ವಿದ್ಯಾರ್ಹತೆ, ವೇತನಶ್ರೇಣಿ ಹಾಗೂ ವಯೋಮಿತಿ ಮಾಹಿತಿ ಇದೆ
ಆನ್ಲೈನ್ ಮೂಲಕ ಅಲ್ಲ, ಆಫ್ಲೈನ್ನಲ್ಲಿ ಅಪ್ಲೇ ಮಾಡಬೇಕು
ಹುದ್ದೆಗೆ ಸಂಬಂಧಿಸಿದಂತೆ 45 ವರ್ಷದ ಒಳಗಿನವರಿಗೆ ಅವಕಾಶ
ಬಳ್ಳಾರಿ ಜಿಲ್ಲೆಯಲ್ಲಿ 2024-25ನೇ ಸಾಲಿನ ಎನ್ಹೆಚ್ಎಂ/ಎನ್ಯುಹೆಚ್ಎಂ ಹಾಗೂ ಪಿಎಂ ಅಭೀಮ್ ಕಾರ್ಯಕ್ರಮಗಳಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಇಲ್ಲಿ ಖಾಲಿ ಇರುವಂತ ವಿವಿಧ ವೃಂಧದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಈ ಸಂಬಂಧ 2024ರ ಆಗಸ್ಟ್ 8 ರಂದು ಕಡತ ಟಿಪ್ಪಣಿಗೆ ಅನುಮೋದನೆ ನೀಡಲಾಗಿತ್ತು.
ಈ ಹುದ್ದೆಗಳ ವಿವರ, ವಿದ್ಯಾರ್ಹತೆ, ಕೆಲಸದ ಅನುಭವ, ವೇತನಶ್ರೇಣಿ, ಮೀಸಲಾತಿ ಹಾಗೂ ವಯೋಮಿತಿ ಮಾಹಿತಿ ಇಲ್ಲಿ ನೀಡಲಾಗಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ಈ ಆರ್ಟಿಕಲ್ ಅನ್ನು ಸರಿಯಾಗಿ ಗಮನಿಸಿ ಅಪ್ಲೇ ಮಾಡಬಹುದು. ಯಾವುದೇ ಪರೀಕ್ಷೆ ಇರುವುದಿಲ್ಲ. ನೇರವಾಗಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಮಾಸಿಕ ಸಂಭಾವನೆ-
₹14,186 ರಿಂದ ₹30,00
ವಯೋಮಿತಿ- ಆಯಾಯ ಹುದ್ದೆಗೆ ಸಂಬಂಧಿಸಿದಂತೆ 45 ವರ್ಷದ ಒಳಗಿನವರಿಗೆ ಅವಕಾಶ ಇದೆ.
ಹುದ್ದೆಗಳ ಹೆಸರು ಹಾಗೂ ಸಂಖ್ಯೆ?
- ಸ್ಟಾಫ್ ನರ್ಸ್-45
- ಕಿರಿಯ ಆರೋಗ್ಯ ಸಹಾಯಕ- 12
- ಆಡಿಯೋಮೆಟ್ರಿಕ್ ಅಸಿಸ್ಟಂಟ್- 01
- ಬ್ಲಾಕ್ ಎಪಿಡೆಮಿಯೋಲಾಜಿಸ್ಟ್- 01
- ಇನ್‌ಸ್ಟ್ರಕ್ಟರ್- 01
- ಜಿಲ್ಲಾ ಸಂಯೋಜಕರು- 01
- ಆಪ್ತ ಸಹಾಯಕರು- 01
ವಿದ್ಯಾರ್ಹತೆ-
- ಬ್ಲಾಕ್ ಎಪಿಡೆಮಿಯೋಲಾಜಿಸ್ಟ್- ಮೆಡಿಕಲ್ ಗ್ರಾಜುವೇಶನ್, ಎಂಎಸ್ಸಿ (2 ವರ್ಷ ಅನುಭವ)
- ಸ್ಟಾಫ್ ನರ್ಸ್- ಬಿಎಸ್ಸಿ ನರ್ಸಿಂಗ್, ಜಿಎನ್ಎಂ ತರಬೇತಿ
- ಕಿರಿಯ ಆರೋಗ್ಯ ಸಹಾಯಕ- 10ನೇ ತರಗತಿ, ಪಿಯುಸಿ, ಡಿಪ್ಲೋಮಾ
- ಆಡಿಯೋಮೆಟ್ರಿಕ್ ಅಸಿಸ್ಟಂಟ್- ಡಿಪ್ಲೋಮಾ
- ಇನ್‌ಸ್ಟ್ರಕ್ಟರ್- ಡಿಪ್ಲೋಮಾ
- ಜಿಲ್ಲಾ ಸಂಯೋಜಕರು- ಬಿಡಿಎಸ್/ಬಿಎಂಎಸ್/ಬಿಯುಎಂಎಸ್/ಬಿಎಸ್ಸಿ ನರ್ಸಿಂಗ್
- ಆಪ್ತ ಸಹಾಯಕರು- ಪದವಿ, ಡಿಪ್ಲೋಮಾ
ಅರ್ಜಿಯನ್ನು Ballari.nic.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು, ಇಲ್ಲವೇ ಕಚೇರಿಯಿಂದ ನೇರ ಪಡೆಯಬಹುದು. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಎಲ್ಲ ದಾಖಲಾತಿಗಳ ಜೆರಾಕ್ಸ್ ಪ್ರತಿ ಲಗತ್ತಿಸಬೇಕು. ಬಳಿಕ ಅಕ್ಟೋಬರ್ 04 ರಂದು ಅರ್ಜಿಯೊಂದಿಗೆ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಾಜರಾಗಬೇಕು. ಈ ವೇಳೆ ಅಭ್ಯರ್ಥಿಗಳು ಮೂಲ ದಾಖಲೆ ತರಲೇಬೇಕು. ಆಯ್ಕೆಯಾದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಅಕ್ಟೋಬರ್ 19 ರಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