ಸಿನಿಮೀಯ ಶೈಲಿಯಲ್ಲೇ ಮಾಜಿ ಸಚಿವ, ಶಾಸಕ ಮುನಿರತ್ನ ಬಂಧನ
ಹಣಕೊಡಲ್ಲ ಅಂತ ಹೇಳಿದಾಗ ಜಾತಿ ನಿಂದನೆ ಮಾಡಿದ್ರಾ ಮುನಿರತ್ನ?
ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರಾ ಬಿಜೆಪಿ MLA ಮುನಿರತ್ನ ನಾಯ್ಡು?
ಸಿನಿಮೀಯ ಶೈಲಿಯಲ್ಲೇ ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ಬಂಧನವಾಗಿದೆ. ಒಂದು ಕಾಲದ ಸಿದ್ದರಾಮಯ್ಯ ಅತ್ಯಾಪ್ತ ಎನಿಸಿಕೊಂಡಿದ್ದ ಮುನಿರತ್ನ ವಿರುದ್ಧ 2 ಗಂಭೀರ ಆರೋಪವಿದೆ. ಪೊಲೀಸರು 2 ಎಫ್‌ಐಆರ್ ಕೂಡ ದಾಖಲಿಸಿದ್ದರು. ಖುದ್ದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಸಣ್ಣದೊಂದು ಟ್ರೈಲರ್ ಕೂಡ ಕೊಟ್ಟಿದ್ರು. ಇಷ್ಟು ಬೇಗ ಮುನಿರತ್ನ ಅರೆಸ್ಟ್ ಸಿನಿಮಾದ ಚಾಪ್ಟರ್ ಒನ್ ರಿಲೀಸ್ ಆಗುತ್ತೆ ಅಂತ ಯಾರೂ ಅಂದಾಜಿಸಿರಲಿಲ್ಲ. ಅಷ್ಟಕ್ಕೂ ಎಂಎಲ್ಎ ಮುನಿರತ್ನ ಅರೆಸ್ಟ್ ಆಗಿದ್ದೇಗೆ? ಅರೆಸ್ಟ್ ಮಾಡಿದ್ದೇಕೆ?
ಇದನ್ನೂ ಓದಿ: BREAKING: ಬಿಜೆಪಿ ಶಾಸಕ ಮುನಿರತ್ನ ಬಂಧನ; ಕಾರಣವೇನು?
ಮುನಿರತ್ನ. ಪಾರ್ಟ್ ಟೈಮ್ ಪ್ರಡ್ಯೂಸರ್. ಫುಲ್ ಟೈಮ್ ಪಾಲಿಟಿಶಿಯನ್. ಮಾಜಿ ಸಚಿವ, ಪ್ರತಿಷ್ಠಿತ ರಾಜರಾಜೇಶ್ವರಿನಗರದ MLA ಅರೆಸ್ಟ್ ಆಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಪ್ರಬಲ ಶಾಸಕನ ಬಂಧನ ಮಾಡಿದ್ದಾರೆ. ಕೆ.ಎ 07 ಜಿ 0647 ಅನ್ನೋ ಪೊಲೀಸ್ ವಾಹನದ ಮುಂದೆ ಮಾಜಿ ಸಚಿವ ಮುನಿರತ್ನ ಸಪ್ಪೆ ಮೋರಿ ಹಾಕಿಕೊಂಡು ನಿಂತಿದ್ದಾರೆ. ಅವರ ಹಿಂದೆಯೇ ಒಂದು ಕಾರಿದೆ. ಅದು ಮುನಿರತ್ನ ಅವರಿಗೆ ಸೇರಿದ ಕಾರು ಇದ್ದಿರಬಹುದು. ಹಿಂದೆಯೇ ಒಂದು ದೇವಸ್ಥಾನ ಕಾಣುತ್ತಿದೆ. ಅಸಲಿಗೆ ಮುನಿರತ್ನ ನಾಯ್ಡು ಅವರನ್ನು ಪೊಲೀಸರು ಬಂಧಿಸಿದ್ದೇಕೆ ಅನ್ನೋದು ಎಷ್ಟು ಮುಖ್ಯ ವಿಚಾರವೋ? ಅರೆಸ್ಟ್ ಮಾಡಿದ ರೀತಿ ದರ್ಶನ್ ಸಿನಿಮಾ ಮೀರಿಸೋ ಪಿಕ್ಚರ್ ತರಹ ಕಾಣುತ್ತಿದೆ.
ಶರವೇಗದಲ್ಲಿ ಚೇಸ್ ಮಾಡಿ ಪೊಲೀಸರಿಂದ ಮುನಿರತ್ನ ಅರೆಸ್ಟ್
ಪೊಲೀಸರು ಅರೆಸ್ಟ್ ಮಾಡ್ತಾರೆ ಅನ್ನೋ ಸುಳಿವು ಸಿಕ್ಕ ಕೂಡಲೇ ಮುನಿರತ್ನ ಆಂಧ್ರ ಪ್ರದೇಶಕ್ಕೆ ಹೋಗ್ತಿದ್ದರು ಎನ್ನಲಾಗ್ತಿದೆ. ಹಾಗಾಗಿಯೇ ಮುನಿರತ್ನ ಕುಳಿತಿದ್ದ ಕಾರು ಮಿಂಚಿನ ವೇಗದಲ್ಲಿ ಆಂಧ್ರ ಪ್ರದೇಶದ ಗಡಿ ದಾಟುವ ತವಕದಲ್ಲಿ ಓಡುತ್ತಿತ್ತು. ಮುನಿರತ್ನ ರಾಜ್ಯ ಬಿಟ್ಟು ತೆರಳುತ್ತಿದ್ದಾರೆ ಅನ್ನೋ ಮಾಹಿತಿ ಮೇರೆಗೆ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿ ಶರವೇಗದಲ್ಲಿ ಆಪರೇಷನ್ ಆರಂಭಿಸಿದ್ರು. ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಸೂಚನೆ ಮೇರೆಗೆ ಮುನಿರತ್ನ ಕಾರು ಬೆನ್ನಟ್ಟಿದ್ದ ಪೊಲೀಸರು ಕೋಲಾರಕ್ಕೆ ನುಗ್ಗಿದ್ರು. ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಮುನಿರತ್ನ ಕಾರು ಅಡ್ಡಗಟ್ಟಿದ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ.
ಆಂಧ್ರದ ಮೂಲಕ ಚಿತ್ತೂರಿಗೆ ಹೋಗುವ ಪ್ಲಾನ್ ಮಾಡಿದ್ರಾ ಮುನಿರತ್ನ?
ಅಸಲಿಗೆ ಮುನಿರತ್ನ ಅರೆಸ್ಟ್ ಆಗ್ತೀನಿ ಅನ್ನೋ ವಿಷಯ ತಿಳಿದ ಕೂಡಲೇ ಕೋಲಾರ ಮಾರ್ಗವಾಗಿ ಆಂಧ್ರ ಪ್ರದೇಶದ ಚಿತ್ತೂರಿಗೆ ತೆರಳುವ ಪ್ಲಾನ್ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಇನ್ನು, ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತಿರೋ ಮುನಿರತ್ನ ಕೈಯಲ್ಲಿರೋ ಮೊಬೈಲ್ ಸ್ಫೋಟಕ ಸುಳಿವು ನೀಡುತ್ತಿದೆ. ಬೇಸಿಕ್ ಮೊಬೈಲ್ ಖರೀದಿಸಿದ್ದ ಮುನಿರತ್ನ ಹೊಸ ನಂಬರ್ ಉಪಯೋಗಿಸಿ ಪರಾರಿಯಾಗ್ತಿದ್ದರು ಎನ್ನುವ ಆರೋಪವಿದೆ. 2 ಬೇಸಿಕ್ ಮೊಬೈಲ್ ಪಡೆದು ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೊರಟಿದ್ದರು. ಪೊಲೀಸರಿಗೆ ಲೊಕೇಶನ್ ಸಿಗಬಾರದು ಅಂತ ಬೇಸಿಕ್ ಮೊಬೈಲ್ ಬಳಕೆ ಮಾಡಿ ಎಸ್ಕೇಪ್ ಆಗಲು ಮುನಿರತ್ನ ಪ್ರಯತ್ನಿಸಿದ್ದು, ಈಗ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಅಷ್ಟಕ್ಕೂ ಮುನಿರತ್ನ ಬಂಧನಕ್ಕೆ ಕಾರಣ ಏನು ಗೊತ್ತಾ? ಒಂದಲ್ಲ, ಎರಡು ಕಾರಣಗಳಿವೆ.
₹30 ಲಕ್ಷ ಲಂಚದ ಬೇಡಿಕೆ, ಜಾತಿ ನಿಂದನೆ ಆರೋಪ!
ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ, ಮಹಿಳೆಯರ ವಿರುದ್ದ ಅಶ್ಲೀಲ ಭಾಷೆ ಬಳಕೆ ಸಂಬಂಧದ ಆರೋಪದಡಿ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. 2 ಕೇಸ್ಗಳು ಇದೀಗ ಮುನಿರತ್ನ ರಾಜಕೀಯ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ. ಅಷ್ಟಕ್ಕೂ ಯಾವುದು ಆ 2 ಕೇಸ್ ಅಂತೀರಾ?. ಒಂದು ಗುತ್ತಿಗೆದಾರ ಚೆಲುವರಾಜುಗೆ ಬೆದರಿಕೆ ಹಣ ವಸೂಲಿ ಕೇಸ್. ಎರಡನೇ ಎಫ್‌ಐಆರ್ ವೇಲು ನಾಯ್ಕರ್ ದೂರಿನ್ವಯ ಅಟ್ರಾಸಿಟಿ ಕೇಸ್ ದಾಖಲು ಮಾಡಲಾಗಿದೆ. ಮೊದಲ ಎಫ್‌ಐಆರ್ ವೈಯಾಲಿಕಾವಲ್ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಎರಡನೇ ಎಫ್ ಐಆರ್ ಅಟ್ರಾಸಿಟಿ ಕೇಸ್ ಶೇಷಾದ್ರಿಪುರಂ ಎಸಿಪಿಗೆ ತನಿಖೆಯ ಹೊಣೆ ನೀಡಲಾಗಿದೆ.
ಇದನ್ನೂ ಓದಿ: FIR ದಾಖಲು ಆಗುತ್ತಿದ್ದಂತೆ ಆಂಧ್ರಕ್ಕೆ ತೆರಳುತ್ತಿದ್ದ ಮುನಿರತ್ನ.. ಶಾಸಕ ಅರೆಸ್ಟ್ ಆಗಿದ್ದು ಎಲ್ಲಿ?
ಮುನಿರತ್ನ ಮೇಲೆ ಇದಿದ್ದು ಎಂಥಾ ಆರೋಪ?
ಪ್ರಬಲ ಶಾಸಕ ಮುನಿರತ್ನ ಅರೆಸ್ಟ್ ಅವರಿಗೆಷ್ಟು ಡ್ಯಾಮೇಜ್ ಮಾಡ್ತಿದ್ಯೋ ಅದೇ ರೀತಿ ಮಾಜಿ ಸಚಿವನ ಬಂಧನಕ್ಕೆ ಕಾರಣವಾದ ಗುತ್ತಿಗೆದಾರನ ಬಗ್ಗೆ ಹೇಳಲೇಬೇಕು. ಬಿಬಿಎಂಪಿ ಗುತ್ತಿಗೆದಾರರಾಗಿರೋ ಚೆಲುವರಾಜು ಪರ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಎಂಬವರು ನೀಡಿರೋ ದೂರು. ಆ ದೂರಿನ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ ಒಂದು ಕೇಸ್, ಹಾಗೇ ಜೀವ ಬೆದರಿಕೆ ಪ್ರಕರಣದಲ್ಲಿ ಮತ್ತೊಂದು ಕೇಸ್ ದಾಖಲಾಗಿತ್ತು. ಅದ್ರಲ್ಲಿ ಶಾಸಕ ಮುನಿರತ್ನ ಎ2, ಅವರ ಆಪ್ತ ಸಹಾಯಕ ವಿ ಜಿ ಕುಮರ್ ಎ2, ಸೆಕ್ಯೂರಿಟಿ ಅಭಿಷೇಕ್ A-3, ಮುನಿರತ್ನ ಆಪ್ತರಾಗಿರೋ ವಸಂತ್ ಕುಮಾರ್ ಎ4 ಆಗಿದ್ದಾರೆ. ಅಷ್ಟಕ್ಕೂ ಮುನಿರತ್ನ ಅಂಡ್ ಟೀಮ್ ಮೇಲೆ ಯಾವ ಯಾವ ಸೆಕ್ಷನ್ ಹಾಕಿದ್ದಾರೆ ಅನ್ನೋದ್ ಇಲ್ಲಿದೆ ನೋಡಿ.
ಯಾವ ಯಾವ ಸೆಕ್ಷನ್?
ಮಾಗಡಿ ತಾಲೂಕಿನ ಒಂದು ಹಳ್ಳಿಯವರಾದ ಚೆಲುವರಾಜು ನಂತರ ಲಾರಿ ಕ್ಲೀನರ್ ಆಗಿ ತಮ್ಮ ಜೀವನ ಶುರುಮಾಡ್ತಾರೆ. ಅಲ್ಲಿಂದ ಲಾರಿ ಚಾಲಕರಾಗ್ತಾರೆ. ಹಾಗೇ ಅಧಿಕಾರಿಗಳ ಸಂಪರ್ಕ ಪಡೆದು ಬಿಬಿಎಂಪಿಯಲ್ಲಿ ಗುತ್ತಿಗೆದಾರರಾಗ್ತಾರೆ. ಆರ್‌ಆರ್‌ನಗರ ವ್ಯಾಪ್ತಿಯಲ್ಲಿ ಚೆಲುವರಾಜು ಗುತ್ತಿಗೆದಾರರಾಗಿ ಕೆಲ್ಸ ಮಾಡ್ತಿರ್ತಾರೆ. ಇಂತಹ ಚೆಲುವರಾಜು ಬಳಿ ಮುನಿರತ್ನ ಮತ್ತು ಅವ್ರ ಆಪ್ತರು ಹಣಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋ ಆರೋಪವಿದೆ.
20 ಲಕ್ಷ ಕೊಟ್ರಂತೆ ಮತ್ತೆ 36 ಲಕ್ಷ ಕೇಳಿದರೆಂಬ ಆರೋಪ!
ನಿಜಕ್ಕೂ ಮುನಿರತ್ನ ಜಾತಿ ನಿಂದನೆ ಮಾಡಿದ್ದಾರೋ? ಇಲ್ಲವೇ ಸುಳ್ಳು ಆರೋಪದ ಕೇಸಾ? ಅನ್ನೋದ್ ಸದ್ಯಕ್ಕೆ ಗೊತ್ತಿಲ್ಲ. ಆದ್ರೆ, ಮುನಿರತ್ನ ಅರೆಸ್ಟ್ ಆಗೋದಕ್ಕೂ ಒಂದ್ ದಿನದ ಮುನ್ನ ಚೆಲುವರಾಜು ಸ್ಫೋಟಕ ಆರೋಪಗಳನ್ನು ಮಾಡಿದ್ರು. ಅದೇನ್ ಅಂದ್ರೆ, ಶಾಸಕರು ಆರಂಭದಲ್ಲಿ ತಮ್ಮ ಗನ್‌ಮ್ಯಾನ್ ಮೂಲಕ ಕರೆಯಿಸ್ಕೊಂಡ್ ಹಣಕ್ಕೆ ಬೇಡಿಕೆ ಇಟ್ಟಿದ್ರು. ತಾನು 20 ಲಕ್ಷ ಕೊಡಲು ಒಪ್ಪಿಕೊಂಡ್ ಮನೆಯಲ್ಲಿರೋ ಚಿನ್ನವನ್ನೆಲ್ಲ ಮಾರಿ ಕೊಟ್ಟಿದ್ದೇನೆ ಅಂತಾ ಹೇಳ್ತಾರೆ. ಹಾಗೇ.. ಶಾಸಕ ಮುನಿರತ್ನ ಆಪ್ತರಿಂದ ಪುನಃ ಪುನಃ ಫೋನ್ ಕರೆಗಳು ಶುರುವಾಗ್ತಾವೆ. ಒಂದು ದಿನ 36 ಲಕ್ಷಕ್ಕೆ ಬೇಡಿಕೆ ಇಡಲಾಗುತ್ತೆ. ಆದ್ರೆ, ತಾನು 15 ಲಕ್ಷ ಕೊಡುವುದಾಗಿ ಒಪ್ಪಿಕೊಳ್ಳುತ್ತೇನೆ. ಬಟ್, ಅದನ್ನು ಕೊಡಲು ತನ್ನಿಂದ ಸಾಧ್ಯವಾಗೋದಿಲ್ಲ. ಹೀಗಾಗಿಯೇ ತನಗೆ ಶಾಸಕರು ಮತ್ತು ಅವರ ಆಪ್ತ ಬಳಕ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಅನ್ನೋ ಸ್ಫೋಟಕ ಆರೋಪವನ್ನು ಚೆಲವರಾಜು ಮಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸೇಡಿನ ರಾಜಕೀಯ..?
ಹಾಗೇ ಮುನಿರತ್ನ ಮತ್ತು ಅವರ ಆಪ್ತ ಬಳದ ವಿರುದ್ಧ ಇನ್ನೂ ಒಂದ್ ಗಂಭೀರ ಆರೋಪ ಮಾಡಿದ್ದಾರೆ. ಅದೇನ್ ಅಂದ್ರೆ, ಚಿತ್ರದುರ್ಗದ ರೇಣುಕಾಸ್ವಾಮಿಗೆ ಆದಂತೆ ನಿನಗೂ ಆಗುತ್ತೆ ಅನ್ನೋ ಬೆದರಿಕೆ ಹಾಕಿದ್ದರಂತೆ. ನಟ ದರ್ಶನ್ ಇಂದು ರೇಣುಕಾಸ್ವಾಮಿಯ ಭೀಭತ್ಸ ಹತ್ಯೆಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಅದೆಷ್ಟು ಕ್ರೌರ್ಯ ಮೆರೆದಿದೆ ಅನ್ನೋದ್ ಇಡೀ ದೇಶಕ್ಕೆ ಗೊತ್ತು. ಸೇಮ್ ಅದೇ ರೀತಿಯಲ್ಲಿ ಗತಿ ಕಾಣಿಸೋದಾಗಿ ಬೆದರಿಕೆ ಹಾಕಿದ್ದರಂತೆ ಮುನಿರತ್ನ ಕಡೆಯವ್ರು. ಇದನ್ನು ಚೆಲವರಾಜು ಅವರೇ ಹೇಳ್ಕೊಂಡಿದ್ದಾರೆ. ಹಾಗೇ ಚಲುವರಾಜು ತಮ್ಮ ಮೇಲಿನ ಆರೋಪಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರನ್ನು ಭೇಟಿ ಮಾಡಿ ದೂರಿನ ಬಗ್ಗೆ ತಿಳಿಸಿದ್ರು.
ಚೆಲುವರಾಜು ಆರೋಪ ಮಾಡಿದ್ದಾರೆ, ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ದೂರು ಕೊಟ್ಟಿದ್ದಾರೆ. ಶಾಸಕ ಮುನಿರತ್ನ ಅರೆಸ್ಟ್ ಆಗಿದ್ದಾರೆ. ಬಟ್, ಇಲ್ಲಿ ಇನ್ನೂ ಸ್ಫೋಟಕ ವಿಷ್ಯಗಳಿವೆ. ರಾಜ್ಯ ರಾಜಕೀಯದಲ್ಲಿ ಸೇಡಿನ ರಾಜಕೀಯಕ್ಕೆ ಶ್ರೀಕಾರ ಹಾಕಲಾಯ್ತಾ? ಅನ್ನೋ ಪಶ್ನೆಯೂ ಉದ್ಭವಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: ಕೋಟಿ ಕೋಟಿ ದುಡ್ಡಿನ ಒಡೆಯ MLA ಮುನಿರತ್ನ.. ಕೇವಲ 20 ಲಕ್ಷ ರೂಪಾಯಿ ಲಂಚಕ್ಕೆ ಕೈ ಚಾಚಿದ್ರಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