newsfirstkannada.com

×

ಕಾಲೇಜು 3ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ.. ಪ್ರೇಮಾ ಸಾವಿನ ರಹಸ್ಯ ಬಯಲು; ಅಸಲಿಗೆ ಆಗಿದ್ದೇನು?

Share :

Published October 18, 2024 at 8:22pm

    ಅಪ್ಪ ಅಮ್ಮನ ಮುದ್ದಿನ ಮಗಳು, ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿನಿ

    ಅದೊಂದು ಮೆಸೇಜ್​ನಿಂದ ಪ್ರೇಮಾ ಸಾವಿಗೆ ಶರಣಾಗೋ ನಿರ್ಧಾರ

    ಬೆಳಗ್ಗೆ ಕಾಲೇಜಿಗೆ ಹೋಗಿ ಬರ್ತಿನಿ ಅಂದಿದ್ದ ಯುವತಿ ಹೆಣವಾಗಿ ವಾಪಸ್!

ಮುದ್ದಾದ ಮೊಗ.. ಚಂದ್ರನಂತಿರುವ ಕಂಗಗಳು.. ಲಂಗ ದಾವಣಿಯಲ್ಲೂ ಚೆಂದ. ಮಾರ್ಡರ್ನ್ ಡ್ರೆಸ್​​ನಲ್ಲೂ ಅಂದ.. ಈಕೆ ಕಣ್ಣುಗಳು ನೋಡ್ತಿದ್ರೆ ಗೊತ್ತಾಗುತ್ತೆ ಬದುಕಿನ ಬಗ್ಗೆ ಅದೆಷ್ಟು ಆಸೆಗಳಿದ್ವು. ಅದೆಷ್ಟು ಕನಸುಗಳಿದ್ವು ಅಂತ. ಆದ್ರೆ ಕಂಡ ಕನಸುಗಳು ಈಡೇರುವ ಮುನ್ನವೇ ಈ ಸುಂದರಿಯ ಬದುಕು ದುರಂತ ಅಂತ್ಯ ಕಂಡಿದೆ.

ಈ ಹುಡುಗಿ ಇನ್ನಿಲ್ಲ ಅನ್ನೋ ಕಹಿ ಸತ್ಯವನ್ನ ಹೇಳೋದಕ್ಕೂ ಕಷ್ಟವಾಗುತ್ತಿದೆ. ಫೋಟೋಗಳಲ್ಲಿ ನಗುವಿನ ಆಭರಣದಲ್ಲಿ ಪಳಪಳನೇ ಹೊಳೆಯುತ್ತಿದ್ದ ಸುಂದರಿ ಸ್ಟ್ರೇಚರ್​ ಮೇಲೆ ಕೆಂಪು ನೆತ್ತರಿ ಮಡುವಲ್ಲಿ ಮಲಗಿರುವ ಈ ಫೋಟೋ ನೋಡ್ತಿದ್ರೆ ಕರುಳು ಚುರಕ್ ಅನ್ನುತ್ತೆ.

ಇದನ್ನೂ ಓದಿ: DJ ಸೌಂಡ್‌ಗೆ ಡ್ಯಾನ್ಸ್‌ ಮಾಡುತ್ತಿದ್ದಾಗ 13 ವರ್ಷದ ಬಾಲಕ ದಾರುಣ ಸಾವು; ಆಗಿದ್ದೇನು?

ಹೊಳೆವ ನಕ್ಷತ್ರದಂದಿರುವ ಈ ಹಾಲ್ಗೆನ್ನೆ ಸುಂದರಿಯ ಹೆಸರು ಪ್ರೇಮಾ ಅಂತ. ಆದ್ರಿವತ್ತು ಈ ಬದುಕಿಗೆ ಈ ಪ್ರೇಮ ಅನ್ನೋ ಪದವೇ ಮುಳುವಾಗಿದೆ. ಚಿತ್ರದುರ್ಗದ ಮೆದೆಹಳ್ಳಿ ನಿವಾಸಿಯಾಗಿರುವ ಪ್ರೇಮಾ ಡಾನ್ ಬಾಸ್ಕೋ ಶಾಲೆಯಲ್ಲಿ ಫಸ್ಟ್ ಇಯರ್ ಬಿಎಸ್​ಸಿ ಓದುತ್ತಿದ್ದಳು. ಅಪ್ಪ ಅಮ್ಮನಿಗೂ ಪ್ರೇಮಾ ಮುದ್ದಾದ ಮಗಳು. ಮಗಳೆಂದ್ರೆ ಅವರಿಗೂ ಪಂಚ ಪ್ರಾಣ. ಆದ್ರೆ ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಹೋಗಿ ಬರ್ತಿನಿ ಅಂದಿದ್ದ ಪ್ರೇಮಾ ವಾಪಸ್ ಹೆಣವಾಗಿ ಮನೆ ಸೇರಿದ್ದಾಳೆ.

