆ ಆಗುವಂತ ಅಭ್ಯರ್ಥಿಗೆ ಪ್ರತಿ ತಿಂಗಳು 40,000 ರೂ.ಗಳನ್ನು ನೀಡಲಾಗುವುದು. 2ನೇ ವರ್ಷಕ್ಕೆ 45 ಸಾವಿರ ರೂ.ಗಳು. 3ನೇ ವರ್ಷಕ್ಕೆ 50 ರೂ.ಗಳನ್ನು ನೀಡುತ್ತದೆ. ಹೀಗೆ ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡಿಕೊಂಡು ಹೋಗಲಾಗುತ್ತದೆ.

ಅಪ್ಲೇ ಮಾಡುವುದು ಹೇಗೆ..?
ಅಭ್ಯರ್ಥಿಗಳು ಡಿಜಿಟಲ್​ ಸಹಿನ್ ಇರುವ 2 ಫೋಟೋ ಜೊತೆ ಎಲ್ಲ ಮೂಲ ದಾಖಲೆಗಳೊಂದಿಗೆ ಆಯ್ಕೆ ವಿಧಾನಕ್ಕೆ ನೇರವಾಗಿ ಹಾಜರಾಗಬಹುದು. ಇದಕ್ಕೂ ಮೊದಲು ಅಭ್ಯರ್ಥಿಗಳು ತಮ್ಮ ಸ್ವ-ವಿವರ ಹಾಗೂ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂಸ್ಥೆಗೆ ಇ-ಮೇಲ್ ಮಾಡಬೇಕು. ಇ-ಮೇಲ್- [email protected]

ಸಂಪೂರ್ಣ ಮಾಹಿತಿ ಬೇಕಾದರೆ ಈ ಲಿಂಕ್ ಕ್ಲಿಕ್ ಮಾಡಿ- https://studycafe.in/wp-content/uploads/2024/08/BEL-Recruitment-2024-5.pdf

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment