/newsfirstlive-kannada/media/post_attachments/wp-content/uploads/2024/02/water-problem.jpg)
ಬೆಂಗಳೂರು: ಸಿಲಿಕಾನ್​ ಸಿಟಿ ಮಂದಿ ಕಾವೇರಿ ನೀರಿಗೆ ಅವಲಂಬಿತರು. ಆದರೀಗ ಅದೇ ನಿರನ್ನು ನಂಬಿಕೊಂಡು ಬದುಕ್ಕಿದ್ದ ಜನರಿಗೆ ಶಾಕಿಂಗ್​ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ವ್ಯತ್ಯಯವಾಗಲಿದೆ.
ನಾಳೆ ಹಾಗೂ ನಾಡಿದ್ದು ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾವೇರಿ 5ನೇ ಹಂತ ಯೋಜನೆ ಅನುಷ್ಠಾನ ಸಂಬಂಧ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜೋರಾಗಿ ಕೆಮ್ಮಿದ್ದಕ್ಕೆ ಮೂಳೆಯೇ ಮುರಿದೋಯ್ತು! ಇದು ನಂಬಲು ಅಸಾಧ್ಯವಾದ ಸ್ಟೋರಿ!
ಜೂನ್ 6 ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಕಾವೇರಿ 1,2,3 ಹಂತಗಳ ಘಟಕಗಳು ಕಾಮಗಾರಿ ನಿಮಿತ್ತ ಬಂದ್ ಆಗಲಿದ್ದು, ಈ ಕಾರಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
/newsfirstlive-kannada/media/post_attachments/wp-content/uploads/2023/09/Water-Crisis.jpg)
ಕಾವೇರಿ 4ನೇ ಹಂತ 1ನೇ ಮತ್ತು ಎರಡನೇ ಘಟ್ಟಗಳ ಬೆಳಗ್ಗೆ 10 ರಿಂದ ಮಧ್ಯಾಹ್ನ2 ವರೆಗೆ ಬಂದ್ ಆಗಲಿದೆ. ಹೀಗಾಗಿ ಎರಡು ದಿನ ಬೆಂಗಳೂರು ನಗರದಲ್ಲಿ ನೀರು ಪೂರೈಕೆ ಸ್ತಗಿತವಾಗಲಿದೆ. ಜೂನ್ 6 ಹಾಗೂ 7 ರಂದು ನೀರು ಶೇಖರಿಸಿ ಇಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us