ಎಂದಿನಂತೆ ಪ್ರೇಮಾ ಕಾಲೇಜಿಗೆ ಬಂದಿದ್ದಳು. ಸುಮಾರು 8.45 ಸಮಯ ಕಾಲೇಜಿಗೆ ಹೋದವಳು ಫ್ರೆಂಡ್ಸ್ ಜೊತೆ ಕೂತು ಮಾತನಾಡಿದ್ದಾಳೆ. ಇದಾದ ಕೆಲವೇ ಹೊತ್ತು 9 ಗಂಟೆ ಹೊತ್ತಿಗೆ ಪ್ರೇಮಾ ಮೂರನೇ ಮಹಡಿಗೆ ಬಂದವಳೇ ಕಾರಿಡಾರ್ ಕೈಪಿಡಿ ಗೋಡೇ ಹತ್ತಿ ಅಲ್ಲಿಂದ ಸೀದಾ ಜಂಪ್ ಮಾಡಿಯೇ ಬಿಟ್ಟಿದ್ದಾಳೆ. ತಕ್ಷಣವೇ ಪ್ರೇಮಾಳನ್ನ ಕಾಲೇಜು ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದಾರೆ. ದುರಂತ ಏನಂದ್ರೆ ಚಿಕಿತ್ಸೆ ಫಲಕಾರಿಯಾಗದೇ ಪ್ರೇಮಾ ಸಾವನ್ನಪ್ಪಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ ಪ್ರೇಮಾಳನ್ನ ಆಸ್ಪತ್ರೆಗೆ ದಾಖಲಿಸಿದ್ರೂ ಫಲ ಸಿಕ್ಕಿಲ್ಲ. ತೀವ್ರ ರಕ್ತಸ್ರಾವ ಆದ ಪರಿಣಾಮ ಪ್ರೇಮಾ ಉಸಿರು ನಿಂತು ಹೋಗಿದೆ. ನೂರಾರು ಕನಸು ಕಂಡವಳ ಜೀವನದ ಯಾತ್ರೆ ಅರ್ಧಕ್ಕೆ ಮುಗಿದು ಹೋಗಿದೆ.

ಇದನ್ನೂ ಓದಿ: VIDEO: ವೇದಿಕೆ ಮೇಲೆ ಮುಗ್ಗರಿಸಿ ಬಿದ್ದ ಬಿಗ್​ಬಾಸ್​ ಪ್ರಿಯಾಂಕಾ ಶಿವಣ್ಣ; ಆಗಿದ್ದೇನು? 

ಅದೊಂದು ಮೆಸೇಜ್​ನಿಂದ ಪ್ರೇಮಾ ಸಾವಿಗೆ ಶರಣು
ಪ್ರೇಮಾ ಜಸ್ಟ್ 18 ವರ್ಷದ ಹುಡುಗಿ.. ಅಪ್ಪ ಅಮ್ಮನ ಮುದ್ದಿನ ಮಗಳು. ತಾನಾಯ್ತೂ ತನ್ನ ಕಾಲೇಜ್ ಆಯ್ತು ಅಂತ ಇದ್ದವಳು ಪ್ರೇಮಾ. ಆದ್ರೆ ಈ ವೇಳೆ ಪ್ರೇಮಾಗೆ ತರುಣ್ ಅನ್ನೋ ಹುಡುಗ ಪ್ರೇಮಾಳನ್ನ ಪ್ರೀತಿ ಮಾಡ್ತಿದ್ದ. ಆದ್ರೆ ಪ್ರೇಮಾಗೆ ಇದೆಲ್ಲ ಇಷ್ಟ ಇರಲಿಲ್ಲ. ಹೀಗಾಗಿ ತರುಣ್​​ನನ್ನ ಅವಾಯ್ಡ್ ಮಾಡಿದ್ದಳು. ಆದ್ರೂ ತರುಣ್ ಪೀಡಿಸೋದು ಬಿಟ್ಟಿರಲಿಲ್ಲವಂತೆ. ಗುರುವಾರ ಸಂಜೆ ಕೂಡ ತರುಣ್ ಪ್ರೇಮಾಗೆ ಪ್ರೀತಿ ವಿಚಾರವಾಗಿ ಮೆಸೇಜ್​ ಮಾಡಿದ್ದಾನೆ. ತನ್ನ ಪ್ರೀತಿ ಮಾಡುವಂತೆ ಕೇಳಿದ್ದಾನೆ.

ತರುಣ್‌-ಪ್ರೇಮಾ Whatsapp!

