ಬಂಗಾರ ಪ್ರಿಯರೇ.. ಇಂದಿನ ಚಿನ್ನದ ಬೆಲೆ ಗಮನಿಸಲೇಬೇಕು.. ಯಾಕಂದ್ರೆ..

author-image
AS Harshith
Updated On
GOLD RATE: ಮತ್ತೆ ದುಬಾರಿ ಆಯ್ತು ಗುರೂ ಚಿನ್ನ! ಬೆಂಗಳೂರಿಗರೇ.. ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ? ​
Advertisment
  • ನಿನ್ನೆ ಮತ್ತು ಇಂದು ಚಿನ್ನದ ಬೆಲೆ ಎಷ್ಟಿತ್ತು ನೋಡೋಣ
  • ಇಂದು ಬೆಳ್ಳಿ ಬೆಲೆ ಎಷ್ಟಿದೆ? ಬೆಂಗಳೂರು ಮಾರುಕಟ್ಟೆ ಹೇಗಿದೆ?
  • ಹಬ್ಬದ ಸಮಯ 22 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆಯಾ?

ಭಾರತೀಯರು ಚಿನ್ನ ಪ್ರಿಯರು. ಬಂಗಾರವೆಂದರೆ ಸಾಕು ಅದರತ್ತ ಒಲವು ಜಾಸ್ತಿ ತೋರಿಸುತ್ತಾರೆ. ಅದರಲ್ಲೂ ಭಾರತೀಯ ಪ್ರತಿ ಫ್ಯಾಮಿಲಿಗಳಲ್ಲಿ ಬಂಗಾರಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಮದುವೆ, ಹಬ್ಬ ಹರಿದಿನಗಳಲ್ಲಿ ಚಿನ್ನವನ್ನು ಖರೀದಿಸುವವರೇ ಜಾಸ್ತಿ. ಅಂದಹಾಗೆಯೇ ಚಿನ್ನ ಕುಟುಂಬದ ಶ್ರೀಮಂತಿಕೆಯನ್ನು ತೋರಿಸುತ್ತದೆ.

ಬಂಗಾರದ ಬೆಲೆಯಲ್ಲಿ ಆಗಾಗ ಏರಿಳಿತಗಳು ಆಗುತ್ತಿರುತ್ತವೆ. ಯಾವಾಗ ಕಡಿಮೆಯಾಗುತ್ತೋ ಅಂದು ಖರೀದಿಸುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಆದರೆ ಹಬ್ಬ ಮತ್ತು ಮದುವೆ ಸೀಸನ್​​ಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ.

ಸದ್ಯ ಸಾಲು ಸಾಲು ಹಬ್ಬಗಳು ಬರುತ್ತಿವೆ. ಆದರೂ ಚಿನ್ನ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅಂದಹಾಗೆಯೇ ಈ ತಿಂಗಳು ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದಕ್ಕೆ ಕಾರಣ ಮುಂಬರುವ ಹಬ್ಬಗಳು ಎಂದು ಅಂದಾಜಿಸಲಾಗಿದೆ.

ಇನ್ನು ನಿನ್ನೆ ಮತ್ತು ಇಂದಿನ ಚಿನ್ನದ ಬೆಲೆಯನ್ನು ಗಮನಿಸುವುದಾದರೆ ಅಷ್ಟೇನು ವ್ಯತ್ಯಾಸವಿಲ್ಲ. ಆದರೆ ಕೃಷ್ಣಜನ್ಮಾಷ್ಟಮಿ ಹಬ್ಬದಂದು 1 ರೂಪಾಯಿ ಕಡಿತಗೊಂಡಿತ್ತು. ಇಂದು ಕೂಡ ಅದೇ ಬೆಲೆಯಲ್ಲಿದೆ.

22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,694 ಇದೆ.

22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 66,940 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7303 ಆಗಿದೆ.

24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 73,030 ಇದೆ.

publive-image

ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 14 OTT ಸೇವೆ ಸಂಪೂರ್ಣ ಉಚಿತ! 154 ರೂಪಾಯಿಯ ಪ್ಲಾನ್​ನಲ್ಲಿ ಇಷ್ಟೆಲ್ಲಾ ಸಿಗುತ್ತಾ?

ಬೆಳ್ಳಿಯ ಬೆಲೆ ಎಷ್ಟಿದೆ?

ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 87.80 ಇದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 87,800 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment