newsfirstkannada.com

ಬಾಯಲ್ಲಿ ನೀರೂರಿಸೋ ನಿಂಬೆ.. ಆರೋಗ್ಯಕ್ಕೆ ಹೇಗೆಲ್ಲ ಉಪಯೋಗ ಆಗುತ್ತೆ ಲೆಮೆನ್ ಜ್ಯೂಸ್​?

Share :

Published May 4, 2024 at 1:45pm

    ಬಿಸಿಲಿನಿಂದ ಬರುವ ಆರೋಗ್ಯ ಸಮಸ್ಯೆಗಳಿಗೆ ನಿಂಬೆಹಣ್ಣು ಪರಿಹಾರ

    ನಿಂಬೆಹಣ್ಣಿನಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ

    ಮೂತ್ರಪಿಂಡದಲ್ಲಿ ಸ್ಟೋನ್ ಆಗದಂತೆ ಇದು ಹೇಗೆ ಸಹಾಯ ಮಾಡುತ್ತೆ?

ನೆತ್ತಿ ಸುಡುತ್ತಿರುವ ಬಿಸಿಲಿನಲ್ಲಿ ಒಂದು ಗ್ಲಾಸ್ ಜ್ಯೂಸ್ ಕುಡಿದರೆ ಆಹಾ.. ಸ್ವರ್ಗದ ಅನುಭವ. ಏಕೆಂದರೆ ಹೆಜ್ಜೆ, ಹೆಜ್ಜೆಗೂ ನೀರು ಕುಡಿದರೂ ಅಷ್ಟೇನೂ ತೃಪ್ತಿಕರ ಎನಿಸುವುದಿಲ್ಲ. ಅದೇ ಬಿಸಿಲಿನಿಂದ ಬೇಸತ್ತು ಮನೆಗೆ ಬಂದಾಗ ನಿಂಬೆಹಣ್ಣಿನ ಜ್ಯೂಸ್ ಕುಡಿದರೆ ಇದಕ್ಕಿಂತ ಒಳ್ಳೆಯ ಜ್ಯೂಸ್​ ಬೇರೆ ಇಲ್ಲ ಬಿಡು ಎನಿಸುತ್ತದೆ. ಅದರಂತೆ ನಿಂಬೆಹಣ್ಣುಗಳಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ಅವುಗಳು ಏನೇನು ಎಂಬುದನ್ನು ಇವತ್ತು ತಿಳಿದುಕೊಳ್ಳೋಣ.

ಮನೆಯಲ್ಲಿ ಯಾವುದೇ ಹಣ್ಣುಗಳು ಇಲ್ಲದೆ ಇದ್ದರೂ ಕೊನೆಗೆ ನಿಂಬೆಹಣ್ಣು ಮಾತ್ರ ಇದ್ದೇ ಇರುತ್ತದೆ. ಏಕೆಂದರೆ ಮನೆಯಲ್ಲಿ ಪೋಷಕರು ಮೊದಲಿನಿಂದಲೂ ನಿಂಬೆಹಣ್ಣನ್ನ ತರುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೀಗಾಗಿಯೇ ನಿಂಬೆ ಹಣ್ಣಿನ ಜ್ಯೂಸ್ ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ನಿಂಬೆ ಹಣ್ಣು ದೇಹಕ್ಕೆ ಬೇಕಾದಷ್ಟು ಒಳ್ಳೆಯದನ್ನು ಒದಗಿಸುತ್ತದೆ. ಬಿಸಿಲಿನಿಂದ ಉಂಟಾಗುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಿಂಬೆಹಣ್ಣು ಪರಿಹಾರ ಎಂದೇ ಹೇಳಬಹುದು.

ನಿಂಬೆ ವಿಟಾಮಿನ್- ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ ಹೆಸರು ಸಿಟ್ರಸ್ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ವಿರೋಧಿಯಾಗಿ ನಿಂಬೆಹಣ್ಣು ಕೆಲಸ ಮಾಡುತ್ತದೆ. ಬಾಯಿಯಲ್ಲಿ ಹುಣ್ಣುಗಳು ಉಂಟಾದರೆ ನಿಂಬೆ ಜ್ಯೂಸ್ ಸೇವನೆಯಿಂದ ಹೋಗಲಾಡಿಸಬಹುದು. ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ರಾಸಾಯನಿಕಗಳನ್ನ ಹೊಂದಿದ್ದರಿಂದ ಅವು ಕ್ಯಾನ್ಸರ್ ವಿರೋಧಿಯಾಗಿ ಕೆಲಸ ಮಾಡುತ್ತವೆ.

