ಮುಗಿಯದ ಕುಸುಮಾ ಮುನಿರತ್ನರ ಮಧ್ಯದ ಮಾತಿನ ಮಹಾಸಂಗ್ರಾಮ!
ಕುಸುಮಾ ತಂದೆ ಹನುಮಂತರಾಯಪ್ಪ ಕಾರಣಕ್ಕೆ ಇದೆಲ್ಲಾ ನಡೀತಿದ್ಯಾ?
ಆ ಒಂದು ವಿಡಿಯೋ ಈಗ ತೆರೆದಿಟ್ಟಿರುವ ಸಮರದ ರಹಸ್ಯಗಳಾದ್ರೂ ಏನು?
ಬೆಂಗಳೂರು: ಮಾಜಿ ಮಂತ್ರಿ ಮುನಿರತ್ನ ಹಾಗೂ ಕುಸುಮಾ ನಡುವೆ ಸೇಡಿನ ಸಂಗ್ರಾಮ ನಡೀತಿದ್ಯಾ? ಇದೇ ಕಾರಣಕ್ಕೆ ಇವತ್ತು ಮುನಿರತ್ನ ಸಂಕಷ್ಟದ ಸುಳಿಗೆ ಸಿಲುಕಿದ್ದಾರಾ? ಖುದ್ದು ಮುನಿರತ್ನ ಇದೊಂದು ಜಂಟಿ ಷಡ್ಯಂತ್ರ ಎನ್ನುತ್ತಿರುವಾಗಲೇ ಎರಡು ಸಂಗತಿ ಈ ಪ್ರಕರಣದ ಮತ್ತೊಂದು ಮಗ್ಗಲನ್ನು ತೋರಿಸುತ್ತಿವೆ. ಅಷ್ಟೇ ಅಲ್ಲ, ಖುದ್ದು ಮುನಿರತ್ನ ಹೇಳುವ ಪ್ರಕಾರ ಈ ಸೇಡಿನ ಸಂಗ್ರಾಮಕ್ಕೆ 16 ವರ್ಷಗಳ ಚರಿತ್ರೆ ಇದೆ.
ಕುಸುಮಾ ತಂದೆ ಹನುಮಂತರಾಯಪ್ಪ ಕಾರಣಕ್ಕೇ ಇದೆಲ್ಲಾ ನಡೀತಿದ್ಯಾ?
ಖುದ್ದು ಮುನಿರತ್ನ ಬಂಧನಕ್ಕೂ ಮುನ್ನ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ಇದೇ ಮಾತುಗಳನ್ನು ಹೇಳಿದ್ದಾರೆ. ತಮ್ಮ ವಿರುದ್ಧದ ಷಡ್ಯಂತ್ರದ ಸೇಡು 2008ರಿಂದಲೇ ರಾಜರಾಜೇಶ್ವರಿ ನಗರ ರಣಕಣದಲ್ಲಿ ನಡೆದಿತ್ತು ಅನ್ನೋ ಪ್ರತೀಕಾರ ಸಂಗ್ರಾಮದ ಇತಿಹಾಸವನ್ನು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಸೋಲೋದಕ್ಕೆ ನಾನು ಕಾರಣ ಅಂತ ತಿಳಿದಿದ್ದಾರೆ. ಅಸಲಿಗೆ ಡಿಕೆ ಸುರೇಶ್ರನ್ನ ಸೋಲಿಸಿದ್ದು, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಥೆ ಮುಗಿಸುತ್ತಿರೋದು ಕುಸುಮಾ ತಂದೆ ಹನುಮಂತರಾಯಪ್ಪ ಅನ್ನೋ ಆರೋಪವನ್ನು ಮುನಿರತ್ನ ಮಾಡಿದ್ರು. ಇದೇ ವಿಚಾರಕ್ಕೇ ಕುಸುಮಾ ತಕ್ಕ ತಿರುಗೇಟು ನೀಡಿದ್ರು. ಆದ್ರೀಗ ವೈರಲ್ ಆಗ್ತಿರೋ ಎರಡು ಸಾಕ್ಷಿ ಇಂಥದ್ದೇ ಸುಳಿವು ನೀಡುತ್ತಿವೆ.
ಚಲುವರಾಜು ಜೊತೆ ಸಿಎಂ ಭೇಟಿ ಮಾಡಿದ್ದು ಇದೇ ಹನುಮಂತರಾಯಪ್ಪ!
ಇದೇ ಶನಿವಾರ ಅಂದರೇ ಸೆಪ್ಟೆಂಬರ್ 14ರಂದು ಗುತ್ತಿಗೆದಾರ ಚಲುವರಾಜು ಸಿಎಂ ಭೇಟಿ ಮಾಡಿದ್ರು. ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಗುತ್ತಿಗೆದಾರ ಚಲುವರಾಜು ಸಿಎಂ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ರು. ಈ ಸಂದರ್ಭ ಚಲುವರಾಜು ಜೊತೆಯಲ್ಲಿ ಇದ್ದಿದ್ದು ಇದೇ ಕುಸುಮಾ ತಂದೆ ಹನುಮಂತರಾಯಪ್ಪ. ಇದೀಗ ವೈರಲ್ ಆಗ್ತಿರೋ ಆಡಿಯೋ ಸಾಕ್ಷಿಯೂ ಸಹ ಹನುಮಂತರಾಯಪ್ಪರ ಸುಳಿವು ನೀಡುತ್ತಿದೆ.
