/newsfirstlive-kannada/media/post_attachments/wp-content/uploads/2024/04/BNG_BBMP.jpg)
ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬೀದಿ ಬದಿ ಹಣ್ಣುಗಳನ್ನು ಕಟ್​ ಮಾಡಿ ಮಾರಾಟ ಮಾಡುವುದಕ್ಕೆ ಬಿಬಿಎಂಪಿ ನಿರ್ಬಂಧ ಮಾಡಿದೆ.
ಒಂದೇ ವಾರದಲ್ಲಿ 8 ಕಾಲರಾ ಪ್ರಕರಣಗಳು ಪತ್ತೆಯಾಗಿದ್ದು 3 ತಿಂಗಳುಗಳಿಂದ ನಗರದಲ್ಲಿ ಒಟ್ಟು 13 ಕೇಸ್​ಗಳು ಪತ್ತೆಯಾದಂತೆ ಆಗಿದೆ. ಹೀಗಾಗಿ ಕಾಲರಾ ಬೇಗ, ಬೇಗ ಹರಡುವ ಸಾಧ್ಯತೆ ಇರುವುದರಿಂದ ಬೀದಿ ಬದಿ ಹಣ್ಣುಗಳನ್ನು ಕಟ್ ಮಾಡಿ ಮಾರುವುದು, ಬೀದಿಯಲ್ಲಿಟ್ಟು ಗಾಡಿಗಳಲ್ಲಿ ಊಟ, ತಿಂಡಿ ಮಾರಾಟವನ್ನು ನಿರ್ದಿಷ್ಟ ಅವಧಿವರೆಗೆ ಬಿಬಿಎಂಪಿ ಅಧಿಕಾರಿಗಳು ಬ್ಯಾನ್ ಮಾಡಿದ್ದಾರೆ. ಅಲ್ಲದೇ ರೆಸ್ಟೋರೆಂಟ್​ ಮತ್ತು ಹೋಟೆಲ್​ಗಳು ಗ್ರಾಹಕರಿಗೆ ಬಿಸಿನೀರು ಕೊಡಬೇಕು ಎಂದು ಹೇಳಿದೆ.
ಇದನ್ನೂ ಓದಿ: ಬೇಸಿಗೆ ಬಿಸಿಯಲ್ಲಿ ಕೊಂಚ ನೆಮ್ಮದಿಗಾಗಿ ಬೆಂಗಳೂರಲ್ಲಿ ಮುದ್ದಾದ ಪ್ರಾಣಿಗಳ ಶೋ.. ರೆಪ್ಟೆಲ್ 6 ತಿಂಗಳು ನಿದ್ದೆ ಮಾಡುತ್ತಾ?
/newsfirstlive-kannada/media/post_attachments/wp-content/uploads/2023/06/bbmp.jpg)
ಇದನ್ನೂ ಓದಿ: ನಿಂತಿದ್ದ ಕಸದ ಲಾರಿಗೆ ಭಯಾನಕವಾಗಿ ಡಿಕ್ಕಿ ಹೊಡೆದ ಕಾರು.. ಸ್ಥಳದಲ್ಲೇ ಟೆಕ್ಕಿ ಸಾವು, ನಾಲ್ವರು ಗಂಭೀರ
ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯು ಕಾಲರಾ ಪ್ರಕರಣಗಳ ನಿರ್ವಹಣೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMRCAI) ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು HSR ಲೇಔಟ್‌ನ ನಿವಾಸಿಯೊಬ್ಬರಿಗೆ ಕಾಲರಾ ಇರುವುದು ದೃಢಪಟ್ಟಿದೆ. ಹಾಸ್ಟೆಲ್​ನಲ್ಲಿ ಕಾಲರಾ ಕಂಡುಬಂದರೆ ಅಲ್ಲಿನ ಅಡುಗೆ ಮನೆಯನ್ನು ನಿರ್ಧಿಷ್ಟ ಅವದಿವರೆಗೆ ಮುಚ್ಚಲಾಗುವುದು ಎಂದು ಹೇಳಿದೆ.
ಕಾಲರಾ ಹರಡುವಿಕೆಯಲ್ಲಿ ನೀರಿನ ಪಾತ್ರ ಪ್ರಮುಖವಾಗಿದೆ. ಸದ್ಯ ಬೇಸಿಗೆ ಇರುವುದರಿಂದ ನೀರಿನ ಸಮಸ್ಯೆ ತಲೆದೂರಿದ್ದು ಹೆಚ್ಚಿನ ಮಟ್ಟದಲ್ಲಿ ನೀರನ್ನು ಸರಬಾರಾಜು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರಿಗೆ ಕಲುಷಿತ ಪೂರೈಕೆ ಆಗುತ್ತಿದೆ. ಹೀಗಾಗಿ ಕಾಲರಾ ಜೊತೆಗೆ ವಾಂತಿ, ಭೇದಿ ಕೂಡ ಹೆಚ್ಚು ಮಾಡುತ್ತಿದೆ ಬಿಬಿಎಂಪಿ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us