ತರುಣ್​: ಹಾಯ್
ಪ್ರೇಮಾ: ಹೇಳು.. ಏನ್ ಬೇಕು ನಿನಗೆ
ತರುಣ್: ನಾನು ನಿನ್ ಹತ್ರ ಸ್ವಲ್ಪ ಮಾತಾಡಬೇಕು
ಪ್ರೇಮಾ: ಹಾ ಹೇಳು
ತರುಣ್: ಹಿಂಗ್ ಕೇಳ್ತೀನಿ ಅಂತ ಬೇಜಾರ್ ಆಗ್ಬೇಡ.. ನೀನು ಯಾರಿಗಾದ್ರು ಲವ್ ಮಾಡ್ತಿದ್ಯಾ?
ಪ್ರೇಮಾ: ಇಲ್ಲ ಯಾಕೆ.. ನಿನಗೆ ಏನ್ ಬೇಕಿತ್ತು?
ತರುಣ್: ತಡಿ ನಾನ್ ಮನೆಗೆ ಹೋಗ್ ಮೆಸೇಜ್ ಮಾಡ್ತೀನಿ
ತರುಣ್: ಹೋಯ್ ಒಂದ್ ಸಾರಿ ನನ್ನ ಮಾತ್ ಕೇಳ್ತೀಯಾ ಪ್ಲೀಸ್​
ಪ್ರೇಮಾ: ಸರಿ ಹೇಳು
ತರುಣ್: ನಾನ್ ಹೊರಗ್ ಇದೀನಿ ತಡಿ ಮನೆಗ್ ಹೋಗಿ ಮೆಸೇಜ್ ಮಾಡ್ತೀನಿ
ಪ್ರೇಮಾ: ನಗ್ಯಾಕೆ ಬೇಕು ಹೇಳು ನಾನು ನಿನಗೆ ಎಲ್ಲ ಹೇಳಿದೀನಿ
ತರುಣ್: ನಿನಗೆ ಅನಿಸಿದ್ದು ನಿನ್ ಹೇಳ್ಬಿಟ್ಟೆ.. ನಾನ್ ಹೇಳೋದು ಬೇಡ್ವಾ
ಪ್ರೇಮಾ: ಓಕೆ
ಪ್ರೇಮಾ: ನಿನಗೆ ಟೈಮ್ ಇರಬಹುದು.. ಬಟ್ ನಾನ್ ಓದ್ಬೇಕು
ತರುಣ್: ತಡಿ ನಾನ್ ಮನೆಗೆ ಹೋಗಿ ಮಸೇಜ್ ಹಾಕ್ತೀನಿ
ಪ್ರೇಮಾ: ನನಗೆ ಯಾರು ಇಷ್ಟ ಇಲ್ಲ ಅಂದ್ರೆ ಇಷ್ಟ ಇಲ್ಲ. ಇಟ್ಸ್ ಫಿನೀಶ್​
ಪ್ರೇಮಾ: ಐ ಲೈಕ್ ಫ್ರೆಂಡ್ಸ್​​ ಆ್ಯಂಡ್ ಫ್ಯಾಮಿಲಿ ಅಷ್ಟೇ
ಇವರನ್ನ ಬಿಟ್ಟು ಬೇರೆ ಯಾರನ್ನ ನಾನು ಇಷ್ಟ ಪಡಲ್ಲ
ಇದನ್ನ ಕ್ಲಾರಿಫೈ ಮಾಡೋಕೆ ನಿನಗೆ ಮೆಸೆಜ್ ಮಾಡಿದ್ದು
ನಿನಗೆ ಇದರ ಬಗ್ಗೆ ಮಿಸ್​ ಅಂಡರ್​​ಸ್ಟ್ಯಾಡಿಂಗ್ ಇದ್ರೆ ಬಿಟ್ಬಿಡು

ನೋಡಿದ್ರಲ್ಲ ಈ ಮೆಸೆಜ್​ಗಳೇ ಪ್ರೇಮಾ ಮನಸ್ಸನ್ನ ಕೆಡಿಸಿತ್ತು ಎನ್ನಲಾಗಿದೆ. ತರುಣ್ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ. ಆದ್ರೆ ಪ್ರೇಮಾ ನನಗೆ ಅಪ್ಪ ಅಮ್ಮ ಅಷ್ಟೇ ಮುಖ್ಯ ಅಂತ ಹೇಳಿ ತರುಣ್​ ಪ್ರೀತಿಯನ್ನ ನಿರಾಕರಿಸಿದ್ದಾಳೆ. ಆಗ ತರುಣ್ ಚಾಕು ಫೋಟೋ ಕಳಿಸಿ ಪ್ರೇಮಾಗೆ ಬೆದರಿಸಿದ್ದನಂತೆ. ನೀನು ಪ್ರೀತಿ ಮಾಡ್ದಿದ್ರೆ ನಿಮ್ಮ ಅಪ್ಪನನ್ನ ಕೊಲ್ತೀನಿ ಅಂತ ಬ್ಲ್ಯಾಕ್ ಮೇಲ್ ಕೂಡ ಮಾಡಿದ್ದಾನಂತೆ. ಇದೇ ವಿಚಾರಕ್ಕೆ ಪ್ರೇಮಾ ಸಾವಿಗೆ ಶರಣಾಗಿದ್ದಾಳೆ ಅನ್ನೋದು ಪೋಷಕರ ಆರೋಪವಾಗಿದೆ.

