Advertisment

‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ

author-image
Ganesh
Updated On
‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ
Advertisment
  • ಮನೆ ಮಾಲಕಿ ಹತ್ಯೆ ರಹಸ್ಯ ಬಯಲು ಮಾಡಿದ ಪೊಲೀಸರು
  • ಪೊಲೀಸ್ ವಿಚಾರಣೆ ವೇಳೆ ಇಂಚಿಂಚು ಮಾಹಿತಿ ಬಹಿರಂಗ
  • ಕೆಂಗೇರಿ ಪೊಲೀಸರಿಂದ ಆರೋಪಿಯ ತೀವ್ರ ವಿಚಾರಣೆ

ಬೆಂಗಳೂರು: ಮೇ 10 ರಂದು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಮನೆ ಮಾಲಕಿ ದಿವ್ಯಾ ಎಂಬಾಕೆಯ ಹತ್ಯೆ ನಡೆದಿತ್ತು. ಇದೀಗ ದಿವ್ಯಾಳನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮೋನಿಕಳನ್ನು (24) ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

Advertisment

ಪೊಲೀಸರ ತೀವ್ರ ತನಿಖೆ ವೇಳೆ ಕೊಲೆ ಆರೋಪಿ ಮೋನಿಕಾ.. ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಬೇಕಂತ ಕೊಲೆ ಮಾಡ್ಲಿಲ್ಲ ಸರ್. ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಚಿನ್ನದ ಸರವನ್ನು ಮಾತ್ರ ಕಸಿದುಕೊಳ್ಳಲಿಕ್ಕೆ ಹೋಗಿದ್ದೆ ಎಂದು ಕಣ್ಣೀರು ಇಟ್ಟಿದ್ದಾಳಂತೆ.

ಇದನ್ನೂ ಓದಿ:ನಮ್ಮ ನಂದಿನಿ, ನಮ್ಮ ಹೆಮ್ಮೆ.. ಟಿ 20 ವಿಶ್ವಕಪ್​​ನಲ್ಲಿ ಕನ್ನಡಿಗರ ಸಂಭ್ರಮ ಹೆಚ್ಚಿಸಿದ KMF..!

publive-image

ಕಳ್ಳತನಕ್ಕೆ ಯತ್ನಿಸಿದ್ದ ಮೋನಿಕಾ
ಕೊಲೆ ಮಾಡುವ ಮುನ್ನಾ ಎರಡು ಮೂರು ಬಾರಿ ಅವರ ಮನೆಯಲ್ಲಿದ್ದ ಚಿನ್ನಾಭರಣ ಕದಿಯಲಿಕ್ಕೆ ಮೋನಿಕಾ ಯತ್ನಿಸಿದ್ದಳಂತೆ. ಆದರೆ ಅದು ವಿಫಲವಾಗಿತ್ತು. ದಿವ್ಯಾ ವಾಸವಿದ್ದ ಮನೆಯ ಗ್ರೌಂಡ್ ಪ್ಲೋರ್​ನಲ್ಲಿ ಮೋನಿಕಾ ವಾಸವಿದ್ದಳು. ದಿವ್ಯಾರ ಮಗು ನೋಡಿಕೊಳ್ಳುವ ನೆಪದಲ್ಲಿ ಮನೆಯಲ್ಲಿ ಏನೇನಿದೆ ಎಂದು ನೋಡಿದ್ದಳು. ಕೊಲೆಯಾದ ದಿವ್ಯಾರ ಪತಿ, ಅತ್ತೆ ಮಾವ ಎಲ್ಲರೂ ಕೆಲಸಕ್ಕೆ ಹೋದ ನಂತರ ಮೋನಿಕಾ ಎಂಟ್ರಿಯಾಗ್ತಿದ್ದಳು. ಅಕ್ಕ-ಅಕ್ಕ ಅಂತಿದ್ದವಳೇ ಮಗು ನಿದ್ದೆಗೆ ಜಾರಿದ್ದಾಗ ಕತ್ತು ಹಿಸುಕಿ ಕೊಂದಿದ್ದಾಳೆ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.

Advertisment

ಇದನ್ನೂ ಓದಿCSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?

