newsfirstkannada.com

ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ

Share :

Published May 15, 2024 at 11:02am

Update May 15, 2024 at 11:08am

    ನಿರ್ಣಾಯಕ ಕದನಕ್ಕೂ ಮುನ್ನ RCBಗೆ ಬಿಗ್ ಶಾಕ್​​​..!

    ಜಾಕ್ಸ್ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆ ಆಗುತ್ತಾ..?

    ಜಾಕ್ಸ್​ ಜೊತೆ ವೇಗಿ ರೀಸಿ ಟಾಪ್ಲೆ ಕೂಡ ಗೈರು..!

ಆರ್​ಸಿಬಿಯ ಪ್ಲೇಆಫ್​​ ಲೆಕ್ಕಾಚಾರ ಜೋರಾಗಿದೆ. ಶನಿವಾರದ ವಾರ್ ಗೆದ್ದು ಬಿಟ್ರೆ ಧಮಾಕ ನಡೆಯಲಿದೆ. ಆರ್​ಸಿಬಿ ಅಭಿಮಾನಿಗಳ ಮಹಾದಾಸೆ ಕೂಡ ಅದೇ. ಇಂಥಾ ಟೈಮಲ್ಲೆ ಬರಸಿಡಿಲಿನ ಸುದ್ದಿ ಅಪ್ಪಳಿಸಿದೆ. ಈ ಶಾಕಿಂಗ್​ ಸುದ್ದಿ ಕೇಳಿ ಫ್ಯಾನ್ಸ್​​, ಶಾಕ್​ ಆಗಿದ್ದಾರೆ. ತಮ್ಮ ತಂಡ ಗುರಿ ಮುಟ್ಟುತ್ತೋ, ಇಲ್ವೋ ಅಂತ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.

ಆರ್​ಸಿಬಿ ಸೋಲಿನ ಸರಪಳಿ ಕಳಚಿಟ್ಟಿದೆ. ಫಿನಿಕ್ಸ್​​ನಂತೆ ಮೇಲೆದ್ದು ಸತತ ಐದು ಪಂದ್ಯ ಗೆದ್ದಾಗಿದೆ. ಪ್ಲೇಆಫ್​​ ಆಸೆಯು ಜೀವಂತವಾಗಿಸಿಕೊಂಡಿದೆ. ರೆಡ್​​​ ಆರ್ಮಿ ನೆಕ್ಸ್ಟ್​ ಟಾರ್ಗೆಟ್​ ಮೇ 18.. ಮೇ 18 ರಂದು ನಡೆಯುವ ಐಪಿಎಲ್​​​​ ಧಮಾಕದಲ್ಲಿ ಆರ್​ಸಿಬಿ ಹಾಗೂ ಹಾಲಿ ಚಾಂಪಿಯನ್​ ಸಿಎಸ್​ಕೆ ತಂಡಗಳು ಗುಟುರು ಹಾಕಲಿವೆ. ನಿರ್ಣಾಯಕ ಪಂದ್ಯದಲ್ಲಿ ಡುಪ್ಲೆಸಿ ಬಳಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂತಹ ಕ್ರೂಷಿಯಲ್​ ಟೈಮಲ್ಲಿ ಆರ್​ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. 6 ಮಂದಿ ಸಜೀವ ದಹನ.. 32 ಪ್ರಯಾಣಿಕರಿಗೆ ಗಾಯ.. ಮತ್ತಷ್ಟು ಸಾವು ನೋವಿನ ಆತಂಕ

