newsfirstkannada.com

CSK ತಂಡದಿಂದ ಹೊರಬಿದ್ದ ಇಬ್ಬರು ಪವರ್​ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್​ಸಿಬಿಗೆ ವರದಾನ ಆಗುತ್ತಾ?

Share :

Published May 15, 2024 at 1:28pm

  ಸೌತ್​ ಇಂಡಿಯನ್​ ಡರ್ಬಿ ಕಾಳಗಕ್ಕೆ ಕ್ಷಣಗಣನೆ

  ಬೆಸ್ಟ್​ ಆಫ್​​ ದಿ ಬೆಸ್ಟ್​​ ಬ್ಯಾಟಲ್​ನಲ್ಲಿ ಗೆಲ್ಲೋದ್ಯಾರು..?

  ರೋರಿಂಗ್​​ RCB V/S ಗಾಯಾಳು ಲಯನ್ಸ್​ ಕದನ

ಉಸಿರಾಡಲು ಚಾನ್ಸೇ ಇಲ್ಲ. ಇರೊಂದೊಂದೇ ಅವಕಾಶ. ಆ ಒಂದು ಚಾನ್ಸ್​ನಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು ಸಿಎಸ್​ಕೆ ಹಾಗೂ ಆರ್​ಸಿಬಿ ತಂಡಗಳು ಹವಣಿಸ್ತಿವೆ. ಇತಿಹಾಸ ಚೆನ್ನೈ ಪರವಿದ್ರೂ, ಈ ಸಲ ಆರ್​ಸಿಬಿ, ಯೆಲ್ಲೋ ಆರ್ಮಿಯನ್ನ ಬೇಟೆಯಾಡುವುದು ಫಿಕ್ಸ್​​.

MUST WIN GAME..! ಸಿಎಸ್​​ಕೆ ವರ್ಸಸ್​​ ಅರ್​ಸಿಬಿ ತಂಡಗಳಿಗೆ ಮುಂದಿನ ಪಂದ್ಯ MUST WIN GAME. ಇಲ್ಲಿ ಗೆದ್ದರಿವಷ್ಟೇ ಉಳಿಗಾಲ. ಸೋತ್ರೆ ಟೂರ್ನಿಯಿಂದಲೇ ಗಂಟೆಮೂಟೆ ಕಟ್ಟಬೇಕಾಗುತ್ತೆ. ಹಾಗಾಗಿ ಸೌತ್ ಇಂಡಿಯನ್ ಡರ್ಬಿ ಭಾರಿ ಕುತೂಹಲ ಕೆರಳಿಸಿದೆ. ಇಡೀ ಕ್ರಿಕೆಟ್ ಪ್ರೇಮಿಗಳ ಚಿತ್ತ ಈ ಪಂದ್ಯದ ಮೇಲೆ ನೆಟ್ಟಿದ್ದು, ಗೆಲುವು-ಸೋಲಿನ ಲೆಕ್ಕಾಚಾರ ಜೋರಾಗಿದೆ.

ಇದು ಬೆಸ್ಟ್​​ ಆಫ್ ದಿ​ ಬೆಸ್ಟ್​ ಬ್ಯಾಟಲ್​​​​​..!
ಆರ್​ಸಿಬಿ ವರ್ಸಸ್​ ಸಿಎಸ್​ಕೆ.. ಎರಡು ತಂಡಗಳು ಎದುರಾದ್ರೆ ಸಾಕು, ಅದರ ಕ್ರೇಜ್​ ನೆಕ್ಸ್ಟ್​ ಲೆವೆಲ್​ನಲ್ಲಿ ಇರುತ್ತೆ. ಈ ಪಂದ್ಯವನ್ನ ಬದ್ಧವೈರಿ ಭಾರತ-ಪಾಕ್​​​​​​ನಂತೆ ಭಾವಿಸ್ತಾರೆ. ಯಾಕಂದ್ರೆ ಇದು ಮಾಮೂಲಿ ಪಂದ್ಯಗಳಂತೆ ಇರಲ್ಲ. ಹೋರಾಟದ ಕಿಚ್ಚು, ಆಟಗಾರರ ಹಾವ-ಭಾವ, ಗೆಲುವಿನ ಪ್ರತಿಷ್ಠೆ. ಎಲ್ಲಾ ಅಂಶಗಳು ಪಂದ್ಯದ ಕೌತುಕತೆಯನ್ನ ಬೇರೆ ಹಂತಕ್ಕೆ ಕೊಂಡೊಯ್ಯುತ್ತೆ. ಇಂತಹ ಮೆಗಾ ಬ್ಯಾಟಲ್​​​​​ಗೆ ಕೌಂಟ್​​ಡೌನ್​​ ಶುರುವಾಗಿದ್ದು ಇನ್ನಿಲ್ಲದ ಕಿಚ್ಚು ಹಚ್ಚಿದೆ.

