/newsfirstlive-kannada/media/post_attachments/wp-content/uploads/2024/03/Coconut-water.jpg)
ಈಗಂತೂ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿರುಬಿಸಿಲು ಹೆಚ್ಚಾಗುತ್ತಿದೆ. ಬಿಸಿಲಿನ ಬೇಗೆ ತಾಳಲಾರದೇ ಜನರು ತಂಪಾದ ಪಾನೀಯಗಳ ಕಡೆ ಮುಖ ಮಾಡುತ್ತಿದ್ದಾರೆ. ಕೆಲವರು ದೇಹಕ್ಕೆ ಹಾನಿಯುಂಟು ಮಾಡುವ ಪಾನೀಯಗಳನ್ನು ಕುಡಿದು ಆಸ್ಪತ್ರೆ ಸೇರುತ್ತಿದ್ದಾರೆ. ಆದರೆ ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುವುದನ್ನು ಬಿಟ್ಟು ಎಳನೀರನ್ನು ಕುಡಿದರೆ ತುಂಬಾ ಪ್ರಯೋಜನಕಾರಿ ಆಗುತ್ತದೆ.
ಇದನ್ನೂ ಓದಿ:ಬಿರು ಬಿಸಿಲಿನಲ್ಲಿ ಪಾನಿಪುರಿ ತಿಂತಾ ಇದ್ದೀರಾ? ಹಾಗಾದರೆ ತಕ್ಷಣವೇ ಈ ಸ್ಟೋರಿ ಓದಿ
ರಣ ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜನತೆ ತಂಪು-ಪಾನೀಯ ಹಾಗೂ ಎಳನೀರಿನ ಕಡೆ ಮುಖ ಮಾಡುತ್ತಿದ್ದಾರೆ. ಇಂಥ ಬೇಸಿಲಿನ ಕಾಲದಲ್ಲಿ ಜನ ದ್ರವ ರೂಪದ ಆಹಾರವನ್ನು ಸೇವಿಸುವುದು ತುಂಬಾ ಒಳ್ಳೆಯದು. ಅದರಲ್ಲೂ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸಿದರೆ ಇನ್ನೂ ದೇಹಕ್ಕೆ ಉಪಯುಕ್ತ ಆಗುತ್ತದೆ.
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೇ ಯುವತಿಯರ ಮುಖದ ಮೇಲೆ ಮೊಡವೆ ಕಡಿಮೆ ಮಾಡಿ, ಹೊಳಪನ್ನು ಕಾಪಾಡಿಕೊಳ್ಳಲು ಎಳನೀರು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಒಂದು ಅಥವಾ ಎರಡು ಎಳನೀರು ಕುಡಿಯುವುದರಿಂದ ದಿನ ಕಳೆದಂತೆ ಮುಖದಲ್ಲಿ ಮೊಡವೆ ಕಾಲಕ್ರಮೇಣ ಕಡಿಮೆಯಾಗಲು ಸಹಾಯ ಮಾಡುತ್ತದೆ. ದೇಹದಲ್ಲಿ ಎಳನೀರಿನ ಅಂಶ ಇರುವುದರಿಂದ ಯಾವುದೇ ರೀತಿಯ ಕಾಯಿಲೆ ಬರುವುದಿಲ್ಲ.
ಇದರ ಜೊತೆಗೆ ಮುಖ್ಯವಾಗಿ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡ ನಿಯಂತ್ರಿಸುವುದರ ಜೊತೆಗೆ ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್ ಡೆಸ್ಕ್ ನ್ಯೂಸ್ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