ನಿರ್ಣಾಯಕ ಕದನಕ್ಕೂ ಮುನ್ನ RCBಗೆ ಬಿಗ್ ಶಾಕ್​
ಇದು ಅಚ್ಚರಿ ಅನ್ನಿಸಿದ್ರೂ ಸತ್ಯ, ಸತ್ಯ. ಸುದ್ದಿ ಕೇಳಲು ಕಹಿಯಾದ್ರೂ ವಿಧಿಯಿಲ್ಲದೇ ಒಪ್ಪಿಕೊಳ್ಳಲೇಬೇಕು. ಆರ್​ಸಿಬಿ ಸ್ಫೋಟಕ ದಾಂಡಿಗ ವಿಲ್​ ಜಾಕ್ಸ್​ ಐಪಿಎಲ್​ ತೊರೆದು ತವರಿಗೆ ವಾಪಾಸಾಗಿದ್ದಾರೆ. ಇಂಗ್ಲೆಂಡ್​ ಆಲ್​ರೌಂಡರ್​ ರಾಷ್ಟ್ರೀ ಸೇವೆ ನಿಮಿತ್ತ ಇಂಗ್ಲೆಂಡ್​​ಗೆ ಹಿಂತಿರುಗಿದ್ದಾರೆ. ಮೇ 22 ರಿಂದ ಆರಂಭಗೊಳ್ಳಲಿರುವ ಪಾಕಿಸ್ತಾನ ವಿರುದ್ಧದ ಟಿ20 ಸರಣಿಗಾಗಿ ಶೀಘ್ರದಲ್ಲೇ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದು ಭಾನುವಾರ ನಡೆಯುವ ಸಿಎಸ್​ಕೆ ಎದುರಿನ ನಿರ್ಣಾಯಕ ಪಂದ್ಯಕ್ಕೆ ಗೈರಾಗಲಿದ್ದಾರೆ. ಇದರಿಂದ ಆರ್​ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ.

IPL ಕ್ಷಣಗಳು ಅದ್ಭುತವಾಗಿತ್ತು. ಇದಕ್ಕೆ ಅಭಿಮಾನಿಗಳಿಗೆ ಕಾರಣಿಭೂತರು. ಈ ರಾತ್ರಿ ನನಗೆ ವಿಶೇಷ. ಬೆಂಗಳೂರು ನಗರವನ್ನು ತುಂಬಾನೇ ಪ್ರೀತಿಸುತ್ತೇನೆ. ಅದ್ಭುತ ಅನುಭವವನ್ನ ಜೊತೆಗೆ ಕೊಂಡೊಯ್ಯುತ್ತಿದ್ದೇನೆ. ಕ್ಯಾಮರೂನ್ ಗ್ರೀನ್​​, ಗ್ಲೆನ್​ ಮ್ಯಾಕ್ಸ್​ವೆಲ್ ಜೊತೆಗಿದ್ರು. ಅವರಿಂದ ತುಂಬಾನೇ ಕಲಿತಿದ್ದೇನೆ. ಉತ್ತಮ ವಾತಾವರಣವನ್ನು ನಿರ್ಮಿಸಿದ್ದು, ಇಂತಹ ಪ್ರದರ್ಶನ ನೀಡಲು ಸಾಧ್ಯವಾಗಿದೆ-ವಿಲ್​ ಜಾಕ್ಸ್​​, ಆರ್​ಸಿಬಿ ಆಟಗಾರ

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಪಾಯಿಂಟ್ಸ್​ ಟೇಬಲ್​ನಲ್ಲಿ ಭಾರೀ ಬದಲಾವಣೆ..!

ಜಾಕ್ಸ್ ಅಲಭ್ಯತೆ.. ತಂಡಕ್ಕೆ ದೊಡ್ಡ ಹಿನ್ನಡೆ ಆಗುತ್ತಾ?
ಫ್ಲೇ ಆಫ್​​ ಸನಿಹದಲ್ಲಿ ಆರ್​ಸಿಬಿ ಗೇಮ್ ಚೇಂಜರ್​​ ವಿಲ್​ ಜಾಕ್ಸ್ ಸೇವೆಯನ್ನು ಕಳೆದುಕೊಳ್ಳಲಿದೆ. ಇದರಿಂದ ತಂಡದ ರಿಸಲ್ಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಯಾಕಂದ್ರೆ ಜಾಕ್ಸ್ ಈ ಐಪಿಎಲ್​​​ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಆಡಿದ 8 ಪಂದ್ಯಗಳಲ್ಲಿ 230 ರನ್ ಗಳಿಸಿದ್ರು. 1 ಶತಕ ಹಾಗೂ 1 ಅರ್ಧಶತಕ ಗಳಿಸಿ ಬ್ಯಾಟಿಂಗ್ ಶಕ್ತಿಯಾಗಿದ್ರು. ಗುಜರಾತ್ ವಿರುದ್ಧ ಸ್ಫೋಟಕ ಸೆಂಚುರಿ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವಿನ ಗಿಫ್ಟ್ ನೀಡಿದ್ರು. ಸದ್ಯ ಜಾಕ್ಸ್ ಗೈರು, ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬರೀ ವಿಲ್ ಜಾಕ್ಸ್​ ಅಷ್ಟೆ ಅಲ್ಲ.. ಸ್ಟಾರ್ ಬೌಲರ್​ ರೀಸಿ ಟಾಪ್ಲೆ ಕೂಡ ಇಂಗ್ಲೆಂಡ್​ ಫ್ಲೈಟ್​​​​​​ ಏರಿದ್ದಾರೆ. ಇದರಿಂದಾಗಿ ಆರ್​ಸಿಬಿ ಬೌಲಿಂಗ್​ ವಿಭಾಗಕ್ಕೆ ಪೆಟ್ಟು ಬಿದ್ದಿದೆ. ಟಾಪ್ಲೆ ಪ್ರಸಕ್ತ ಐಪಿಎಲ್​ನಲ್ಲಿ ಆಡಿದ 4 ಪಂದ್ಯಲ್ಲಿ 4 ವಿಕೆಟ್ ಕಬಳಿಸಿ ಶೈನ್ ಆಗಿದ್ರು. ಇದೀಗ ಟಾಪ್ಲೆ ಹೊರನಡೆದಿದ್ದು, ಇವರ ಜವಾಬ್ದಾರಿ ಯಾರು ಹೊರಲಿದ್ದಾರೆ ಅನ್ನೋ ಹೊಸ ಟೆನ್ಷನ್ ಶುರುವಾಗಿದೆ.

