ಮಹಿಳೆ ದೇಹದ 28 ಭಾಗಗಳನ್ನ ಪತ್ತೆ ಹಚ್ಚಿರುವ ಪೊಲೀಸರು
ದೇಹದ ಭಾಗಗಳ ಅಳತೆ, ಮೂಳೆ ಸ್ಯಾಂಪಲ್ ಪಡೆದು ರವಾನೆ
ಮರಣೋತ್ತರ ಪರೀಕ್ಷೆ ನಡೆಸಲು ಬೌರಿಂಗ್ ಆಸ್ಪತ್ರೆಗೆ ರವಾನೆ
ನವದೆಹಲಿಯಲ್ಲಿ ಶ್ರದ್ಧಾ ವಾಕರ್ ರಣಭೀಕರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನಿನ್ನೆ ರಾಜ್ಯ ರಾಜಧಾನಿಯಲ್ಲೂ ಅಂಥದ್ದೇ ಮಾದರಿಯ ಹತ್ಯೆ ನಡೆದಿದೆ. ವೈಯಾಲಿಕಾವಲ್ನ ಮಹಿಳೆಯ ದೇಹವನ್ನ ಪೀಸ್ ಪೀಸ್ ಮಾಡಿ ಕೊಂದು ಫ್ರಿಡ್ಜ್‌ನಲ್ಲಿ ಇಟ್ಟಿರೋ ಘೋರ ಹತ್ಯೆ ನಡೆದಿದೆ. ಕೊಲೆ ಮಾಡಿರೋ ಹಂತಕ ಎಸ್ಕೇಪ್ ಅಗಲು ಮಾಸ್ಟರ್ ಫ್ಲಾನ್ ಮಾಡಿರೋದು ಬೆಳಕಿಗೆ ಬಂದಿದೆ. ಕ್ರೂರ ಹಂತಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: 32 ಪೀಸ್.. ವೈಯಾಲಿಕಾವಲ್ ಮಹಿಳೆ ಕೇಸ್‌ಗೆ ಹೊಸ ಟ್ವಿಸ್ಟ್; ಕೊ*ಲೆಗಾರ ಯಾರು? ಸ್ಫೋಟಕ ಸುಳಿವು ಪತ್ತೆ!
ರಾಜಧಾನಿ ಬೆಂಗಳೂರಿನಲ್ಲೂ ದೆಹಲಿಯ ಶ್ರದ್ಧಾ ಮಾದರಿಯಲ್ಲಿ ಘನಘೋರ ಹತ್ಯೆ ನಡೆದಿದೆ. ವೈಯಾಲಿಕಾವಲ್ ಬಳಿಯ ಮುನೇಶ್ವರ ಬ್ಲಾಕ್ನ ಮನೆಯೊಂದರಲ್ಲಿ ಮಹಿಳೆಯನ್ನು ಕೊಲೆಗೈದು ದೇಹವನ್ನು 32 ಭಾಗಗಳಾಗಿ ಕತ್ತರಿಸಿ 165 ಲೀಟರ್ನ ದೊಡ್ಡ ಫ್ರಿಡ್ಜ್ನಲ್ಲಿಟ್ಟು ಕಿರಾತಕ ಎಸ್ಕೇಪ್ ಆಗಿದ್ದಾನೆ. ಕಳೆದ 20 ದಿನಗಳ ಹಿಂದೆಯೇ ಘಟನೆ ನಡೆದಿದೆ ಎನ್ನಲಾಗಿದೆ. ಈಗ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮಹಾಲಕ್ಷ್ಮೀ ದೇಹದ ಹಲವು ಭಾಗಗಳು ಪತ್ತೆಯಾಗಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಹಾಲಕ್ಷ್ಮೀ ಎಂಬ ಮಹಿಳೆಯನ್ನ ಕೊಂದಿರೋ ಹಂತಕ 32 ಪೀಸ್ ಮಾಡಿ ಫ್ರಿಡ್ಜ್‌ಗಿಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಮಹಿಳೆ ದೇಹದ ಒಟ್ಟು 28 ಭಾಗಗಳನ್ನ ಪೊಲೀಸರು ಪತ್ತೆಹಚ್ಚಿದ್ದಾರೆ. ದೇಹದ ಭಾಗಗಳ ಅಳತೆ, ಮೂಳೆ ಸ್ಯಾಂಪಲ್ ಪಡೆದು ಮರಣೋತ್ತರ ಪರೀಕ್ಷೆ ನಡೆಸಲು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಇನ್ನೂ ಮಹಾಲಕ್ಷ್ಮೀಯನ್ನ ಕೊಂದಿದ್ದ ಹಂತಕ ಫ್ರಿಡ್ಜ್‌ನಲ್ಲಿ ಇಟ್ಟು ಆನ್ ಮಾಡಿ ಎಸ್ಕೇಪ್ ಆಗಿದ್ದ. ಇದಾದ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದೇಗೆ ಅಂತ ನೀವು ಓದಿದರೇ ಶಾಕ್ ಆಗ್ತೀರಾ.
