/newsfirstlive-kannada/media/post_attachments/wp-content/uploads/2024/01/Kempegowda-Bngaluru.jpg)
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷ ಮಹೇಶ್ ಜೋಶಿ ಕಳೆದ ಸೋಮವಾರವಷ್ಟೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗೆ ಒಂದು ಮನವಿಯನ್ನು ಮಾಡಿದ್ದಾರೆ. ಬೆಂಗಳೂರಿನಿಂದ ಹೊರಡುವ ಹಾಗೂ ಬೆಂಗಳೂರಿಗೆ ಬರುವ ವಿಮಾನಗಳಲ್ಲಿ ನೀಡಲಾಗುವ ಪ್ರಕಟಣೆಗಳು ಮೊದಲು ಕನ್ನಡ ಭಾಷೆಯಲ್ಲಿರಲಿ, ನಂತರ ಉಳಿದ ಭಾಷೆಯಲ್ಲಿ ಪ್ರಕಟನೆಗಳನ್ನು ಕೂಗಿ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದು ಮಾತ್ರವಲ್ಲ ಇದೇ ವಿಚಾರವಾಗಿ ಕೇಂದ್ರ ನಾಗರಿಕ ವಿಮಾನ ಸಚಿವಾಲಯಕ್ಕೆ ಪತ್ರ ಬರೆಯುವ ಉದ್ದೇಶವನ್ನೂ ಇಟ್ಟುಕೊಂಡಿದ್ದಾರೆ. ಮಹೇಶ್ ಜೋಶಿ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಸಂಸ್ಥೆಯ ಎಂಡಿ ಹಾಗೂ ಸಿಇಓ ಆಗಿರುವ ಹರಿ ಮರಾರ್ ಅವರನ್ನು ಭೇಟಿಯಾಗಿದ್ದಾರೆ. ಜೋಶಿಯವರು ಹೇಳುವ ಪ್ರಕಾರ ನಾನು ಈಗಾಗಲೇ ಮರಾರ್​ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ.
ಕನ್ನಡ ರಾಜ್ಯೋತ್ಸವ ದಿನದಿಂದ ವಿಮಾನಗಳಲ್ಲಿ ಪ್ರಕಟಣೆಗಳು ಕನ್ನಡ ಭಾಷೆಯಿಂದಲೇ ಪ್ರಾರಂಭವಾಗಲಿ ನಂತರ ಬೇರೆ ಭಾಷೆಗಳಿಂದಲೂ ಪ್ರಕಟಣೆಯಾಗಲಿ. ಕನ್ನಡವೂ ಕೂಡ ಪ್ರಕಟಣೆಗಳ ಒಂದು ಭಾಗವಾಗಲಿ ಎಂದು ಕೇಳಿಕೊಂಡಿದ್ದೇನೆ. ಬ್ರಿಟೀಷ್ ಹಾಗೂ ಸಿಂಗಾಪೂರ್​ ಏರ್​ಲೈನ್ಸ್​ಗಳು ಈಗಾಗಲೇ ಇದನ್ನು ಅಳವಡಿಸಿಕೊಂಡಿವೆ. ಉಳಿದ ಏರ್​ಲೈನ್ಸ್​​ನಲ್ಲಿಯೂ ಕೂಡ ಇದು ಜಾರಿಯಾಗಲಿ ಎಂದು ಹೇಳಿರುವುದಾಗಿ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/09/BANGALORE-AIRPORT-1.jpg)
ಇದನ್ನೂ ಓದಿ:ಬೆಂಗಳೂರು ಜನರಿಗೆ ಬಿಗ್ ಶಾಕ್ ಕೊಟ್ಟ BMRCL; ಇದು ಏರ್​ಪೋರ್ಟ್ ರಸ್ತೆಯ ಜನರಿಗೆ ಬ್ಯಾಡ್ ನ್ಯೂಸ್..!
ಈ ಬೇಡಿಕೆಯನ್ನು ಮುಂದಿಟ್ಟಾಗ ಅಲ್ಲಿನ ಸಿಬ್ಬಂದಿ ಇದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಲಾಯದ ಸಮ್ಮತಿಯೂ ಬೇಕು ಎಂದು ಹೇಳಿದ್ದಾರೆ. ಹೀಗಾಗಿ ನಾನು ಸದ್ಯದಲ್ಲಿಯೇ ಆ ಸಚಿವಾಲಯಕ್ಕೂ ಈ ವ್ಯವಸ್ಥೆಯನ್ನು ಜಾರಿಗೆ ತನ್ನಿ ಎಂದು ಕೇಳಿಕೊಳ್ಳಲಿದ್ದೇನೆ ಎಂದು ಜೋಶಿಯವರು ಹೇಳಿದ್ದಾರೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ವಿಮೋಚನಾ ದಿನ.. 10 ವರ್ಷದ ನಂತರ ಕಲಬುರಗಿಯಲ್ಲಿ ಸಂಪುಟ ಸಭೆ.. ದೊಡ್ಡ ನಿರೀಕ್ಷೆಯಲ್ಲಿ ಜನ
ಕನ್ನಡ ಸಾಹಿತ್ಯ ಪರಿಷತ್ ಇದೇ ವರ್ಷ ಡಿಸೆಂಬರ್ 20 ರಿಂದ 22ರವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಹೀಗಾಗಿ ಏರ್​ಪೋರ್ಟ್​ ಪ್ರಾಧಿಕಾರ ಸ್ವಾಗತ ಕೋರುವ ಡಿಸ್​ಪ್ಲೇಗಳಲ್ಲಿ ಇದನ್ನು ಪ್ರಕಟಿಸಬೇಕು. ಈ ಮೂಲಕ ನಮ್ಮ ಕನ್ನಡ ಸಂಸ್ಕೃತಿನ ಹಾಗೂ ಕಲೆಯನ್ನು ಜನರಿಗೆ ತಲುಪಿಸಬೇಕು ಎಂದು ವಿನಂತಿ ಮಾಡಿದ್ದಾರೆ.
ಈ ಸಮಾರಂಭಕ್ಕೆ ಲಕ್ಷ ಲಕ್ಷ ಜನರು ಹಾಜರಾಗಲಿದ್ದಾರೆ. ಅವರಲ್ಲಿ ಅನಿವಾಸಿ ಕನ್ನಡಿಗರು ಇದ್ದಾರೆ. ಅವರು ಬಂದು ಇಲ್ಲಿ ತಲುಪಿದಾಗ ಅವರಿಗೆ ಕನ್ನಡದ ನೆಲದಲ್ಲಿ ಕಾಲಿಟ್ಟ ಅನುಭವವಾಗಬೇಕು ಹೀಗಾಗಿ ಪ್ರದರ್ಶಕಗಳಲ್ಲಿ ಕನ್ನಡ ಸಮ್ಮೇಳನದ ಬಗ್ಗೆ ಪ್ರಕಟಿಸುವಂತೆ ವಿನಂತಿ ಮಾಡಿದ್ದು ಅದಕ್ಕೆ ಸಿಬ್ಬಂದಿ ಧನಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಇದನ್ನು ಮೊದಲು ಬೆಂಗಳೂರು ಏರ್​ಪೋರ್ಟ್​ನಿಂದ ಪ್ರಾರಂಭ ಮಾಡಿ ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಉಳಿದ ಏರ್​ಪೋರ್ಟ್​ಗಳಲ್ಲೂ ಜಾರಿಗೆ ಬರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us