ಮೆಟ್ರೋ ನಿಲ್ದಾಣದ ನಿರೀಕ್ಷೆಯಲ್ಲಿದ್ದ ಏರ್ಪೋರ್ಟ್ ರಸ್ತೆ ಜನರಿಗೆ ನಿರಾಸೆ
ಅನುದಾನದ ಕೊರೆತೆಯಿಂದಾಗಿ ಎರಡು ನಿಲ್ದಾಣಗಳ ನಿರ್ಮಾಣ ಅಸಾಧ್ಯ
ಬೆಟ್ಟಹಲಸೂರು, ಚಿಕ್ಕಜಾಲ ನಿಲ್ದಾಣ ನಿರ್ಮಾಣದಿಂದ ಹಿಂದೆ ಸರಿದ BMRCL
ಬೆಂಗಳೂರು: ಮೆಟ್ರೋ ನಿರೀಕ್ಷೆಯಲ್ಲಿದ್ದ ಏರ್ಪೋರ್ಟ್ ರಸ್ತೆಯ ಜನರಿಗೆ ಬಿಎಂಆರ್ಸಿಎಲ್ ತೀವ್ರ ನಿರಾಸೆಯನ್ನುಂಟು ಮಾಡಿದೆ. ಏರ್ಪೋರ್ಟ್ ಮಾರ್ಗದ ಎರಡೂ ನಿಲ್ದಾಣಗಳ ನಿರ್ಮಾಣದ ಯೋಜನೆಯನ್ನು ಕೈಬಿಡಲು ಮುಂದಾಗಿದೆ ಬಿಎಂಆರ್ಸಿಎಲ್. ನೀಲಿ ಮಾರ್ಗದ ಬೆಟ್ಟಹಲಸೂರು ಹಾಗೂ ಚಿಕ್ಕಜಾಲ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಬಿಎಂಆರ್ಸಿಎಲ್ ಕೈಬಿಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನ.. 10 ವರ್ಷದ ನಂತರ ಕಲಬುರಗಿಯಲ್ಲಿ ಸಂಪುಟ ಸಭೆ.. ದೊಡ್ಡ ನಿರೀಕ್ಷೆಯಲ್ಲಿ ಜನ
140 ಕೋಟಿ ವೆಚ್ಚದ ಬೆಟ್ಟಹಲಸೂರು ಹಾಗೂ 130 ಕೋಟಿ ವೆಚ್ಚದಲ್ಲಿ ಚಿಕ್ಕಜಾಲ ಮೆಟ್ರೋ ಸ್ಟೇಷನ್ ನಿರ್ಮಾಣಕ್ಕೆ ಬಿಎಂಆರ್ಸಿಎಲ್ ಯೋಜನೆ ಹಾಕಿಕೊಂಡಿತ್ತು. ಆದ್ರೆ ಅನುದಾನದ ಸಮಸ್ಯೆ, ಮೂಲ ಡಿಪಿಆರ್ನಲ್ಲಿ ಎರಡೂ ನಿಲ್ದಾಣಗಳ ಪ್ರಸ್ತಾಪ ಇಲ್ಲದ ಕಾರಣ ಯೋಜನೆ ಕೈಬಿಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮುನಿರತ್ನ ಕೇಸ್‌ಗೆ ತುಪ್ಪ ಸುರಿದ್ರಾ ಹನುಮಂತರಾಯಪ್ಪ? ಕುಸುಮಾ ತಂದೆ ಆಡಿಯೋ ಕಂಟಕವಾಗುತ್ತಾ? ಏನಿದರ ಅಸಲಿಯತ್ತು?
ಏರ್ಪೋರ್ಟ್ ಮಾರ್ಗದ ನಮ್ಮ ಮೆಟ್ರೋ 2ಬಿ ಹಂತ 36.44 ಕಿಮೀ ಉದ್ದವಿದ್ದು 17 ನಿಲ್ದಾಣಗಳು ಇರಲಿವೆ. 2019ರಲ್ಲಿ ರಾಜ್ಯ ಸಚಿವ ಸಂಪುಟ ಹಲವು ಕಾರಣಗಳಿಂದಾಗಿ ನಿಲ್ದಾಣ ಮಾಡಲು ಒಪ್ಪಿಗೆ ನೀಡಿತ್ತು. ಆದ್ರೆ ಅದು ಮೂಲ ಡಿಪಿಆರ್ನಲ್ಲಿ ಪ್ರಸ್ತಾಪ ಇಲ್ಲದ ಕಾರಣಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ.ಆದರಿಂದ ರಾಜ್ಯ ಸರ್ಕಾರವೇ ಸಂಪೂರ್ಣ ಮೊತ್ತ ಭರಿಸಬೇಕಾಗಿ ಬಂದಿತ್ತು. ನಂತರ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ ಎಂಬೆಸ್ಸಿ ಗ್ರೂಪ್ ಆಸಕ್ತಿ ತೋರಿಸಿತ್ತು. ಆದ್ರೆ ಈಗ ಎಂಬೆಸ್ಸಿ ಸಹ ಅನುದಾನ ಒದಗಿಸಲು ಹಿಂದೆ ಮುಂದೆ ನೋಡುತ್ತಿದೆ. ಈ ಕಾರಣದಿಂದಾಗಿ ಎರಡೂ ನಿಲ್ದಾಣಗಳ ನಿರ್ಮಾಣವನ್ನು ಕೈ ಬಿಡಲು ಬಿಎಂಆರ್ಸಿಎಲ್ ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