ಇದನ್ನೂ ಓದಿ: ಅಮೂಲ್ಯ ಅಣ್ಣ, ನಿರ್ದೇಶಕ ದೀಪಕ್‌ ಅರಸ್‌ಗೆ ಸ್ಯಾಂಡಲ್‌ವುಡ್ ನಟರಿಂದ ಅಂತಿಮ ನಮನ; ಗಣೇಶ್, ತರುಣ್, ಸೋನಲ್ ಭಾವುಕ! 

ತರುಣ್ ಕಾಟ ಕೊಡ್ತಿದ್ದ ಬಗ್ಗೆ ಪ್ರೇಮಾ ಮನೆಯವರ ಬಳಿಯೂ ಹೇಳಿದ್ದಳಂತೆ. ಅದಕ್ಕೆ ಪ್ರೇಮಾ ಅಪ್ಪ ಕಾಲೇಜಿಗೆ ಬಂದು ಮಾತನಾಡ್ತೀನಿ ಎಂದಿದ್ರಂತೆ. ಏನ್ ಅಂತ ವಿಚಾರಿಸ್ತೀನಿ ಅಂತ ಅಪ್ಪ ಹೇಳಿದ್ರು. ಆದ್ರೆ ಅಪ್ಪ ಕಾಲೇಜಿಗೆ ಬರುವ ಮುಂಚೆಯೇ ಮಗಳ ಸಾವಿನ ಸುದ್ದಿ ಅಪ್ಪನಿಗೆ ಮುಟ್ಟಿ ಬಿಟ್ಟಿತ್ತು. ಮಗಳು ಇನ್ನಿಲ್ಲ ಅನ್ನೋ ಸತ್ಯ ಇಡೀ ಕುಟುಂಬವನ್ನೇ ಕಣ್ಣೀರಿನ ಕಡಲಿನಲ್ಲಿ ಮುಳುಗುವಂತೆ ಮಾಡಿದೆ. ನನ್ನ ಮಗಳು ತುಂಬಾ ಮುಗ್ಧೆ ಅವಳ‌ ಮೇಲೆ‌ ಪ್ರಾಣ ಇಟ್ಟಿದ್ದೆ ಈಗ ಆ ಪ್ರಾಣವೇ ಇಲ್ಲ ಅನ್ನೋ ಪ್ರೇಮಾ ತಂದೆಯ ಗೋಳಾಟ ನಿಜಕ್ಕೂ ಕಣ್ಣೀರು ತರಿಸುತ್ತೆ.

ಇದನ್ನೂ ಓದಿ: ಕಾಲೇಜಿಗೆ ಬಂದು 3ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ; ಕಾರಣವೇನು? 

ಪ್ರೇಮಾ ಇನ್ನೂ ಚಿಕ್ಕ ಹುಡುಗಿ ಪ್ರೀತಿ ಪ್ರೇಮ ರಗಳೆ ಬೇಡ ಅಂತ ದೂರ ಇದ್ದಳು. ಆದ್ರೆ ತರುಣ್ ಮಾತ್ರ ಬೆನ್ನು ಬಿದ್ದು ಕಾಟ ಕೊಟ್ಟಿದ್ದ. ಮನಸ್ಸು ಕೆಡಿಸಿಕೊಂಡಿದ್ದ ಪ್ರೇಮಾ ಸ್ವಲ್ಪ ತಾಳ್ಮೆ ವಹಿಸಬೇಕಿತ್ತು. ಮನಸ್ಸಲ್ಲಿದ್ದ ನೋವನ್ನ ಹೇಳಿಕೊಳ್ಳಬೇಕಿತ್ತು. ಆದ್ರೆ ಬದುಕೇ ಬೇಡ ಅನ್ನೋ ನಿರ್ಧಾರ ಮಾಡಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲೇಜು 3ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ.. ಪ್ರೇಮಾ ಸಾವಿನ ರಹಸ್ಯ ಬಯಲು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/10/Chitradurga-Student-Death-2.jpg

Load More