newsfirstkannada.com

ಧಾರಾಕಾರ ಮಳೆಗೆ ಸಿಲಿಕಾನ್​ ಸಿಟಿಯಲ್ಲಿ ಪ್ರಾಬ್ಲಮ್ಸ್​.. ನೆಲಕ್ಕೆ ಉರುಳಿದ 118 ಮರಗಳು; ಇಲ್ಲಿ ಏನೇನಾಗಿದೆ ಗೊತ್ತಾ?

Share :

Published June 2, 2024 at 10:47pm

Update June 2, 2024 at 10:50pm

    ಮರ, ಮರದ ಕೊಂಬೆಗಳು ಮುರಿದು ಬಿದ್ದಿವೆ ಎಂದು 250 ಕರೆಗಳು

    ವೋಕ್ಸ್ ವ್ಯಾಗನ್ ಕಾರಿನ ಮೇಲೆ ಉರುಳಿ ಬಿದ್ದ ಮರ, ಕಾರು ಜಖಂ

    ಬಿಬಿಎಂಪಿಗೆ ಮರಗಳನ್ನು ತೆರವು ಮಾಡುವುದು ಬಿಗ್ ಚಾಲೆಂಜ್

ಬೆಂಗಳೂರು: ಉದ್ಯಾನನಗರಿಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ನಗರದ ವಿವಿಧೆಡೆ ಬರೋಬ್ಬರಿ 118 ಮರಗಳು ನೆಲಕ್ಕೆ ಉರುಳಿವೆ. ಈ ಪೈಕಿ 48 ಕಡೆಗಳಲ್ಲಿ ಧರೆಗೆ ಉರುಳಿದ ಮರಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ನಗರದಲ್ಲಿ ಮಳೆಯ ಅವಾಂತರ ಹಲವು ಸಮಸ್ಯೆಗಳನ್ನು ತಂದೊಡ್ಡಿದ್ದು ಕೆ.ಜಿ ರಸ್ತೆಯ ಪೋತೀಸ್​ ಮಾಲ್​ ಮುಂಭಾಗದಲ್ಲಿರುವ ಬೃಹತ್ ಮರವೊಂದು ಧರೆಗೆ ಉರುಳಿದೆ. ಮರ ಸ್ವಲ್ಪ ಜೋರಾಗಿ ಬಿದ್ದಿದ್ದರಿಂದ ವಾಹನಗಳು ಜಖಂಗೊಂಡಿವೆ. ಅಲ್ಲದೇ ಕಳೆದ 2 ತಾಸುಗಳಿಂದ ಬಿಬಿಎಂಪಿ ಕಂಟ್ರೋಲ್ ರೂಂಗೆ ಮರ ಹಾಗೂ ಮರದ ಕೊಂಬೆಗಳು ಮುರಿದು ನೆಲಕ್ಕೆ ಬಿದ್ದಿವೆ ಎಂದು ನಗರದ ಬೇರೆ ಬೇರೆ ವಲಯದಿಂದ 250 ಕ್ಕೂ ಹೆಚ್ಚು ಕರೆಗಳು ಬಂದಿವೆ. ಬಸವೇಶ್ವರನಗರದ ಮನೆಯೊಂದರಲ್ಲಿ ವೋಕ್ಸ್ ವ್ಯಾಗನ್ ಪೋಲೋ ಕಾರಿನ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಕಾರೆಲ್ಲ ಫುಲ್​ ಜಖಂ ಆಗಿದೆ.

  • ದಕ್ಷಿಣ ವಲಯದಲ್ಲಿ 40 ಮರಗಳು ನೆಲಕ್ಕೆ ಅಪ್ಪಳಿಸಿವೆ
  • ಆರ್.ಆರ್ ನಗರದಲ್ಲಿ 15 ಮರಗಳು ಧರೆಗೆ ಉರುಳಿವೆ.
  • ಬೊಮ್ಮನಹಳ್ಳಿ ವಲಯದಲ್ಲಿ 10 ಮರ ಬಿದ್ದಿವೆ
  • ಪಶ್ಚಿಮ ವಲಯದಲ್ಲಿ 19 ವೃಕ್ಷಗಳು ಮಳೆಯಿಂದ ಭೂಮಿಗೆ ಬಿದ್ದಿವೆ
  • ಮಹದೇವಪುರ ವಲಯದಲ್ಲಿ 5 ಮರಗಳು ನೆಲಕ್ಕೆ ಬಿದ್ದಿವೆ.
  • ಯಲಹಂಕ ವಲಯದಲ್ಲಿ 12 ಮರಗಳು ಧರೆಗೆ ಉರುಳಿವೆ
  • ಪೂರ್ವ ವಲಯದಲ್ಲಿ 12 ವೃಕ್ಷಗಳು ನೆಲಕ್ಕೆ ಬಿದ್ದಿವೆ
  • ಭಾರೀ ಮಳೆ-ಗಾಳಿಗೆ ದಾಸರಹಳ್ಳಿಯಲ್ಲಿ 5 ಮರಗಳು ಬಿದ್ದಿವೆ

ಇದನ್ನೂ ಓದಿ: T20 World Cup; ಭಾರತ-ಪಾಕ್ ಮ್ಯಾಚ್​ ನೆನಪಿಸಿಕೊಂಡ್ರೆ ನರ್ವಸ್ ಆಗುತ್ತಿದ್ದೇನೆ- ಬಾಬರ್ ಅಜಂ

ಬೆಂಗಳೂರಿನಲ್ಲಿ 118 ಮರ ಬಿದ್ದಿರುವುದನ್ನು ಹೊರತುಪಡಿಸಿ, ನಗರದ ವಿವಿಧೆಡೆ 128 ಕಡೆ ಮರದ ಕೊಂಬೆಗಳು ಮುರಿದು ಧರೆಗುರುಳಿವೆ. ನಗರದಾದ್ಯಂತ ಬಿದ್ದಿರೋ ಮರಗಳನ್ನ ತೆರವುಗೊಳಿಸುವುದು ಬಿಬಿಎಂಪಿ ಹಾಗೂ ಅರಣ್ಯ ವಿಭಾಗದ ಅಧಿಕಾರಿಗಳಿಗೆ ದೊಡ್ಡ ಚಾಲೆಂಜ್ ಆಗಿದೆ. ಒಂದೆಡೆ ಮಳೆ ಮತ್ತೊಂದೆಡೆ‌ ಮರಗಳು ಧರೆಗೆ ಉರುಳುತ್ತಿರೋದ್ರಿಂದ ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ವೀಕೆಂಡ್​ ಮೂಡ್​ನಲ್ಲಿದ್ದ ಜನರಿಗೆ ಫುಲ್ ಶಾಕ್ ಆಗಿದೆ. ಬೆಳಗ್ಗೆಯಿಂದ ಸುಮ್ಮನಿರುವ ವರುಣರಾಯ ಸಂಜೆ ಆಗುತ್ತಲೇ ಸದ್ದಿಲ್ಲದೇ ಎಂಟ್ರಿ ಕೊಡುತ್ತಿದ್ದಾನೆ. ವರುಣನ ಅಬ್ಬರಕ್ಕೆ ನಗರದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆ ತುಂಬಿ ಮಳೆ ನೀರು ಹರಿಯುತ್ತಿದ್ದರಿಂದ ಟ್ರಾಫಿಕ್ ಉಂಟಾಗಿ ಬೈಕ್ ಸವಾರರು, ವಾಹನ ಚಾಲಕರು ತೊಂದರೆಗೆ ಒಳಗಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆಗೆ ಸಿಲಿಕಾನ್​ ಸಿಟಿಯಲ್ಲಿ ಪ್ರಾಬ್ಲಮ್ಸ್​.. ನೆಲಕ್ಕೆ ಉರುಳಿದ 118 ಮರಗಳು; ಇಲ್ಲಿ ಏನೇನಾಗಿದೆ ಗೊತ್ತಾ?

https://newsfirstlive.com/wp-content/uploads/2024/06/BNG_RAIN-4.jpg

Load More