/newsfirstlive-kannada/media/post_attachments/wp-content/uploads/2024/09/darshan-10.jpg)
ದರ್ಶನ್ ಆ್ಯಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪ್ರಕರಣದ ಬಹುತೇಕ ತನಿಖೆ ಮುಕ್ತಾಯ ಆಗಿದೆ. ಕೊನೆ ಹಂತದ ಚಾರ್ಜ್ ಶೀಟ್ ಸಲ್ಲಿಕೆ ಮಾಡುವವರೆಗೆ ತನಿಖೆ ಮಾಡಲಾಗಿದೆ. ಇನ್ನು ಸ್ವಲ್ಪ ಕೆಲಸಗಳು ಬಾಕಿ ಇರೋ ಹಿನ್ನೆಲೆ, ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿದ ಅವರು, ತನಿಖೆ ವೇಳೆ ಯಾವ ಯಾವ ಆರೋಪಿ ವಿರುದ್ಧ ಏನು ಆರೋಪ ಇದೆ ಅದರ ಮೇಲೆ ಸೆಕ್ಷನ್​ಗಳನ್ನ ಆ್ಯಡ್ ಮಾಡಲಾಗಿದೆ. ಬೆಂಗಳೂರು FSLನಿಂದ ರಿಪೋರ್ಟ್ ಬಂದಿದೆ. ಹೈದ್ರಾಬಾದ್​​ನಿಂದ ಒಂದಷ್ಟು ರಿಪೋರ್ಟ್ ಬಂದಿದೆ. ಮತ್ತಷ್ಟು ರಿಪೋರ್ಟ್​​​ಗಳು ಬರಬೇಕಿದೆ ಎಂದು ಹೇಳಿದ್ದಾರೆ.
ಬಹುತೇಕ ತನಿಖೆಯ ಅಂಶಗಳನ್ನ ಚಾರ್ಜ್ ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ತನಿಖಾ ತಂಡ ತನಿಖೆ ಪೂರ್ಣವಾಗಿ ಮುಗಿಸಿದ್ದು, ಎಸ್​ಪಿಪಿಗೆ ಸ್ಕ್ರೂಟನಿಗೆ ನೀಡಲಾಗಿತ್ತು. ಅವರು ಕೆಲವು ವಿಚಾರಗಳ ಬಗ್ಗೆ ಗುರುತು ಮಾಡಿದ್ದಾರೆ. ಕೆಲವು ಕರೆಕ್ಷನ್​ಗಳು ಇವೆ. ಅದನ್ನು ಮಾಡಲಾಗುತ್ತಿದೆ. ಇನ್ನೆರಡು ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ಈಗ ಪ್ರಾಥಮಿಕ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂದು ಬಿ ದಯಾನಂದ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