ನಿಂಬೆ ರಸ ಅಥವಾ ಜ್ಯೂಸ್ ಮೂತ್ರದಲ್ಲಿನ ಸಿಟ್ರೇಟ್ (urine’s citrate) ಮಟ್ಟ ಹೆಚ್ಚಿಗೆ ಮಾಡುತ್ತದೆ. ಪದೇ ಪದೇ ಮೂತ್ರವಿಸರ್ಜನೆ ಮಾಡುವುದರಿಂದ ಮೂತ್ರಪಿಂಡದಲ್ಲಿ ಸ್ಟೋನ್ ಆಗದಂತೆ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಕರುಳಿನ ಭಾಗ ಸ್ವಚ್ಛವಾಗುತ್ತದೆ. ಇದರಿಂದ ಸರಾಗವಾದ ಮಲವಿಸರ್ಜನೆ ಆಗುವಂತೆ ಮಾಡುತ್ತದೆ.

ನಿಂಬೆಹಣ್ಣಿನ ಸಿಪ್ಪೆ ಮತ್ತು ತಿರುಳಿನಲ್ಲಿ ಪೆಕ್ಟಿನ್ (pectin) ಎಂಬ ಕರಗುವ ಫೈಬರ್ ಇರುತ್ತದೆ. ಇದು ಕರುಳಿನಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಹೆಚ್ಚು ಮಾಡಿ ನಮ್ಮ ದೇಹದಿಂದ ಬೇಡವಾದ ವಸ್ತುವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬಿರುಗಾಳಿ ಸಮೇತ ಭಾರೀ ಮಳೆ.. ಬಾಳೆ ತೋಟ ಸೇರಿ ವಿವಿಧ ಬೆಳೆಗಳಿಗೆ ಹಾನಿ..

ಫೈಬರ್ ಕಂಟೆಂಟ್ ಇರೋ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಸಮ ಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ. ಹೀಗಾಗಿ ಇದು ಶುಗರ್​ ಕಾಯಿಲೆ ಹೊಂದಿರುವವರೆಗೆ ಹೆಚ್ಚು ಉತ್ತಮವಾಗಿದೆ. ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ, ಇದು ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ರಂಧ್ರಗಳಿಂದ ಹೊರಬರುವ ಹೆಚ್ಚುವರಿ ಎಣ್ಣೆ ನಿಯಂತ್ರಿಸುತ್ತದೆ. ಇದರಿಂದ ನಮಗೆ ಮೊಡವೆಗಳಿಂದ ಪರಿಹಾರ ನೀಡುತ್ತದೆ. ಮುಖದಲ್ಲಿ ಕಪ್ಪು ಕಲೆಗಳನ್ನು ತಪ್ಪಿಸಲು ನಿಂಬೆ ಪ್ರಯೋಜನಕಾರಿ.

ಇದನ್ನೂ ಓದಿ: HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು

ಹೆಚ್ಚು ದೇಹದ ತೂಕ ಹೊಂದಿರುವವರು ಬೇಸಿಗೆ ಬಿಸಿಲನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿ ಇರುವುದರಿಂದ ಬಿಸಿಲಿನಲ್ಲಿ ಆರೋಗ್ಯಕ್ಕೆ ಹೆಚ್ಚು ಅಸ್ವಸ್ಥತೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ದೇಹದ ತೂಕ ಕಡಿಮೆ ಮಾಡಲು ವಿಟಮಿನ್- ಸಿ ಇರೋ ನಿಂಬೆಹಣ್ಣಿನ ಜ್ಯೂಸ್ ಕುಡಿಯಬಹುದು.

ನಿಂಬೆ ಹಣ್ಣಿನಲ್ಲಿನ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೇಹದ ಕೊಬ್ಬಿನ ಅಂಶ ಕರಗಿಸಿ ದಿನ ನಿತ್ಯದ ಅಗತ್ಯತೆಗೆ ಅನುಕೂಲ ಆಗುವಂತೆ ಶಕ್ತಿ, ಸದೃಢತೆ ನೀಡಿ ಆರೋಗ್ಯ ಕಾಪಾಡುತ್ತದೆ. ನಿಂಬೆರಸ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡಿ, ದೇಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಬೇಸಿಗೆ ಕಾಲದಲ್ಲಿ ಹೆಚ್ಚು ಆಯಾಸ ಆಗದಂತೆ ನೋಡಿಕೊಳ್ಳುತ್ತದೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಯಲ್ಲಿ ನೀರೂರಿಸೋ ನಿಂಬೆ.. ಆರೋಗ್ಯಕ್ಕೆ ಹೇಗೆಲ್ಲ ಉಪಯೋಗ ಆಗುತ್ತೆ ಲೆಮೆನ್ ಜ್ಯೂಸ್​?

https://newsfirstlive.com/wp-content/uploads/2024/05/HEALTH.jpg

Load More