ಕೊಲೆ ಬಯಲಿಗೆ ಬಂದಿದ್ದೇಗೆ?
ಮಹಾಲಕ್ಷ್ಮಿಯನ್ನ ಕೊಂದು ಕ್ರೂರ ಹಂತಕ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ದೇಹದ ಪೀಸ್ಗಳನ್ನ ನೀಟಾಗಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ. ಫ್ರಿಡ್ಜ್ ಆನ್ ಇದ್ದ ಕಾರಣ ದೇಹದ ಭಾಗಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಕರೆಂಟ್ ಹೋದ ವೇಳೆ ಒಂದಷ್ಟು ರಕ್ತ ಫ್ರಿಡ್ಜ್ನಿಂದ ಕೆಳಗೆ ಸೋರಿದೆ. ರಕ್ತ ಸೋರಿದ ಬಳಿಕ ಹುಳ ಆಗಿ ವಾಸನೆ ಬರೋಕೆ ಶುರು ಆಗಿದ್ದು, ಬಳಿಕ ಕೊಲೆ ಪ್ರಕರಣ ಬಯಲಾಗಿದೆ. ಮಹಾಲಕ್ಷ್ಮೀ ಕೊಲೆಗೈದಿರೋ ಕೊಲೆಗಾರ ಯಾರು ಅನ್ನೋದು ಸದ್ಯ ಪತ್ತೆಯಾಗಿಲ್ಲ. ಆಕೆಯ ಮೊಬೈಲ್‌ಗೆ ಬಂದಿರೋ ಕರೆಗಳ ಡಿಟೇಲ್ ಪಡೆದು ಪೊಲೀಸರು ಕೆಲವರನ್ನ ವಿಚಾರಣೆ ಮಾಡ್ತಿದ್ದಾರೆ. ಅಲ್ಲದೇ ಕೊಲೆಗಾರನ ಬಂಧನಕ್ಕೆ ಎಂಟು ಪೊಲೀಸರ ತಂಡ ರಚನೆ ಮಾಡಲಾಗಿದೆ. ವೈಯಾಲಿ ಕಾವಲ್, ಶೇಷಾದ್ರಿಪುರಂ, ಹೈಗ್ರೌಂ ಡ್ಸ್ ಠಾಣೆ ಸಿಬ್ಬಂದಿ ತನಿಖೆಗೆ ಇಳಿದಿದ್ದಾರೆ.
ಸದ್ಯ ಪ್ರಾಥಮಿಕ ಮಾಹಿತಿ ಪಡೆದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಅನೈತಿಕ ಸಂಬಂಧದಿಂದ ಕೊಲೆ ನಡೆದಿರಬಹುದು ಎಂಬ ಶಂಕೆಯಿದೆ. ಆದ್ರೆ, ಸಂಪೂರ್ಣ ತನಿಖೆ ಬಳಿಕವಷ್ಟೇ ಮರ್ಡರ್ ಮಿಸ್ಟ್ರಿ ಬಯಲಾಗಬೇಕಿದೆ. ಅದೇನೇ ಇರಲಿ, ಇಷ್ಟು ದಿನ ದೂರದ ದೆಹಲಿ, ಉತ್ತರ ಪ್ರದೇಶಗಳಲ್ಲಿ ಇಂತಹ ಹತ್ಯೆಗಳು ನಡೀತಾ ಇದ್ವು. ಆದ್ರೀಗ ರಾಜ್ಯದಲ್ಲೇ ಬೆಚ್ಚಿ ಬೀಳಿಸುವ ಹತ್ಯೆ ನಡೆದಿದ್ದು ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿರೋದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