ಇದು ಅದ್ಭುತ ವರ್ಷವಾಗಿತ್ತು. ಎಲ್ಲರಿಗೂ ಧನ್ಯವಾದ. ತಂಡ ಉತ್ತಮವಾಗಿ ಆಡುತ್ತಿದೆ. ಪ್ಲೇ ಆಫ್​​ ತಲುಪಲಿ ಎಂದು ಹಾರೈಸುತ್ತೇನೆ-ರೀಸಿ ಟಾಪ್ಲೆ​​, ಆರ್​ಸಿಬಿ ಆಟಗಾರ

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ಕೆಕೆಆರ್​​, ರಾಜಸ್ಥಾನ ತಂಡದಿಂದ ಸ್ಟಾರ್ ಪ್ಲೇಯರ್ಸ್​ ಔಟ್​​​..!
ಆರ್​ಸಿಬಿ ಜೊತೆ ಈಗಾಗ್ಲೇ ಪ್ಲೇಆಫ್​ ತಲುಪಿರೋ ಕೆಕೆಆರ್ ಹಾಗೂ ಸನಿಹದಲ್ಲಿರೋ ರಾಜಸ್ಥಾನ ತಂಡಕ್ಕೆ ಇಂಗ್ಲೆಂಡ್​​​​​​​ ಸ್ಟಾರ್ ಆಟಗಾರರ ಅಲಭ್ಯತೆಯ ಬಿಸಿ ತಟ್ಟಿದೆ. ಕೆಕೆಆರ್​ನ ಫಿಲ್​​ ಸಾಲ್ಟ್​​, ರಾಜಸ್ಥಾನದ ಜೋಶ್​ ಬಟ್ಲರ್​​​​ ಮುಂದಿನ ಐಪಿಎಲ್​ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇವರಷ್ಟೇ ಅಲ್ಲದೇ ಚೆನ್ನೈಗೆ ಮೊಯೀನ್​ ಅಲಿ, ಪಂಜಾಬ್​ ಕಿಂಗ್ಸ್​ ತಂಡಕ್ಕೆ ಸ್ಯಾಮ್ ಕರನ್​​​​, ಜಾನಿ ಬೇರ್​ಸ್ಟೋವ್ ಹಾಗೂ ಲೀವಿಂಗ್​ಸ್ಟೋನ್ ಗೈರು ಕಾಡಲಿದೆ. ಒಟ್ಟಿನಲ್ಲಿ ಲೀಗ್​ ಹಂತ ಹಾಗೂ ನಾಕೌಟ್​ ಪಂದ್ಯಗಳಿಗೆ ಇಂಗ್ಲೆಂಡ್ ಸ್ಟಾರ್​ ಪ್ಲೇಯರ್ಸ್​ ಗೈರಾಗಲಿದ್ದು, ಇವರ ನಂಬಿ ಕೋಟಿ ಕೋಟಿ ಹಣ ಸುರಿದ ಫ್ರಾಂಚೈಸಿಗಳು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ

https://newsfirstlive.com/wp-content/uploads/2024/05/Will-jacks-8.jpg

Load More