ನವರಾತ್ರಿಗೆ ಉಪವಾಸ ಮಾಡ್ತೀರಾ? ಈ ಎರಡು ಪದಾರ್ಥ ತ್ಯಜಿಸಿದ್ರೆ ಆಗೋ ಲಾಭವೇನು?

author-image
Gopal Kulkarni
Updated On
ನವರಾತ್ರಿಗೆ ಉಪವಾಸ ಮಾಡ್ತೀರಾ? ಈ ಎರಡು ಪದಾರ್ಥ ತ್ಯಜಿಸಿದ್ರೆ ಆಗೋ ಲಾಭವೇನು?
Advertisment
  • ನವರಾತ್ರಿ ವೇಳೆ 9 ದಿನ ಉಪವಾಸ ಮಾಡುವವರು ಕೊಂಚ ಗಮನಿಸಿ
  • ನೀವು 9 ದಿನ ಉಪವಾಸ ಮಾಡುತ್ತಿದ್ದರೆ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಬೇಡ
  • ನೀವು ಈರುಳ್ಳಿ ಬೆಳ್ಳುಳ್ಳಿಯಿಂದ ದೂರು ಉಳಿದರೆ ಆರೋಗ್ಯದ ಲಾಭಗಳಿವೆ

ಇಂದಿನಿಂದ ನವರಾತ್ರಿ ಹಬ್ಬ ಶುರುವಾಗಲಿದೆ. ಇಂದಿನಿಂದ ಒಂಬತ್ತು ದಿನಗಳ ಕಾಲ ಶಕ್ತಿದೇವತೆಯ ಆರಾಧನೆ ನಡೆಯುತ್ತದೆ. ಅನೇಕು 9 ದಿನಗಳ ಕಾಲ ನಿರಾಹಾರ ಉಪವಾಸ ಮಾಡಿದ್ರೆ. ಇನ್ನೂ ಕೆಲವರು ಹಾಲು ಹಣ್ಣುಗಳನ್ನು ತಿಂದು ಉಪವಾಸ ವ್ರತ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಕೆಲವರು ಈ ಒಂಬತ್ತು ದಿನಗಳ ಕಾಲ ತಾವು ತಿನ್ನುವ ಆಹಾರದಲ್ಲಿ ಈರಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತ್ಯಜಿಸುತ್ತಾರೆ. ಅದಕ್ಕೆ ಕಾರಣವೂ ಇದೆ. ಈರಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ತಾಮಸಿಕ ಗುಣಗಳಿವೆ ಎಂದು ಆಯುರ್ವೇದ ಹೇಳುತ್ತದೆ. ಹೀಗಾಗಿ ನವರಾತ್ರಿ ಉಪವಾಸದಂದು ತಾವು ತಿನ್ನುವ ಆಹಾರದಲ್ಲಿ ಈರುಳ್ಳಿ ಬೆಳ್ಳಿಳ್ಳಿಯನ್ನು ಸೇರಿವುಸುದಿಲ್ಲ.

ಇದನ್ನೂ ಓದಿ:ಅಂದದ ಬೆರಳಿಗೆ ಚಂದದ ಉಗುರು! ಕಚ್ಚುವ ರೂಢಿ ಇದೆಯೇ.. ಹಾಗಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ..!

ಜೀರ್ಣಕ್ರಿಯೆಗೆ ಸಮಸ್ಯೆಯಾಗುವ ಸಂಭವ
ಇದು ಕೇವಲ ಆಧ್ಯಾತ್ಮಿಕ ವಿಷಯವಾಯ್ತು. ಈರುಳ್ಳಿ ಬೆಳ್ಳುಳ್ಳಿ ಉಪವಾಸದ ಸಮಯದಲ್ಲಿ ತ್ಯಜಿಸುವುದರಿಂದ ಹಲವು ಆರೋಗ್ಯಕದ ಲಾಭಗಳು ಇವೆ. ಈರಳ್ಳಿ ಬೆಳ್ಳುಳ್ಳಿಯಲ್ಲಿ ನ್ಯೂಟ್ರಿನ್ ಅಂಶಗಳು ಇರುವುದು ಸತ್ಯ. ಆದ್ರೆ ಅದು ಕೆಲವರಿಗೆ ಜೀರ್ಣಶಕ್ತಿ ವಿಚಾರದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಅದರಲ್ಲೂ ಉಪವಾಸದ ಸಮಯದಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಇದರ ಅಪಾಯ ಇನ್ನೂ ಹೆಚ್ಚಿರುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಫ್ರಕ್ಟನ್ಸ್​ನಂತಹ ಕೈಬ್ರೋಹೈಡ್ರೇಟ್​ಗಳು ಇರುತ್ತವೆ ಅವು ಕೆಲವು ವ್ಯಕ್ತಿಗಳ ದೇಹದಲ್ಲಿ ಜೀರ್ಣಕ್ರಿಯೆಯನ್ನು ಕಡಿಮೆಗೊಳಿಸುತ್ತವೆ. ಹೀಗಾಗಿ ನವರಾತ್ರಿಯಂತ ಉಪವಾಸದ ವ್ರತದ ವೇಳೆ ಅವುಗಳಿಂದ ದೂರ ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ.

publive-image

ಇದನ್ನೂ ಓದಿ:ನೆನೆಯಿಟ್ಟ ಹೆಸರು ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು; ಆರೋಗ್ಯದಲ್ಲಿ ಏನೆಲ್ಲಾ ಸುಧಾರಣೆ ಆಗಲಿದೆ?

ದೇಹದ ಉಷ್ಣತೆ ಸಮತೋಲನ
ಆಯುರ್ವೇದದ ಪ್ರಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳು ಎಂದು ಗುರುತಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಉಪವಾಸ ವ್ರತ ಮಾಡುವವರು ದೇಹದವನ್ನು ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ನೀವು ತಿನ್ನುವ ಪದಾರ್ಥದಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇರಿಸಿದೇ ಇದ್ದರೆ ಒಳ್ಳೆಯದು.

ಮಾನಸಿಕ ಆರೋಗ್ಯದ ಮೇಲೆ ಪ್ರಭಾವ
ಆಯುರ್ವೇದದಲ್ಲಿ ಉಲ್ಲೇಖವಾಗಿರುವ ಪ್ರಕಾರ ಬೆಳ್ಳುಳ್ಳಿ ಈರುಳ್ಳಿಗಳು ರಾಜಸಿಕ ಅಂದ್ರೆ ತಾಮಸಿಕ ಗುಣಗಳಲ್ಲಿ ಇರುವ ಒಂದು ಗುಣ. ಬೆಳ್ಳುಳ್ಳಿಯು ಹಲವು ಚಡಪಡಿಕೆ ಹಾಗೂ ಗಮನಬೇರೆ ಕಡೆಯ ಸೆಳೆಯುವಂತಹ ಮಾನಸಿಕ ಪರಿಣಾಮ ಬೀರುತ್ತದೆ ಎಂದು ಆಯುರ್ವೇದ ಹೇಳುತ್ತದೆ. ನವರಾತ್ರಿ ವೇಳೆಯಲ್ಲಿ ದೈವಿಕ ಕಾರ್ಯಗಳಲ್ಲಿ ತೊಡಗಿದೆ ಶುದ್ಧತೆ ಹಾಗೂ ಏಕಾಗ್ರತೆ ಬಹಳ ಮುಖ್ಯ ಹೀಗಾಗಿ ಬೆಳ್ಳುಳ್ಳಿ ತಿನ್ನುವುದನ್ನು ಬಿಡುವುದು ಉತ್ತಮ ಎಂದು ಹೇಳಲಾಗುತ್ತದೆ.

publive-image

ಶುದ್ಧತೆಯನ್ನು ಕಾಪಾಡಲು ಸಹಕಾರಿ
ಭಾರತೀಯ ಹಬ್ಬಗಳು ಹೆಚ್ಚು ಬೇಡುವುದೆ ಮಡಿಯನ್ನು ಅರ್ಥಾತ್ ಶುದ್ಧತೆಯನ್ನು ಹೀಗಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳು ಹೊರ ಸೂಸುವ ವಾಸನೆಗಳು ಅಹಿತಕರವಾಗಿರುತ್ತವೆ.ಹೀಗಾಗಿ ಇವು ದೈವಿಕ ಸಂಕಲ್ಪಗಳನ್ನು ಮಾಡುವ ವೇಳೆ ಈ ರೀತಿಯ ಘಮಲುಗಳು ಮನೆಯಲ್ಲಿ ಹರಡುವುದರಿಂದ ಶುದ್ಧತೆ ಕೆಟ್ಟಂತೆ ಆಗುತ್ತದೆ ಹೀಗಾಗಿ ಬೆಳ್ಳುಳ್ಳಿ ಈರುಳ್ಳಿ ಬಳಕೆ ಬೇಡ ಎನ್ನುತ್ತಾರೆ ಪಂಡಿತರು.ಹೀಗೆ ಉಪವಾಸದ ಸಮಯದಲ್ಲಿ ಈರುಳ್ಳಿ ಬೆಳ್ಳುಳ್ಳಿಗಳಿಂದ ನಾವು ದೂರ ಉಳಿಯುವುದರಿಂದ ಹಲವು ಉಪಯೋಗಗಳಿವೆ. ಇವುಗಳನ್ನು ಬಳಸಿಯೂ ಕಟ್ಟುನಿಟ್ಟಾದ ಉಪವಾಸ ಪಾಲಿಸಿದವರೂ ಇದ್ದಾರೆ. ಆದರೂ ಕೂಡ ಒಂದು ನಂಬಿಕೆ ಅಥವಾ ಆರೋಗ್ಯದ ವಿಚಾರದಲ್ಲಿ ನೋಡಿದಾಗ ಈ ಒಂಬತ್ತು ದಿನ ಉಪವಾಸ ಮಾಡುವವರು ಈ ಎರಡು ಪದಾರ್ಥಗಳಿಂದ ದೂರ ಇರುವುದೇ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment