newsfirstkannada.com

ಬಾರೋ, ಬಾರೋ ಮಳೆರಾಯ.. ಬಿಸಿಲ ಬೇಗೆಯಲ್ಲಿ ಬೆಂದ ಬೆಂಗಳೂರಿಗೆ ಕೊನೆಗೂ ಕೃಪೆ ತೋರಿದ ವರುಣ

Share :

Published May 2, 2024 at 12:30pm

  ಕೊನೆಗೂ ರಾಜಧಾನಿ ಜನರಿಗೆ ಹವಮಾನ ಇಲಾಖೆ ಗುಡ್​ನ್ಯೂಸ್​

  ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟ ಹವಮಾನ ಇಲಾಖೆ

  ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರಿಗೆ ಈಗ ಬಿರು ಬಿಸಿಲು

ಅಬ್ಬಾ.. ಸಾಕಪ್ಪಾ ಸಾಕು ಎಂಥಾ ಬಿಸಿಲು.. ನೆತ್ತಿ ಸುಡುವ ಬಿಸಿಲ ಬೇಗೆಯಲ್ಲಿ ಬೆಂದ ಜನರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿರು ಬೇಸಿಗೆಯ ಉಷ್ಣಾಂಶ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಪೂರ್ವ ಮುಂಗಾರು ಮಳೆಯ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ ನೀಡಿದೆ. ದಾಖಲೆಯ ಬಿಸಿಲಿನ ವಾತಾವರಣಕ್ಕೆ ಸುಸ್ತಾಗಿದ್ದ ಮಂದಿ ಖುಷಿ ಪಡುವ ಸುದ್ದಿ ಬಂದಿದೆ.

ಕರ್ನಾಟಕ ರಾಜ್ಯದ ಹವಾಮಾನ ಮುನ್ಸೂಚನೆಯ ಬಗ್ಗೆ ಹವಾಮಾನ ಇಲಾಖೆ ತಜ್ಞರಾದ ಸಿ.ಎಸ್ ಪಾಟೀಲ್ ಅವರು ನ್ಯೂಸ್‌ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಇವತ್ತು ರಾಜ್ಯದಲ್ಲಿ ತಾಪಮಾನ ಏರಿಕೆ ಮುಂದುವರಿದಿದೆ. ಕಲಬುರ್ಗಿಯಲ್ಲಿ ಇಂದು 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ವಿಜಯನಗರ, ಚಿತ್ರದುರ್ಗ ಈಶಾನ್ಯ ಭಾಗಗಳಲ್ಲಿ ಉಷ್ಣ ಅಲೆಗಳು ಮುಂದುವರೆಯುವ ಹೆಚ್ಚಿನ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನಗಳವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: ಬೆಂಗಳೂರಿಗರೇ.. ಹವಾಮಾನ ಇಲಾಖೆಯಿಂದ ಗುಡ್​ನ್ಯೂಸ್.. ಅದೇನು ಗೊತ್ತಾ? 

ಹೊರಾಂಗಣದಲ್ಲಿ ಕೆಲಸ ಮಾಡುವ ಕೆಲಸಗಾರರು ಶಾಖದ ಅಲೆಗಳ ಪ್ರತಿಕೂಲ ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದು, ಆಗಾಗ್ಗೆ ನೆರಳಿನಲ್ಲಿ ವಿರಾಮಗಳನ್ನು ತೆಗೆದುಕೊಳ್ಳುವುದು ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅವಶ್ಯವಾಗಿದೆ.

ಬೆಂಗಳೂರಲ್ಲಿ ಮಳೆ ಯಾವಾಗ?
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಗರಿಷ್ಟ ಉಷ್ಣಾಂಶ 38 ಡಿಗ್ರಿ ಸೆಂಟಿಗ್ರೇಡ್‌, ಕನಿಷ್ಟ 24 ಡಿಗ್ರಿ ಸೆಂಟಿಗ್ರೇಡ್‌ ಇರುವ ಸಾಧ್ಯತೆ ಇದೆ. ಅಂದ್ರೆ ಇವತ್ತಿನಿಂದ 4 ದಿನಗಳನ್ನು ಕಳೆದರೆ ಬೆಂಗಳೂರಿನ ಮಳೆರಾಯನ ಎಂಟ್ರಿ ಆಗಲಿದೆ. ಮೇ 6 – 7ರಿಂದ ಬೆಂಗಳೂರಿನ ಅಲ್ಲಲ್ಲಿ ಹೆಚ್ಚಿನ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಸಿಕ್ಕಿದೆ.

ಕೆಲವು ದಿನಗಳಿಂದ ಸಿಲಿಕಾನ್ ಸಿಟಿ ಜನ ರಣ ಬಿಸಿಲಿನ ಝಳಕ್ಕೆ ಬೆವತು ಬೆಂದು ಹೋಗಿದ್ದಾರೆ. ಈ ಮಧ್ಯೆ ರಾಜಧಾನಿ ಜನರಿಗೆ ಹವಮಾನ ಇಲಾಖೆ ಗುಡ್​ನ್ಯೂಸ್​ ಕೊಟ್ಟಿದೆ. ಇನ್ನು 4 ದಿನಗಳು ಕಳೆದರೆ ಬೆಂಗಳೂರಲ್ಲಿ ಭಾರಿ ಮಳೆಯಾಗಲಿದೆ ಎಂದು ಮಾಹಿತಿ ಕೊಟ್ಟಿದೆ. ಮುಂದಿನ 24 ಗಂಟೆಯ ಕಾಲ 37 ಡಿಗ್ರಿ ಉಷ್ಣಾಂಶವಿದ್ದು, ಈ ವಾರ ಬೆಂಗಳೂರಲ್ಲಿ ಬಿಸಿಗಾಳಿ ಮುಂದುವರಿಯಲಿದೆ. ಮೇ 6ರ ಬಳಿಕ ಬೆಂಗಳೂರು ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: ‘ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ’- BY ವಿಜಯೇಂದ್ರ ಕೆಂಡಾಮಂಡಲ 

ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಸದ್ಯ ಬಿಸಿಲು, ರಣ ಸೆಕೆಯಿಂದ ಹೈರಾಣಾಗಿರುವ ಜನ ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. ಸದ್ಯ ಇನ್ನೋಂದು ವಾರದಲ್ಲಿ ವರುಣನ ದರ್ಶನವಾಗಲಿದ್ದು, ಈ ಸುದ್ದಿ ಕೇಳಿ ಬೆಂದಕಾಳೂರು ಮಂದಿ ಫುಲ್ ಖುಷ್ ಆಗಿದ್ದಾರೆ. ಬೆಳಗಾವಿ, ಧಾರವಾಡ, ದಾವಣಗೆರೆ, ಹಾವೇರಿ ಮತ್ತು ಗದಗದಲ್ಲೂ ಮಳೆ ಬೀಳಲಿದೆ. ಜೊತೆಗೆ ಕಳೆದ ತಿಂಗಳುಗಿಂತ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

25 ಜಿಲ್ಲೆಗಳಲ್ಲಿ ಮೇ 4ರವರೆಗೂ ರಣ ಬಿಸಿಲು!
ಪ್ರತಿಬಾರಿಗಿಂತಲೂ ಈ ಬಾರಿ ಬಿಸಿಲ ಪ್ರಮಾಣ ಹೆಚ್ಚಾಗಿದ್ದು, ಇನ್ನೂ ನಾಲ್ಕೈದು ದಿನ ಉಷ್ಣ ಅಲೆಯಿಂದ ತತ್ತರಿಸಬೇಕಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ,ಗದಗ, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ರಾಯಚೂರು, ಕಲಬುರಗಿ ಸೇರಿದಂತೆ ರಾಜ್ಯದ ಒಟ್ಟು 25 ಜಿಲ್ಲೆಗಳಲ್ಲಿ ಮೇ 4 ರವರೆಗೂ ಹೀಟ್‌ವೇವ್ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಮೇ 7 ರಿಂದ 15ರವರೆಗೆ: ಮೈಸೂರು, ಹಾವೇರಿ, ಮೈಸೂರು, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜಮಗರ, ತುಮಕೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ, ಉಡುಪಿ ಘಾಟ್​ಗಳಲ್ಲಿ ಭರ್ಜರಿ ಮಳೆಯಾಗಲಿದೆ.

ಬೆಳಗಾವಿ, ಧಾರವಾಡ, ದಾವಣಗೆರೆ, ಹಾವೇರಿ ಮತ್ತು ಗದಗದಲ್ಲೂ ಅಲ್ಲಲ್ಲಿ ಮಳೆ ಬೀಳಲಿದೆ. ಜೊತೆಗೆ ಕಳೆದ ತಿಂಗಳುಗಿಂತ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾರೋ, ಬಾರೋ ಮಳೆರಾಯ.. ಬಿಸಿಲ ಬೇಗೆಯಲ್ಲಿ ಬೆಂದ ಬೆಂಗಳೂರಿಗೆ ಕೊನೆಗೂ ಕೃಪೆ ತೋರಿದ ವರುಣ

https://newsfirstlive.com/wp-content/uploads/2023/11/BNG_RAIN-4.jpg

Load More