newsfirstkannada.com

ನ್ಯೂಸ್​ಫಸ್ಟ್​​ ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ; ಶಿಕ್ಷಕರು ಆಗಬೇಕು ಅನ್ನೋರಿಗೆ ಗುಡ್​ನ್ಯೂಸ್​​

Share :

Published June 2, 2024 at 6:17am

    ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದ ಪಾಲಿಕೆ

    ಶಿಕ್ಷಕರ ನೇಮಕ ಮಾಡಲು ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿದ್ದ BBMP

    ಪಾಲಿಕೆ ಮತ್ತು ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಭಾರೀ ವಿರೋಧ

ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತವಾಗ್ತಿದೆ ಅನ್ನೋ ಚರ್ಚೆ ನಡಿತಿರೋ ಹೊತ್ತಲ್ಲೇ, ಶಿಕ್ಷಣ ಕ್ಷೇತ್ರದ ಗಾಳಿಗಂಧವೇ ಗೊತ್ತಿರದ ಸೆಕ್ಯುರಿಟಿ ಏಜೆನ್ಸಿಗೆ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕದ ಜವಾಬ್ದಾರಿ ಕೊಟ್ಟಿತ್ತು. ಈ ಯಡವಟ್ಟಿನ ಬಗ್ಗೆ ನ್ಯೂಸ್​ಫಸ್ಟ್​ ಕೂಡ ವರದಿ ಮಾಡಿ ಬಿಬಿಎಂಪಿ ನಡೆಯನ್ನ ಪ್ರಶ್ನೆ ಮಾಡಿತ್ತು. ಕೊನೆಗೂ ಎಚ್ಚೆತ್ತ ಪಾಲಿಕೆ ಈಗ ಹೊಸ ಪ್ಲಾನ್​ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಸುಮಾರು 700 ಹೊರಗುತ್ತಿಗೆ ಶಿಕ್ಷಕರನ್ನ ನೇಮಕ ಮಾಡಲು BBMP ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿತ್ತು. ಪಾಲಿಕೆ ಹಾಗೂ ಸರ್ಕಾರದ ಈ ನಡೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ರು. ಈ ಬಗ್ಗೆ ನ್ಯೂಸ್​ಫಸ್ಟ್​​ ವರದಿ ಮಾಡಿ ಧ್ವನಿ ಎತ್ತಿತ್ತು. ಇಷ್ಟೆಲ್ಲ ಬೆಳವಣಿಗೆ ಆದ ಬೆನ್ನಲ್ಲೇ ಅಲರ್ಟ್​ ಆದ ಪಾಲಿಕೆ ಹೊಸ ಪ್ಲಾನ್​ ಮಾಡಿದೆ.

ಇದನ್ನೂ ಓದಿ: Exit Poll: ಮೋದಿಗೆ ಹ್ಯಾಟ್ರಿಕ್ ಗೆಲುವು.. ರಾಹುಲ್‌ ಗಾಂಧಿಗೆ ಎಷ್ಟು ಸೀಟ್ ಗ್ಯಾರಂಟಿ?

ಪರಿಹಾರಕ್ಕೆ ಪಾಲಿಕೆ ಪ್ಲಾನ್

  • ಪಾಲಿಕೆ ಶಾಲೆಗಳಲ್ಲಿ ಸಮಿತಿ ರಚನೆಗೆ BBMP ನಿರ್ದೇಶನ
  • 10ನೇ ತಾರೀಖಿನ ಒಳಗೆ ಸಮಿತಿ ರಚನೆಗೆ ಪಾಲಿಕೆ ನಿರ್ಧಾರ
  • ಎಸ್​​ಡಿಎಂಸಿ, ಸಿಡಿಸಿ ಮೂಲಕ ಆಗಲಿದೆ ಶಿಕ್ಷಕರ ನೇಮಕಾತಿ
  • ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹೆಸರಲ್ಲಿ ಬ್ಯಾಂಕ್​​ ಖಾತೆ
  • ಪ್ರಾಥಮಿಕ ಶಾಲೆಗಳಲ್ಲಿ 24 SDMC, ಪ್ರೌಢ ಶಾಲೆಗಳಲ್ಲಿ 15
  • ಉಳಿದಂತೆ ಪಿಯು ಕಾಲೇಜಿನಲ್ಲಿ 9 ಸದಸ್ಯರ ಸಿಡಿಸಿ ರಚನೆ

SDMC ಎಂದರೆ ಶಿಕ್ಷಣ ಇಲಾಖೆ ಹೇಗೆ ಮಾಡುತ್ತದೆ ಆ ಮಾದರಿಯಲ್ಲೇ ನಾವು ಮಾಡುತ್ತೇವೆ.

ತುಷಾರ್​​​ ಗಿರಿನಾಥ್​​, ಬಿಬಿಎಂಪಿ ಮುಖ್ಯ ಆಯುಕ್ತ

ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದ ಪಾಲಿಕೆ ನಡೆ ವಿರುದ್ಧ ತೀವೃ ಚರ್ಚೆ ಶುರುವಾಗಿತ್ತು. ಅದೆಷ್ಟೋ ಶಿಕ್ಷಕರು ಗೊಂದಲದಲ್ಲೇ ಕಾಲ ಕಳೆಯುವಂತಾಗಿತ್ತು. ಇದೀಗ ಜನಾಕ್ರೋಶದ ಬೆನ್ನಲ್ಲೇ ಈ ನಿರ್ಧಾರವನ್ನ ಕೈ ಬಿಟ್ಟ ಪಾಲಿಕೆ, ಸಮಿತಿ ಮೂಲಕ ಶಿಕ್ಷಕರ ನೇಮಕಾತಿ ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಸ್​ಫಸ್ಟ್​​ ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ; ಶಿಕ್ಷಕರು ಆಗಬೇಕು ಅನ್ನೋರಿಗೆ ಗುಡ್​ನ್ಯೂಸ್​​

https://newsfirstlive.com/wp-content/uploads/2024/06/TUSHAR_GIRINATHA.jpg

Load More