ಇದನ್ನೂ ಓದಿ:ಮೋಹಕ್ಕೆ ಬಿದ್ದ ಗರುಡ ಭಾರೀ ಗೊಂದಲಕ್ಕೆ ಒಳಗಾಗಿದೆ.. ಯಾಕೆಂದು ಹೇಳಿ ನೋಡುವ..! Photos..!

ಸೆಕೆಂಡ್​ ಹಾಫ್​​.. ಆರ್​ಸಿಬಿ ಮುಟ್ಟಿದ್ದೆಲ್ಲ ಚಿನ್ನ..!
ಆರ್​ಸಿಬಿ ಈ ಸೀಸನ್​​ನಲ್ಲಿ ಏಳು ಬೀಳುಗಳನ್ನ ಕಂಡಿದೆ. ಮೊದಲ ಹಾಫ್​​ನಲ್ಲಿ ಕಳಪೆ ಅಟವಾಡಿ ಭಾರಿ ಟೀಕೆ ಎದುರಿಸಿತ್ತು. ಇನ್ನೇನು ಆರ್​ಸಿಬಿ ಕಥೆ ಮುಗೀತು. ಲೀಗ್​​ನಲ್ಲೇ ಆಟ ಕೊನೆಗೊಳ್ಳುತ್ತೆ ಎಂದು ಎಲ್ಲರೂ ಭಾವಿಸಿದ್ರು. ಆದರೆ ಸೆಕೆಂಡ್​​ ಹಾಫ್​​ನಲ್ಲಿ ಫಿನಿಕ್ಸ್​ ಎದ್ದು ನಿಲ್ತು. ಮೊದಲಾರ್ಧದಲ್ಲಿ 1 ಗೆದ್ದು ಆರರಲ್ಲಿ ಮುಗ್ಗರಿಸಿದ್ದ ಆರ್​ಸಿಬಿ ದ್ವಿತಿಯಾರ್ಧದಲ್ಲಿ ಇಂಪ್ರೆಸ್ಸಿವ್ ಆಟವಾಡ್ತಿದೆ. 6 ರಲ್ಲಿ ಐದು ಗೆದ್ದು ಪ್ಲೇಆಫ್​ ರೇಸ್​ ಮೇಲೆ ಕಣ್ಣಿಟ್ಟಿದೆ.

ಸಾಂಘಿಕ ಹೋರಾಟ.. ಚೆನ್ನೈಗಿದೆ ಕಠಿಣ ಚಾಲೆಂಜ್​​​..!
ರೆಡ್​​​ ಆರ್ಮಿ ಪ್ರಚಂಡ ಫಾರ್ಮ್​ನಲ್ಲಿದೆ. ಎಪ್ರಿಲ್ 25ರಿಂದ ಇಲ್ಲಿಯತನಕ ಸೋಲನ್ನೆ ಕಂಡಿಲ್ಲ. ಬರೀ ಗೆಲುವು, ಗೆಲುವು, ಗೆಲುವು. ಸತತ ಐದರಲ್ಲಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ತಂಡದ ಎಲ್ಲಾ ವಿಭಾಗವು ಸುಧಾರಿಸಿದೆ. ಇಡೀ ತಂಡಕ್ಕೆ ತಂಡವೇ ಜೋಶ್​​ನಿಂದ ಕಣಕ್ಕಿಳಿದು ಎದುರಾಳಿಗೆ ಸೋಲಿನ ರುಚಿ ತೋರಿಸ್ತಿದೆ. ಹೀಗಾಗಿ ಗೆಲುವಿನ ಮದದಲ್ಲಿ ತೇಲಾಡ್ತಿರೋ ಆರ್​ಸಿಬಿಯನ್ನ ಕಟ್ಟಿಹಾಕೋದೆ ಚೆನ್ನೈಗೆ ಅಗ್ನಿಪರೀಕ್ಷೆಯಾಗಿದೆ.

ಇದನ್ನೂ ಓದಿ:CSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?

ಗಾಯಾಳು ಲಯನ್ಸ್​.. ಸಮಸ್ಯೆಗಳ ಸರಮಾಲೆ..!
ಒಂದೆಡೆ ಆರ್​ಸಿಬಿ ಗೆಲುವಿನ ಮೇಲೆ ಗೆಲುವು ದಾಖಲಿಸ್ತಿದೆ. ಅತ್ತ ಸಿಎಸ್​ಕೆ ಸಮಸ್ಯೆಗಳ ಆಗರವಾಗಿದೆ. ಮ್ಯಾಚ್ ವಿನ್ನಿಂಗ್ ಬೌಲರ್ಸ್​ ಗಾಯಕ್ಕೆ ತುತ್ತಾಗಿದ್ದಾರೆ. ಪವರ್​ ಪ್ಲೇ ಸ್ಪೆಷಲಿಸ್ಟ್ ದೀಪಕ್ ಚಹರ್​ ಹಾಗೂ ಡೆತ್ ಓವರ್​​​ ಪಂಟರ್​ ಮಥೀಶ ಪತಿರಾಣ ತಂಡದಿಂದ ಹೊರಬಿದ್ದಿದ್ದಾರೆ. ಅನುಭವಿ ಬೌಲರ್​ಗಳ ಅಲಭ್ಯತೆ ಚೆನ್ನೈಗೆ ಕಂಟಕವಾಗಿ ಪರಿಣಮಿಸಿದೆ.

ಇನ್ನೊಂದೆಡೆ ವಿಕೆಟ್ ಟೇಕರ್​ ಮುಸ್ತಾಫಿಜುರ್​ ರೆಹಮಾನ್ ಕೂಡ ಬಾಂಗ್ಲಾದೇಶಕ್ಕೆ ವಾಪಾಸಾಗಿದ್ದಾರೆ. ಮೂರು ಸ್ಟಾರ್​ವೇಗಿಗಳ ಅಲಭ್ಯತೆಯಿಂದ ಸಿಎಸ್​ಕೆ ಬೌಲಿಂಗ್​ ದುರ್ಬಲಗೊಂಡಿದೆ. ಇರೋ ಬೌಲರ್​ಗಳು ಸೂಕ್ತ ನ್ಯಾಯ ಒದಗಿಸ್ತಿಲ್ಲ. ತುಷಾರ್ ದೇಶಪಾಂಡೆ ಹೊರತುಪಡಿಸಿದ್ರೆ, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಸಾಲದೆಂಬಂತೆ ನಂಬಿಗಸ್ಥ ಅಜಿಂಕ್ಯಾ ರಹಾನೆ ಕೂಡ ಅಟ್ಟರ್ ಫ್ಲಾಪ್​ ಶೋ ನೀಡ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಚೆನ್ನೈ ತಂಡ ಬಲಾಢ್ಯ ಆರ್​ಸಿಬಿ ಎದುರು ಕಣಕ್ಕಿಳಿಯುತ್ತಿದೆ.

ಇದನ್ನೂ ಓದಿ:ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ

ಒಟ್ಟಿನಲ್ಲಿ ಶನಿವಾರದ ಮಹಾಸಮರ INFORM ಆರ್​ಸಿಬಿ V/S WOUNDED ಲಯನ್ಸ್​​ ಕಣವಾಗಿ ಮಾರ್ಪಟ್ಟಿದೆ. ಆರ್​​​ಸಿಬಿ ಒಳ್ಳೆ ಫಾರ್ಮ್​ನಲ್ಲಿದ್ರೂ, ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅನ್ನೋ ಮಾತನ್ನ ಮರೆಯುವಂತಿಲ್ಲ. ಆರ್​ಸಿಬಿ, ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​​​​​​​​​​​​​​​​​​​ ರೇಸ್​​ಗೆ ಎಂಟ್ರಿಕೊಡುತ್ತಾ ? ಇಲ್ಲಾ ಎಲ್ಲಾ ಸಮಸ್ಯೆಗಳನ್ನ ಬದಿಗೊತ್ತಿ ಸಿಎಸ್​ಕೆ, ರೆಡ್​ ಆರ್ಮಿಯ ಕೋಟೆಯನ್ನ ಬೇಧಿಸುತ್ತಾ ಅನ್ನೋದನ್ನ ಕಾದು ನೋಡೋಣ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

CSK ತಂಡದಿಂದ ಹೊರಬಿದ್ದ ಇಬ್ಬರು ಪವರ್​ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್​ಸಿಬಿಗೆ ವರದಾನ ಆಗುತ್ತಾ?

https://newsfirstlive.com/wp-content/uploads/2024/05/RCB-CSK-2.jpg

Load More