ಚಲುವರಾಜುಗೆ ಹನುಮಂತರಾಯಪ್ಪ ಸಹಾಯ ಮಾಡ್ತೀನಿ ಎಂದ ಆಡಿಯೋ!
ಗುತ್ತಿಗೆದಾರ ಚಲುವರಾಜು ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗ್ತಿದೆ. ಇದು ನಮ್ಮದೇ ಸರ್ಕಾರ ನಾನು ಸಹಾಯ ಮಾಡ್ತೀನಿ, ತಲೆ ಕೆಡೆಸಿಕೊಳ್ಳಬೇಡ ಅನ್ನುವ ಆಡಿಯೋ ಸಹ ಮುನಿರತ್ನ ಹೇಳಿದ್ದು ನಡೀತಿದ್ಯಾ ಅನ್ನೋ ಅನುಮಾನ ಮೂಡಿಸುತ್ತದೆ.
ಇದೇ ವಿಚಾರಕ್ಕೆ ಖುದ್ದು ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾನೇ ಮಾತಾಡಿದ್ದೀನಿ. ಬೇರೆಯವರ ರೀತಿ ನಾನಲ್ಲ ಅನ್ನೋದಿಲ್ಲ. ನನ್ನ ಸಮುದಾಯಕ್ಕೆ ಸೇರಿದ ಹುಡುಗ ಚಲುವರಾಜು ಅವನ ಕಷ್ಟ ನೋಡಿ ಸಹಾಯ ಮಾಡಿದ್ದೀನಿ ಎನ್ನುತ್ತಿದ್ದಾರೆ.
ಇದನ್ನೂ ಓದಿ:ಶಾಸಕ ಮುನಿರತ್ನ ರೀತಿ ಚೆನ್ನಾರೆಡ್ಡಿ ಬಂಧನ ಏಕಾಗಿಲ್ಲ? ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಮೊದಲಿಗೆ ಇದು ಕುಸುಮಾ ವರ್ಸಸ್ ಮುನಿರತ್ನ ರಾಜಕೀಯ ದ್ವೇಷದ ಯುದ್ಧದಂತೆಯೇ ಕಾಣುತ್ತಿತ್ತು. ಆದರೇ, ಸೇಡಿಗೆ ಸೇಡು ಅನ್ನೋ ಪ್ರತೀಕಾರದ ಸಂಗ್ರಾಮದಲ್ಲಿ ಡಿಕೆ ಬ್ರದರ್ಸ್ ಹೆಸರನ್ನೂ ಮುನಿರತ್ನ ಹೇಳುತ್ತಲೇ ಇದ್ದಾರೆ. ಇವರೊಂದಿಗೆ ಹನುಮಂತರಾಯಪ್ಪ ಅವರ ನೇರಾನೇರ ಮಾತಾಡುತ್ತಿದ್ದಾರೆ. ಸದ್ಯ, ಲಂಚ ಬೇಡಿಕೆ ಹಾಗೂ ಜಾತಿ ನಿಂದನೆಯ ಪ್ರಕರಣ ಬಹುದೊಡ್ಡ ತಿರುವು ಪಡೆದುಕೊಳ್ಳುತ್ತಿದೆ. ಮಹಿಳಾ ಆಯೋಗಕ್ಕೂ ಕುಸುಮಾ ದೂರು ನೀಡಿದ್ದಾರೆ. ಈ ಮಧ್ಯೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಚಲುವರಾಜು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ ಬಂದಿದ್ದಾರೆ.
ಇದನ್ನೂ ಓದಿ: ₹20 ಲಕ್ಷ ಕೊಟ್ರೂ ಇನ್ನೂ ಹಣಕ್ಕೆ ಬೇಡಿಕೆ ಇಟ್ಟಿದ್ರಾ ಮುನಿರತ್ನ..? ಸೇಡಿನ ರಾಜಕಾರಣ ಎಂದಿದ್ದೇಕೆ BJP ಶಾಸಕ?
ಮುನಿರತ್ನ ಹೇಳ್ತಿರೋ ಷಡ್ಯಂತ್ರದ ಆರೋಪ ನಿಜವೋ? ಸುಳ್ಳೋ? ಆದರೇ ಪಕ್ಕಾ ರಾಜಕೀಯ ಸಂಗ್ರಾಮವಂತೂ ಇಲ್ಲಿ ನಡೀತಿದೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ, ಲಂಚ ಬೇಡಿಕೆ ಹಾಗೂ ಜಾತಿ ನಿಂದನೆ ಆರೋಪ ಹೊತ್ತಿರೋ ಮುನಿರತ್ನಗೆ ಮುಕ್ತಿ ಸಿಗೋದಕ್ಕೇ ಒಂದು ದಾರಿ ಇದೆ. ಸದ್ಯ, ಎಫ್ಎಸ್ಎಲ್ಗೆ ಕಳಿಸಿರೋ ಆಡಿಯೋ ಸಂಭಾಷಣೆ ಮುನಿರತ್ನ ಅವರದ್ದು ಅಲ್ಲ ಅನ್ನೋದು ಸಾಬೀತಾದ್ರಷ್ಟೇ ಮುನಿರತ್ನ ಬಚಾವ್. ಇಲ್ಲದಿದ್ರೆ ಇನ್ನಷ್ಟು ಸವಾಲಿನ ಸುಳಿಗೆ ಮುನಿರತ್ನ ಸಿಲುಕಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