publive-image

ಸಾಲ ತೀರಿಸಿಲು ಕೊಲೆ..?
ಮೋನಿಕಾ ಪ್ರಿಯತಮನಿಗಾಗಿ ಮಾಡಿದ್ದ ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದಳು ಅನ್ನೋದು ತನಿಖೆಯಿಂದ ತಿಳಿದುಬಂದಿದೆ. ಇತ್ತಿಚೆಗೆ ಕೆಲಸವೂ ಬಿಟ್ಟಿದ್ದ ಮೋನಿಕಾ, ಎರಡು ತಿಂಗಳು ಮನೆ ಬಾಡಿಗೆ ಕಟ್ಟಿರಲಿಲ್ಲ. ದಿವ್ಯಾ ಕುಟುಂಬ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿತ್ತು. ಅದೇ ಮನೆಯ ಬಾಡಿಗೆಯನ್ನು ಮೋನಿಕಾ ಪಡೆದುಕೊಂಡಿದ್ದಳು. ಕೆಲಸ ಬಿಟ್ಟಿದ್ದರೂ ಪ್ರಿಯತಮ ಟಾಟಾ ಏಸ್ ವಾಹನ ಖರೀದಿಸಲು ಸಾಲ ಮಾಡಿ ಹಣಕೊಟ್ಟಿದ್ದಳು. ಸಾಲಕೊಟ್ಟವರು ಮೋನಿಕಾ ಹಿಂದೆ ಬಿದ್ದಿದ್ದರು. ಇತ್ತ ಸಾಲ ಪಡೆದ ಪ್ರಿಯತಮ ಕೂಡ ಹಣ ವಾಪಸ್ ಕೊಟ್ಟಿರಲಿಲ್ಲ. ದಿವ್ಯಾ ಸ್ನಾನಕ್ಕೆ ಹೋದಾಗ ಮಾಂಗಲ್ಯಸರ ಎಗರಿಸೋಣ ಎಂದು ಮೋನಿಕಾ ಪ್ಲಾನ್ ಮಾಡಿದ್ದಳು. ಅದೇ ಕಾರಣಕ್ಕೆ ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಸರ ಎಗರಿಸೋ ಪ್ಲಾನ್ ಮಾಡಿದ್ದಳು ಎನ್ನಲಾಗಿದೆ.

ಆದರೆ ದಿವ್ಯಾ ಅವರು ಮೋನಿಕಾ ಮುಂದೆ ಮಾಂಗಲ್ಯಸರ ತೆಗೆದಿಡಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ಚಿನ್ನಾಭರಣದ ಜೊತೆ ಮೋನಿಕಾ ಪರಾರಿ ಆಗಿದ್ದಳು. ಕದ್ದ ಸರವನ್ನು ಅಡವಿಟ್ಟು ಆರಾಮಾಗಿ ತನಗೇನೂ ಗೊತ್ತಿಲ್ಲದಂತೆ ವಾಪಸ್ ಬಂದಿದ್ದಳು. ಪೊಲೀಸ್ ವಿಚಾರಣೆ ವೇಳೆ ನನ್ನ ಮನೆಯಲ್ಲೂ 60 ಸಾವಿರ ಕಳುವಾಗಿದೆ ಎಂದಿದ್ದಳು. ಮೃತ ದಿವ್ಯಾ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕೊಲೆ ಎನ್ನುವುದು ಸ್ಪಷ್ಟವಾಗಿತ್ತು. ಘಟನೆ ದಿನ ಇಡಿ ಕಟ್ಟಡದಲ್ಲಿ ಮೃತ ದಿವ್ಯಾರ ಮಗು ಹಾಗೂ ಮೋನಿಕಾ ಹೊರತಾಗಿ ಯಾರೂ ಇರಲಿಲ್ಲ.

ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್​ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್​ಸಿಬಿಗೆ ವರದಾನ ಆಗುತ್ತಾ?

Advertisment

publive-image

ಕೊಲೆ ರಹಸ್ಯ ಗೊತ್ತಾಗಿದ್ದು ಹೇಗೆ..?
ಮೋನಿಕಾ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಅನ್ನೊ ವಿಚಾರ ಗೊತ್ತಾಗಿತ್ತು. 60 ಸಾವಿರ ಹಣ ಮನೆಯಲ್ಲಿದ್ರೆ ಎರಡು ತಿಂಗಳ ಬಾಡಿಗೆ ಯಾಕೆ ಕಟ್ಟಿಲ್ಲ ಎಂಬ ಸಂಶಯ ಪೊಲೀಸರಿಗೆ ಕಾಡಿತ್ತು. ಮೃತಳ ಕತ್ತಿನಲ್ಲಿದ್ದ ಚಿನ್ನ ಕಳುವಾಗಿದ್ದರ ಹಿನ್ನಲೆಯಲ್ಲಿ ಹತ್ತಿರದ ಜ್ಯುವೆಲ್ಲರಿ ಶಾಪ್​​ನಲ್ಲಿ ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಮೋನಿಕಾ ದಿವ್ಯಾಳ ಮಾಂಗಲ್ಯಸರ ಅಡವಿಟ್ಟಿರೋದು ಪತ್ತೆಯಾಗಿದೆ. ಕೂಡಲೇ ಮೋನಿಕಾಳನ್ನು ಪೊಲೀಸರು ವಶಕ್ಕೆ ಪಡೆದಾಗ ಕೊಲೆ ರಹಸ್ಯ ಹೊರ ಬಂದಿದೆ.

ಇದನ್ನೂ ಓದಿ:4 ದಿನ ಮೊದಲೇ ಮಾನ್ಸೂನ್ ಎಂಟ್ರಿ.. ಯಾವಾಗಿಂದ ಮುಂಗಾರು ಮಳೆ ಆರಂಭ..? ಮಹತ್ವದ ಮಾಹಿತಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment