‘ಎಲೆಕ್ಷನ್​ನಲ್ಲಿ ಅವರೂ ದುಡ್ಡು ಕೊಡ್ತಾರೆ, ನಾವೂ ಕೊಡುತ್ತೇವೆ, ಆದರೆ..’ -ಸಂತೋಷ್ ಲಾಡ್

author-image
Bheemappa
Updated On
‘ಎಲೆಕ್ಷನ್​ನಲ್ಲಿ ಅವರೂ ದುಡ್ಡು ಕೊಡ್ತಾರೆ, ನಾವೂ ಕೊಡುತ್ತೇವೆ, ಆದರೆ..’ -ಸಂತೋಷ್ ಲಾಡ್
Advertisment
  • ಗಾಳೆಮ್ಮ ಮಾರೆಮ್ಮ, ವಿಠೋಬ ದೇವರು ಬಿಜೆಪಿಗೆ ಬೇಕಾಗಿಲ್ಲ
  • ಬಿಜೆಪಿಯವರಿಗೆ ಚುನಾವಣೆಯಲ್ಲಿ ಮಾತ್ರ ರಾಮ ನೆನಪಾಗ್ತಾನೆ
  • ರಾಮ ಮಾತ್ರ ಬಿಜೆಪಿಗೆ ಯಾಕೆ ಬೇಕು- ಸಚಿವ ಸಂತೋಷ್ ಲಾಡ್

ಬಳ್ಳಾರಿ: ಚುನಾವಣೆಯಲ್ಲಿ ಅವರು ಹಣ ಕೊಡುತ್ತಾರೆ, ನಾವು ಕೊಡುತ್ತೇವೆ. ಯಾರೇ ದುಡ್ಡು ಕೊಟ್ಟರೂ ಮತದಾರರು ಮಾತ್ರ ಎಚ್ಚರಿಕೆಯಿಂದ ವೋಟ್ ಹಾಕಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯ ಸಂಡೂರು ತಾಲೂಕಿನ ಕೃಷ್ಣನಗರ ಕ್ಯಾಂಪ್​ನಲ್ಲಿ ಬಹಿರಂಗ ಪ್ರಚಾರದಲ್ಲಿ ಸಚಿವ ಸಂತೋಷ ಲಾಡ್ ಮಾತನಾಡಿದರು. ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗದಿದ್ರೂ ಶಾಸಕ ತುಕಾರಾಂ ಪರ ಕ್ಯಾಂಪೇನ್ ಮಾಡಿದ ಅವರು, ಚುನಾವಣೆಯಲ್ಲಿ ಅವರು ಹಣ ಕೊಡುತ್ತಾರೆ, ನಾವು ಕೊಡುತ್ತೇವೆ. ಯಾರೇ ದುಡ್ಡು ಕೊಟ್ಟರೂ ಮತದಾರರು ಎಚ್ಚರಿಕೆಯಿಂದ ವೋಟ್ ಮಾಡಬೇಕು ಎಂದು ಹೇಳಿದರು.

publive-image

ಇದನ್ನೂ ಓದಿ: ಗ್ಯಾಂಗ್​ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿ ಆಗಿದ್ದೇಗೆ.. ಇದು ಹಾರ್ಟ್​ ಅಟ್ಯಾಕ್, ಕೊಲೆನಾ?

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಲಾಡ್, ಬಿಜೆಪಿಯವರಿಗೆ ಚುನಾವಣೆ ಹೊತ್ತಲ್ಲಿ ಮಾತ್ರ ರಾಮ ನೆನಪಾಗುತ್ತಾನೆ. ಅವರು ರಾಮನ ಹೆಸರಲ್ಲಿ ಮತ ಕೇಳುತ್ತಾರೆ. ಅವರಿಗೆ ರಾಮ ಮಾತ್ರ ಯಾಕೆ, ಗಾಳೆಮ್ಮ ಮಾರೆಮ್ಮ, ವಿಠೋಬ ಈ ದೇವರುಗಳು ಯಾಕೆ‌ ಬೇಡ. ಹಿಂದೂಪರ ಎನ್ನುವ ಬಿಜೆಪಿಗರು ಯಾವ ಹಿಂದೂವಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದರು.

ಈ ಬಾರಿಯ ಲೋಕಸಭಾ ಎಲೆಕ್ಷನ್​ನಲ್ಲಿ ತುಕಾರಾಂ ಮಗಳು ಚೈತನ್ಯ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಕೆಲ ಸರ್ವೆಯಲ್ಲಿ ತುಕಾರಾಂ ಗೆಲ್ಲುವ ಸಾಧ್ಯತೆ ಇರುವ ರಿಸಲ್ಟ್ ಬಂದ ಹಿನ್ನಲೆ ಶಾಸಕರನ್ನೇ ಅಖಾಡಕ್ಕೆ ಇಳಿಸಲಾಗಿದೆ ಎಂದು ಕೃಷ್ಣನಗರ ಕ್ಯಾಂಪ್​ನಲ್ಲಿ ಪ್ರಚಾರದ ವೇಳೆ ಲಾಡ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment