ಬೆಂಗಳೂರಲ್ಲಿ ಸಿಲ್ಲಿ ರೀಸನ್‌ಗೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ; ಕಾರಣವೇನು?

author-image
admin
Updated On
ಬೆಂಗಳೂರಲ್ಲಿ ಸಿಲ್ಲಿ ರೀಸನ್‌ಗೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ; ಕಾರಣವೇನು?
Advertisment
  • ಕ್ಷುಲ್ಲಕ ಕಾರಣಕ್ಕೆ ಬೆಂಗಳೂರು ಕಾಲೇಜು ವಿದ್ಯಾರ್ಥಿನಿ ಸಾವು
  • ಖಾಸಗಿ ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದರು
  • ಸಿಲ್ಲಿ ರೀಸನ್‌ಗೆ ಪ್ರಾಣ ಕಳೆದುಕೊಂಡ ಕಾಲೇಜು ವಿದ್ಯಾರ್ಥಿನಿ

ಬೆಂಗಳೂರು: ಈಗಿನ ಕಾಲದಲ್ಲಿ ಅಪ್ಪ, ಅಮ್ಮ ಬೈದ್ರು ಮಕ್ಕಳಿಗೆ ಅರಗಿಸಿಕೊಳ್ಳೋದು ಕಷ್ಟ. ಹೆತ್ತವರು ಕೋಪದಲ್ಲಿ ಜೋರಾಗಿ ಗದರಿದ್ರೂ ಸೂಕ್ಷ್ಮ ಮನಸಿನ ಮಕ್ಕಳು ಸಹಿಸಿಕೊಳ್ಳುವುದಿಲ್ಲ. ಆ ಕ್ಷಣದ ಕೋಪದಲ್ಲಿ ಬುದ್ಧಿ ಕಳೆದುಕೊಂಡ ಮಕ್ಕಲು ಮನೆಯನ್ನೇ ಬಿಟ್ಟು ಹೋಗುವ ತಪ್ಪು ನಿರ್ಧಾರ ಮಾಡುತ್ತಾರೆ. ವಯಸ್ಸಿಗೆ ಬಂದ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಪೋಷಕರಿಗೆ ಕಷ್ಟವಾಗಿದೆ.

ಇದೇ ರೀತಿ ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಚಾಮರಾಜಪೇಟೆ 3ನೇ ಮೇನ್‌ನ ಮನೆಯೊಂದರಲ್ಲಿ ನಡೆದಿದೆ. 19 ವರ್ಷದ ಶ್ರಾವ್ಯ ಮೃತ ದುರ್ದೈವಿ.

ಇದನ್ನೂ ಓದಿ: ಕಾಲೇಜು 3ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ.. ಪ್ರೇಮಾ ಸಾವಿನ ರಹಸ್ಯ ಬಯಲು; ಅಸಲಿಗೆ ಆಗಿದ್ದೇನು?  

ಶ್ರಾವ್ಯ ಖಾಸಗಿ ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಚೆನ್ನಾಗಿ ಓದಿ ಅಪ್ಪ-ಅಮ್ಮನಿಗೆ ಒಳ್ಳೆ ಹೆಸರು ತಂದುಕೊಡಬೇಕಾದ ಈಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಶ್ರಾವ್ಯ ಪ್ರಾಣ ಬಿಟ್ಟಿರೋದು ದುರಂತಕ್ಕೆ ಸಾಕ್ಷಿಯಾಗಿದೆ.

ಅಮ್ಮ ನಿಂದಿಸಿದ್ದಕ್ಕೆ ಕೋಪಗೊಂಡ ಶ್ರಾವ್ಯ ಮನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಚಾಮರಾಜಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರಾವ್ಯ ಮಾಡಿದ ತಪ್ಪಿಗೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment